ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಬೆಂಗಳೂರಿನ ಪೀಣ್ಯದ ಹೆಚ್‌ಎಂಟಿ ಲೇಔಟ್‌ನಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧವೇ ಈ ಘಟನೆಗೆ ಕಾರಣ. ಸದ್ಯ ಸ್ಥಳಕ್ಕೆ ಡಿಸಿಪಿ ನಾಗೇಶ್ ಮತ್ತು ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ.

ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ
ಪ್ರಾತಿನಿಧಿಕ ಚಿತ್ರ
Image Credit source: ndtv
Edited By:

Updated on: Mar 26, 2026 | 3:07 PM

ಬೆಂಗಳೂರು, ಮಾರ್ಚ್​ 26: ಪೀಣ್ಯದ ಹೆಚ್​ಎಂಟಿ ಲೇಔಟ್‌ನ​ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್​​ (murder) ನಡೆದಿರುವಂತಹ ಘಟನೆ ನಡೆದಿದೆ. ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ ಮತ್ತು ತಮ್ಮನನ್ನ ಹತ್ಯೆ ಮಾಡಲಾಗಿದೆ. ಯಮುನಾ(36) ಮತ್ತು ಸುದೀಪ್(34) ಕೊಲೆಯಾದವರು. ಸ್ಥಳಕ್ಕೆ ಡಿಸಿಪಿ ನಾಗೇಶ್, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ನಡೆದಿದ್ದೇನು?

ಆರೋಪಿ ತಾಯಿ ಛಾಯಾ ಹಾಗೂ ಯುಮುನಾ ಗಂಡನ ಮಧ್ಯೆ ಅಕ್ರಮ ಸಂಬಂಧ ಹಿನ್ನೆಲೆ ಇದನ್ನು ಪ್ರಶ್ನಿಸಲು ಛಾಯಾ ಮನೆಗೆ ಬಂದಿದ್ದ ಯಮುನಾ ಮತ್ತು ತಮ್ಮ ಸುದೀಪ್ ಜಗಳವಾಡುತ್ತಿದ್ದರು. ಈ ವೇಳೆ ಜಗಳದ ಮಧ್ಯೆ ಎಂಟ್ರಿಯಾದ ಛಾಯಾ ಪುತ್ರ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದಾನೆ.

ಅಪ್ರಾಪ್ತ ಬಾಲಕ ಇಬ್ಬರಿಗೂ ಹತ್ತಾರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.

ಮಟ ಮಟ ಮಧ್ಯಾಹ್ನವೇ ನಡುರಸ್ತೆಯಲ್ಲಿ ಪತ್ನಿ ಕತ್ತು ಕೊಯ್ದ ಪತಿ

ಮಟ ಮಟ ಮಧ್ಯಾಹ್ನವೇ ನಡುರಸ್ತೆಯಲ್ಲಿ ಪತ್ನಿ ಕತ್ತು ಕೊಯ್ದ ಪತಿ ಕೊಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಬಳ್ಳೂರ್ಗಿ ಬಳಿ ಭೀಕರ ಹತ್ಯೆ ನಡೆದಿದೆ. ಪತಿ ಅಕ್ಷಯ್‌ನಿಂದ ಪತ್ನಿ ಶೈಲಾ (28)ರನ್ನ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಧಾರವಾಡದ ಮಾಜಿ ಶಾಸಕನ ಪುತ್ರನ ಸಾವಿಗೆ ಬಿಗ್ ಟ್ವಿಸ್ಟ್! ಮಹಿಳೆಯೊಂದಿಗಿನ ಅಕ್ರಮ ಸಂಬಂಧಕ್ಕೆ ನಡೀತಾ ಕೊಲೆ?

ಕೊಲೆಯಾದ ಮಹಿಳೆ ಮಹಾರಾಷ್ಟ್ರ ಮೂಲದವರು. ಸ್ಥಳಕ್ಕೆ ಕಾರಿನಲ್ಲಿ ಪತ್ನಿಯನ್ನ ಕರೆದುಕೊಂಡು ಬಂದಿದ್ದ ಪತಿ ಬಳಿಕ ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ಕೊಲೆ ಮಾಡಿದ್ದಾರೆ. ಪತ್ನಿಯ ಕತ್ತು ಕೊಯುತ್ತಿರುವ ದೃಶ್ಯ ಸ್ಥಳಿಯರೊಬ್ಬರ ಮೊಬೈಲ್‌ನಲ್ಲಿ ಸೆರೆ ಆಗಿದೆ.

ಟೆಂಪೊ ಟ್ರಾವೆಲರ್ಸ್‌‌ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಮಹಿಳೆ ಸಾವು

ಟೆಂಪೊ ಟ್ರಾವೆಲರ್ಸ್‌‌ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಮಾದಿನಾಳ ಕ್ರಾಸ್ ಬಳಿ ಈ ದುರಂತ ನಡೆದಿದೆ. ಟೆಂಪೊ ಟ್ರಾವೆಲರ್ಸ್​ನಲ್ಲಿದ್ದ ಕಸ್ತೂರಿಬಾಯಿ ಕೃಷ್ಣ ರಾಠೋಡ(50) ಮೃತ ಮಹಿಳೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು?

ಕಸ್ತೂರಿಬಾಯಿಯನ್ನು ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಕಾರು ಪಲ್ಟಿಯಾಗಿದೆ. ಇನ್ನು ಘಟನೆಯಲ್ಲಿ ಚಲಮಿ ತಾಂಡಾದ ಸಂಜಯ ಸುರಪುರ ಹಾಗೂ ಗುರಪ್ಪ ಚೌವ್ಹಾನ್ ಇವರಿಗೆ ಗಾಯಗಳಾಗಿದ್ದು, ಮುದ್ದೇಬಿಹಾಳ ತಾಲ್ಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Thu, 26 March 26

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us