AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಮಹಡಿಯಿಂದ 7 ವರ್ಷದ ಮಗಳನ್ನು ತಳ್ಳಿ ಕೊಂದ ತಾಯಿ; ಹೈದರಾಬಾದ್​​ನಲ್ಲೊಂದು ಶಾಕಿಂಗ್ ಘಟನೆ!

'ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ' ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಆದರೆ, ಇಂದಿನ ಕಲಿಯುಗದಲ್ಲಿ ಯಾವ ಸಂಬಂಧವೂ ಶಾಶ್ವತವಲ್ಲ, ನಂಬಿಕೆಗೆ ಅರ್ಹವೂ ಅಲ್ಲ. ಹೈದರಾಬಾದ್​​ನಲ್ಲಿ ಓರ್ವ ಮಹಿಳೆ ತಾನೇ ಹೆತ್ತ ಮಗಳನ್ನು ಮನೆಯ ಮೂರನೇ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ತೀವ್ರ ಚರ್ಚೆಗೂ ಕಾರಣವಾಗಿದೆ.

3ನೇ ಮಹಡಿಯಿಂದ 7 ವರ್ಷದ ಮಗಳನ್ನು ತಳ್ಳಿ ಕೊಂದ ತಾಯಿ; ಹೈದರಾಬಾದ್​​ನಲ್ಲೊಂದು ಶಾಕಿಂಗ್ ಘಟನೆ!
Representative Image
ಸುಷ್ಮಾ ಚಕ್ರೆ
|

Updated on: Dec 16, 2025 | 7:38 PM

Share

ಹೈದರಾಬಾದ್, ಡಿಸೆಂಬರ್ 16: ಹೈದರಾಬಾದ್‌ನಲ್ಲಿ (Hyderabad) ಹೆತ್ತ ತಾಯಿಯೇ ಮಗಳ ಪಾಲಿಗೆ ಕಂಟಕವಾಗಿದ್ದಾಳೆ. ತಾಯಿ ತನ್ನ ಮಕ್ಕಳಿಗಾಗಿ ಎಂತಹ ತ್ಯಾಗ ಬೇಕಾದರೂ ಮಾಡುತ್ತಾಳೆ. ಆದರೆ, ಈ ಮಹಿಳೆ ಕಟ್ಟಡದ 3ನೇ ಮಹಡಿಯಿಂದ ತನ್ನ 7 ಮಗಳನ್ನು ತಳ್ಳಿ ಕೊಂದಿದ್ದಾಳೆ. ಅಪಾರ್ಟ್​​ಮೆಂಟ್​ ಒಂದರಲ್ಲಿ ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಮಗು ತೀವ್ರವಾಗಿ ಗಾಯಗೊಂಡಿತ್ತು. ಆಕೆಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆ ಮಗು ಸಾವನ್ನಪ್ಪಿದೆ.

ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ಮಲ್ಕಜ್‌ಗಿರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಸಂತಪುರಿ ಕಾಲೋನಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಮೊನಾಲಿಸಾ ಎಂಬ ಮಹಿಳೆ ತನ್ನ ಮಗಳು ಶರೋನ್ ಮೇರಿಯನ್ನು ಮೇಲಿನಿಂದ ಕೆಳಗೆ ತಳ್ಳಿದ್ದಾಳೆ. ಈ ವೇಳೆ ಆ ಮಗು ಪಕ್ಕದ ಕಟ್ಟಡದ ಮೆಟ್ಟಿಲುಗಳ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು.

ಇದನ್ನೂ ಓದಿ: ಕಳ್ಳರ ಕರಾಮತ್ತಿಗೆ ಸ್ವಂತ ಸೂರಿನ ಕನಸು ಕಂಡಿದ್ದ ಕುಟುಂಬ ಕಂಗಾಲು: ಮನೆ ಬಾಗಿಲು ಮುರಿದು ಚಿನ್ನ, ಹಣ ದರೋಡೆ

ತಕ್ಷಣ ಆಕೆಯನ್ನು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆಕೆಯ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ, ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಮೊನಾಲಿಸಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ಇನ್ನೂ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಲಿಫ್ಟ್​ ಕೊಡ್ತೀನಿ ಎಂದು ಕಾರು ಹತ್ತಿಸಿಕೊಂಡು ಕೊಂದೇ ಬಿಟ್ಟ, ದೇಹ ಒಳಗಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ್ರೂ ಸಿಕ್ಕಿಬಿದ್ದ

ಪೊಲೀಸರ ಪ್ರಕಾರ, ಮೊನಾಲಿಸಾಳ ಕುಟುಂಬವು ಕಳೆದ 20 ವರ್ಷಗಳಿಂದ ವಸಂತಪುರಿ ಕಾಲೋನಿಯಲ್ಲಿ ವಾಸಿಸುತ್ತಿದೆ. ಮೊನಾಲಿಸಾ ಅವರ ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಗಂಡ ಮನೆಯಲ್ಲಿ ಇಲ್ಲದಿದ್ದಾಗ ನಿನ್ನೆ ಸಂಜೆ ಆಕೆ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ