ಚೆಕ್ಬೌನ್ಸ್ ಕೇಸ್ನಲ್ಲಿ ಬಿಜೆಪಿ ಮುಖಂಡ ರಂಗಧಾಮಯ್ಯ ಬಂಧನ
ಅಸೆಡ್ಜ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಭೂಮಿ ನೀಡುವುದಾಗಿ ಹಣ ಪಡೆದು ಬಳಿಕ ಹಣ ವಾಪಸ್ ನೀಡದೆ ಚೆಕ್ ವಿತರಣೆ ಮಾಡಿ ವಂಚನೆ ಮಾಡಿದ್ದ ಕೇಸ್ನಲ್ಲಿ ಬಿಜೆಪಿ ಮುಖಂಡ ರಂಗಧಾಮಯ್ಯರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಹಿನ್ನಲೆ ರಂಗಧಾಮಯ್ಯ ತಲೆಮರೆಸಿಕೊಂಡಿದ್ದರು.
ನೆಲಮಂಗಲ, ನವೆಂಬರ್ 21: ಚೆಕ್ಬೌನ್ಸ್ ಕೇಸ್ನಲ್ಲಿ ಬಿಜೆಪಿ (bjp) ಮುಖಂಡ ರಂಗಧಾಮಯ್ಯರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ರಂಗಧಾಮಯ್ಯ ತಲೆಮರೆಸಿಕೊಂಡಿದ್ದರು. ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಿಂದ ವಾರಂಟ್ ಜಾರಿ ಆಗಿತ್ತು.
ಅಸೆಡ್ಜ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಭೂಮಿ ನೀಡುವುದಾಗಿ ಹಣ ಪಡೆದಿದ್ದು, ಬಳಿಕ ಹಣ ವಾಪಸ್ ನೀಡದೆ ಚೆಕ್ ವಿತರಣೆ ಮಾಡಿ ವಂಚನೆ ಮಾಡಿದ್ದರು. ಹೀಗಾಗಿ ನೆಲಮಂಗಲದ ಮನೆಯಲ್ಲಿ ಮಲ್ಲರಬಾಣವಾಡಿ ರಂಗಧಾಮಯ್ಯ ಬಂಧನವಾಗಿದೆ.
ನೈಜೀರಿಯಾದ ಇಬ್ಬರು ಡ್ರಗ್ ಪೆಡ್ಲರ್ಗಳ ಬಂಧನ
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನೈಜೀರಿಯಾದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡೇವಿಡ್(36), ಕೋಫಿ(34) ಬಂಧಿತರು. 1 ಕೋಟಿ ಮೌಲ್ಯದ 1 ಕೆಜಿ 520 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ವೃದ್ಧ ದಂಪತಿಯ ಮೇಲೆ ಕುಡಗೋಲು, ಬಂದೂಕು ಹಿಡಿದು ಹಲ್ಲೆಗೆ ಯತ್ನಿಸಿದ ಸಾಕು ಮಗ
ಇಬ್ಬರು ಆರೋಪಿಗಳು ಶೈಕ್ಷಣಿಕ ವೀಸಾ ಮೇಲೆ ಭಾರತಕ್ಕೆ ಬಂದಿದ್ದರು. ಅಕ್ರಮವಾಗಿ ಹಣ ಮಾಡಲು ಡ್ರಗ್ ದಂಧೆಗೆ ಇಳಿದಿದ್ದರು. ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ತಂಡ ದಾಳಿ ನಡೆಸಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹ: ಮಹಿಳೆ ಆತ್ಮಹತ್ಯೆ, ಪತಿ ಬಂಧನ
ಮನನೊಂದು ತನ್ನ ತಾಯಿಯ ಮನೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಮಧ್ಯರಾತ್ರಿ ಘಟನೆ ನಡೆದಿದೆ. ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಿಸುತ್ತ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಪತಿ ಗುರುಪ್ರಸಾದ್ ಹೆಸರು ಹೇಳಿ ಪದ್ಮಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೊದಲು ಆತ್ಮಹತ್ಯೆ ಮಾಡಿಕೊಳ್ಳವ ವಿಡಿಯೋವನ್ನು ಪದ್ಮಾವತಿ ಪತಿಗೆ ಕಳುಹಿಸಿದ್ದಾರೆ. ಬಳಿಕ ಪತಿ ನಿರ್ಲಕ್ಷ್ಯ ಮಾಡಿದ್ದಾರೆ. ಗಂಡನ ಅನೈತಿಕ ಸಂಬಂಧ, ವಿಪರೀತ ಸಾಲ, ಜೂಜಿನ ವಿಚಾರಕ್ಕೆ ಗಲಾಟೆ ಆಗಿದ್ದು, ಗಂಡ ಗುರುಪ್ರಸಾದ್ ಥಳಿಸಿದ್ದಾನೆ. ಬಳಿಕ ಪದ್ಮಾವತಿಯನ್ನು ತಾಯಿಯ ಮನೆಗೆ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆ ಕೊಲೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರು ಕೋರ್ಟ್
ವಾಪಸ್ಸು ಕರೆದುಕೊಂಡು ಹೋಗು ಎಂದು ಪದೇ ಪದೇ ಪದ್ಮಾವತಿ ಕಾಲ್ ಮಾಡಿದ್ದಾರೆ. ಈ ವೇಳೆ ಗುರುಪ್ರಸಾದ್ ಫೋನ್ ಕಾಲ್ ಕೂಡ ತೆಗೆಯದೇ ನಿರಾಕರಿಸಿದ್ದಾರೆ. ಮೊದಲು ಯುಡಿಆರ್ ಪ್ರಕರಣ, ವಿಡಿಯೋ ಸಿಕ್ಕ ಬಳಿಕ ಮೃತ ಪದ್ಮಾವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪತಿ ಗುರುಪ್ರಸಾದರನ್ನ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:05 pm, Thu, 21 November 24