ಬೆಂಗಳೂರು: 6 ಲಕ್ಷ ರೂ ಹಣ ಅಡ್ವಾನ್ಸ್ ಕೊಟ್ಟಿದ್ದ ಮಾಲೀಕನನ್ನೇ ಹತ್ಯೆಗೈದ ತಂದೆ-ಮಗ
ಬೆಂಗಳೂರಿನ ಕಡಬಗೆರೆ ಕ್ರಾಸ್‌ನಲ್ಲಿರುವ ಆರ್.ಆರ್. ಇಂಡಸ್ಟ್ರೀಸ್ ಮಾಲೀಕನನ್ನು ತಂದೆ-ಮಗ ಹತ್ಯೆಗೈದಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೀಕ ಅವರಿಗೆ 6 ಲಕ್ಷ ರೂ ಅಡ್ವಾನ್ಸ್ ನೀಡಿದ್ದರೂ, ಕೆಲಸ ಮಾಡದೆ ಬೆದರಿಕೆ ಹಾಕುತ್ತಿದ್ದರು. ಇಂದು ಮಧ್ಯಾಹ್ನ ಜಗಳ ನಡೆದಿದ್ದು, ಈ ವೇಳೆ ಕೊಲೆ ಮಾಡಲಾಗಿದೆ.

ಬೆಂಗಳೂರು, ಮಾರ್ಚ್ 23: ಅಡ್ವಾನ್ಸ್ ಹಣ ಕೊಟ್ಟಿದ್ದ ಮಾಲೀಕನನ್ನೇ ತಂದೆ-ಮಗ (father-son) ಹತ್ಯೆಗೈದಿರುವಂತಹ (death) ಘಟನೆ ಕಡಬಗೆರೆ ಕ್ರಾಸ್ನ ಆರ್.ಆರ್.ಇಂಡಸ್ಟ್ರೀಸ್ನಲ್ಲಿ ನಡೆದಿದೆ. ರಮೇಶ್ ಕೊಲೆಯಾದ ಆರ್.ಆರ್.ಇಂಡಸ್ಟ್ರೀಸ್ ಮಾಲೀಕ. ಸೈಯದ್ ತಾಜುದ್ದೀನ್(50) ಮತ್ತು ಸೈಯದ್ ಅಯೂಬ್ ಬಂಧಿತರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಬಳಿ ಇಬ್ಬರು ಕೆಲಸಗಾರರು 6 ಲಕ್ಷ ರೂ ಅಡ್ವಾನ್ಸ್ ಪಡೆದಿದ್ದರು. ಆದರೆ ಸರಿಯಾಗಿ ಕೆಲಸಕ್ಕೆ ಬಾರದೆ ಸತಾಯಿಸುತ್ತಿದ್ದರು. ಇಬ್ಬರು ಕೂಡ ಕೆಲಸ ಮಾಡದೆ ರಮೇಶ್ನಿಗೆ ಬೆದರಿಕೆ ಹಾಕುತ್ತಿದ್ದರು. ಇಂದು ಮಧ್ಯಾಹ್ನ ಮಾಲೀಕ ರಮೇಶ್ ಜೊತೆಗೆ ಗಲಾಟೆಯಾಗಿದೆ. ಈ ವೇಳೆ ತಂದೆ-ಮಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಲವರ್ ಜೊತೆಗಿದ್ದಾಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನ ಬರ್ಬರ ಕೊಲೆ
ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನ ಬರ್ಬರ ಕೊಲೆ ಮಾಡಿರುವಂತಹ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಮಾರಿಕುಪ್ಪಂ ಬಳಿ ನಡೆದಿದೆ. ಮಾರಿಕುಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್ ಅಲಿಯಾಸ್ ತೇನ್ ಕೊಲೆಯಾದ ರೌಡಿಶೀಟರ್.
ಇದನ್ನೂ ಓದಿ: ಯಾದಗಿರಿ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ
ಲವರ್ ಜೊತೆ ಕಾಮಸಮುದ್ರಕ್ಕೆ ಹೋಗುವಾಗ ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳಿಂದ ಕೊಲೆ ಮಾಡಲಾಗಿದೆ. ಲವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲೆಯಾದ ಶಿವಕುಮಾರ್ ಆ್ಯಂಡರ್ಸನ್ ಪೇಟೆ ಠಾಣೆಯ ರೌಡಿಶೀಟರ್. ಶಿವಕುಮಾರ್ ವಿರುದ್ಧ ಮೂರು ಕೊಲೆ ಯತ್ನ, ಹಲ್ಲೆ ಪ್ರಕರಣಗಳಿದ್ದವು. ಕೊಲೆಗೈದು ಪರಾರಿಯಾಗಿರುವ ಹಂತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿಡಿಲು ಬಡಿದು 65 ವರ್ಷದ ವೃದ್ಧೆ ಸಾವು
ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು 65 ವರ್ಷದ ವೃದ್ಧೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ಮೂಲದ ನಾಗಮ್ಮ ಮೃತ ದುರ್ದೈವಿ. ಮಗಳ ಹೊಲದಲ್ಲಿ ಶುಂಠಿ ನಾಟಿ ಮಾಡಲು ನಾಗಮ್ಮ ಬಂದಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
9 ಜನ ನಿಧಿಗಳ್ಳರ ಬಂಧನ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಿಭೂತಿಗುಡ್ಡದಲ್ಲಿ ನಿಧಿಗಳ್ಳತನಕ್ಕೆ ಸಂಚು ರೂಪಿಸಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮೂಲದ ನಿಧಿಗಳ್ಳರ ಬಂಧನವಾಗಿದೆ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಸಣ್ಣಪ್ಪ, ತಿಮ್ಮರಾಜು, ಮೈಲಾರಪ್ಪ, ರಾಮಾಂಜನೇಯಪ್ಪ, ವೆಂಕಟೇಶ್, ರವಿ, ಶ್ರೀನಿವಾಸಲು, ಆನಂದ್, ಮಂಜುನಾಥ ಬಂಧಿತರು. ಇನೋವಾ ಕಾರು, ಜನರೇಟರ್, ಡ್ರಿಲ್ಲಿಂಗ್ ಮಷಿನ್ ಸೇರಿ ನಿಧಿಗಳ್ಳತನಕ್ಕೆ ಬಳಸಿದ್ದ ಸಾಮಗ್ರಿ ಜಪ್ತಿ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 pm, Sun, 23 March 25