ಲಾಕ್​ಡೌನ್ ವೇಳೆ ಮದ್ಯಕ್ಕೆ ಬರ, ಡಬಲ್ ಮರ್ಡರ್​ಗೆ ಅದೇ ಕಾರಣವಾಯ್ತಾ?

|

Updated on: Apr 16, 2020 | 2:51 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದಾಗಿ ಮದ್ಯಪ್ರಿಯರು ಕಂಗಾಲಾಗಿದ್ದಾರೆ. ಸ್ಪಲ್ಪ ಎಣ್ಣೆ ಸಿಕ್ಕುದ್ರೆ ಸಾಕಪ್ಪ ಎಂದು ಪರಿತಪಿಸುತ್ತಿದ್ದಾರೆ. ಇದೇ ನೆಪದಲ್ಲಿ ಮದ್ಯದ ಆಮಿಷವೊಡ್ಡಿ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 13ರ ರಾತ್ರಿ ಮದ್ಯ ಕೊಡಿಸುವುದಾಗಿ ಕರೆಸಿಕೊಂಡು ಡಬಲ್ ಮರ್ಡರ್ ಮಾಡಿದ್ದಾರೆ. ಮದ್ಯ ಕೊಡಿಸವುದಾಗಿ ಮನೋಜ್ ಎಂಬಾತ ಮುಕುಂದನನ್ನು ಕರೆಸಿಕೊಂಡಿದ್ದಾನೆ. ಇಬ್ಬರೂ ಬನಶಂಕರಿಯಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸಾಲದಿದ್ದಕ್ಕೆ ಸುಬ್ರಹ್ಮಣ್ಯಪುರದಲ್ಲಿ ಮದ್ಯ ಇದೆ ಎಂದು ಮನೋಜ್ ಮುಕುಂದನನ್ನು ಸಪ್ತಗಿರಿ ಲೇಔಟ್‌ನ ತೆಂಗಿನ […]

ಲಾಕ್​ಡೌನ್ ವೇಳೆ ಮದ್ಯಕ್ಕೆ ಬರ, ಡಬಲ್ ಮರ್ಡರ್​ಗೆ ಅದೇ ಕಾರಣವಾಯ್ತಾ?
Follow us on

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದಾಗಿ ಮದ್ಯಪ್ರಿಯರು ಕಂಗಾಲಾಗಿದ್ದಾರೆ. ಸ್ಪಲ್ಪ ಎಣ್ಣೆ ಸಿಕ್ಕುದ್ರೆ ಸಾಕಪ್ಪ ಎಂದು ಪರಿತಪಿಸುತ್ತಿದ್ದಾರೆ. ಇದೇ ನೆಪದಲ್ಲಿ ಮದ್ಯದ ಆಮಿಷವೊಡ್ಡಿ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏಪ್ರಿಲ್ 13ರ ರಾತ್ರಿ ಮದ್ಯ ಕೊಡಿಸುವುದಾಗಿ ಕರೆಸಿಕೊಂಡು ಡಬಲ್ ಮರ್ಡರ್ ಮಾಡಿದ್ದಾರೆ. ಮದ್ಯ ಕೊಡಿಸವುದಾಗಿ ಮನೋಜ್ ಎಂಬಾತ ಮುಕುಂದನನ್ನು ಕರೆಸಿಕೊಂಡಿದ್ದಾನೆ. ಇಬ್ಬರೂ ಬನಶಂಕರಿಯಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸಾಲದಿದ್ದಕ್ಕೆ ಸುಬ್ರಹ್ಮಣ್ಯಪುರದಲ್ಲಿ ಮದ್ಯ ಇದೆ ಎಂದು ಮನೋಜ್ ಮುಕುಂದನನ್ನು ಸಪ್ತಗಿರಿ ಲೇಔಟ್‌ನ ತೆಂಗಿನ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ಹೊಂಚುಹಾಕಿ ಕಾಯುತ್ತಿದ್ದ ರೌಡಿಶೀಟರ್‌ಗಳಾದ ರಜತ್, ಸಂಜಯ್ ಏಕಾಏಕಿ ದಾಳಿ ನಡೆಸಿದ್ದಾರೆ. ಮುಕುಂದನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿದ್ದಾರೆ. ಹಲ್ಲೆ ನಡೆಸುವ ಭರದಲ್ಲಿ ಮನೋಜ್‌ ಮೇಲೂ ದಾಳಿ ನಡೆದಿದೆ. ಘಟನೆಯಲ್ಲಿ ಮುಕುಂದ, ಮನೋಜ್ ಇಬ್ಬರು ಮೃತಪಟ್ಟಿದ್ದಾರೆ. ಈ ರೌಡಿಶೀಟರ್‌ ಗ್ಯಾಂಗ್ ಒಂದೇ ಬಾರಿ ಗುರು-ಶಿಷ್ಯನನ್ನು ಕೊಂದುಮುಗಿಸಿದ್ದಾರೆ.