Bengaluru News: ಸೈಕೋ ಕಿಲ್ಲರ್ನ ಬಂಧನ, ಒಂಟಿ ಸೆಕ್ಯುರಿಟಿ ಗಾರ್ಡ್ಗಳೇ ಈತನ ಟಾರ್ಗೆಟ್
ಆರ್.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿದ್ದ ಸೈಕೋ ಕಿಲ್ಲರ್ನನ್ನು ಆರ್. ಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಒಂಟಿ ಸೆಕ್ಯುರಿಟಿ ಗಾರ್ಡ್ಗಳನ್ನು (Security Guard) ಹುಡುಕಿ ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್ನನ್ನು (Psycho killer) ಆರ್. ಟಿ ನಗರ ಪೊಲೀಸರು ಬಂಧಿಸಿದ್ದಾರೆ. ತೌಸೀಪ್ ಕೊಲೆ ಆರೋಪಿ. ಆರೋಪಿ ತೌಸೀಪ್ ವಿಚಿತ್ರ ಸೈಕೋಪಾತ್ ಆಗಿದ್ದು ಹಲವು ಪೋಲಿಸ್ ಠಾಣೆಗಳಿಗೆ ಬೇಕಾಗಿದ್ದನು. ಮಧ್ಯರಾತ್ರಿ ಕಂಠಪೂರ್ತಿ ಕುಡಿದು, ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಬರುವ ಈತ ನಸುಕಿನ ಜಾವ ಎರಡಿಂದ ಮೂರು ಗಂಟೆ ಅವಧಿಯಲ್ಲಿ ಒಂಟಿ ಸೆಕ್ಯುರಿಟಿ ಗಾರ್ಡ್ಗಳನ್ನು ಹುಡುಕಿ ಕೊಲ್ಲುತ್ತಿದ್ದನು.
ಈತ ಈಗಾಗಲೇ ಆರ್.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದಿದ್ದನು.
ಇದನ್ನೂ ಓದಿ: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚನೆ; ಕೊಟ್ಟ ದುಡ್ಡು ವಾಪಾಸ್ ಕೇಳಲು ಬಂದಾಕೆಯನ್ನೇ ಕಿಡ್ನಾಪ್ಗೆ ಯತ್ನ
ಈತ ಸದಾ ಸೊಲ್ಯುಶನ್ ಹಾಗೂ ಡ್ಯಾಗರ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗುತ್ತಿದ್ದನು. ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಈ ಹಿನ್ನೆಲೆ ಮೂರು ದಿನಗಳ ಕಾಲ ಹಗಲು ರಾತ್ರಿ ಪೊಲೀಸರು ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್.ಟಿ ನಗರ 80 FT ರೋಡ್ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ