ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ಬಾಮೈದನನ್ನ ಕರೆತಂದ ಬಾವ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಕೊಲೆ ಮಾಡಿ ತನ್ನ ಬಾಮೈದನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾನೆ. ಬಳಿಕ ಪೊಲೀಸರಿಗೆ ಹೋಗಿ ಶರಣಾಗಿದ್ದಾನೆ. ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?
ರಂಜಿತ್, ಶ್ರೀನಿವಾಸ್
Image Credit source: tv9 kannada
Edited By:

Updated on: Mar 26, 2026 | 9:34 PM

ಆನೇಕಲ್​, ಮಾರ್ಚ್​ 26: ಬಾವನಿಂದ ಬಾಮೈದನ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಶ್ರೀನಿವಾಸ್​​ನಿಂದ ರಂಜಿತ್ (24)ನ ಕೊಲೆ (kill) ಮಾಡಲಾಗಿದೆ. ಆಸಾಮಿ ಕೊಲೆ ಮಾಡಿದಲ್ಲದೇ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದೇನು?

ರಂಜಿತ್​ನ ಸ್ವಂತ ಅಕ್ಕ ಪವಿತ್ರರನ್ನು ಶ್ರೀನಿವಾಸ್​​ ಮದುವೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ತಂಗಿ ಕೋಮಲ್​ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್​​ನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗಂಡನನ್ನ ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಶ್ರೀನಿವಾಸ್​​ ರಂಜಿತ್​​​​ನ ಕರೆದು ವಾರ್ನಿಂಗ್ ಕೂಡ ಮಾಡಿದ್ದ. ಇದೆಲ್ಲದರಿಂದ ಕೋಪಗೊಂಡ ಶ್ರೀನಿವಾಸ್ ರಂಜಿತ್​ ಮೇಲೆ ಸೇಡು ಬೆಳೆಸಿಕೊಂಡಿದ್ದ. ಇಂದು ಸಂಜೆ ವೇಳೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ರಂಜಿತ್​ನನ್ನು ಕರೆತಂದಿದ್ದ ಶ್ರೀನಿವಾಸ್​​ ಕೊಲೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರಿಂದ ಆರೋಪಿ‌ ಶ್ರೀನಿವಾಸನನ್ನು ವಶಕ್ಕೆ ಪಡೆಯಲಾಗಿದೆ.

ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಹೇಳಿದ್ದಿಷ್ಟು

ಘಟನಾ ಸ್ಥಳಕ್ಕೆ ಡಿವೈಎಸ್​​ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್​ ಮಾಹಿತಿ ನೀಡಿದ್ದು, ಸೋಕೋ ಟೀಮ್​ನಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮೃತದೇಹದ ಜೊತೆ ಕಬ್ಬಿಣದ ರಾಡ್ ಪತ್ತೆ ಆಗಿದೆ ಎಂದರು.

ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಕೊಲೆ ಬಳಿಕ ಮೃತದೇಹ ಕಾರಿನ ಡಿಕ್ಕಿಗೆ ಹಾಕಲಾಗಿದೆ. ರಂಜಿತ್​​ನ ಕೊಲೆ ಮಾಡಿದ ಶ್ರೀನಿವಾಸ್​​ ನೇರವಾಗಿ ಬನ್ನೇರುಘಟ್ಟ ಠಾಣೆಗೆ ಬಂದಿದ್ದಾನೆ ಎಂದು ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್​ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us