Crime News: ಶೀಲ ಶಂಕಿಸಿ ದೇವಸ್ಥಾನದ ಕೊಠಡಿಯಲ್ಲೇ ಪತ್ನಿಯನ್ನು ಕೊಂದ ಆರ್ಚಕ

TV9 Digital Desk

| Edited By: Zahir Yusuf

Updated on: Sep 16, 2021 | 10:35 PM

Crime News In Kannada: ಇದಾಗ್ಯೂ ಆತನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ರಾಮನಾರಾಯಣ ಒಪ್ಪಿಕೊಂಡಿದ್ದಾನೆ.

Crime News: ಶೀಲ ಶಂಕಿಸಿ ದೇವಸ್ಥಾನದ ಕೊಠಡಿಯಲ್ಲೇ ಪತ್ನಿಯನ್ನು ಕೊಂದ ಆರ್ಚಕ
ಸಾಂದರ್ಭಿಕ ಚಿತ್ರ
Follow us

ಶೀಲ ಶಂಕಿಸಿ ದೇವಾಲಯದ ಆರ್ಚಕನೋರ್ವ ದೇವಸ್ಥಾನದ ಕೊಠಡಿಯಲ್ಲಿಯೇ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದ ಭಯಾನಕ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಈ ದುಷ್ಕೃತ್ಯ ಎಸೆಗಿದ ಆರ್ಚಕನ ಹೆಸರು ರಾಮನಾರಾಯಣ ಪಾಂಡೆ. 35 ವರ್ಷದ ಪಾಂಡೆ ತನ್ನ ಪತ್ನಿ ದಾಕಿನಿ ಪಾಂಡೆ ಜೊತೆ ಭಟಾಪರ ಸಾಯಿ ದೇವಾಲಯದ ಹಿಂಭಾಗದ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಆದರೆ ಇಬ್ಬರ ದಾಂಪತ್ಯ ಜೀವನದಲ್ಲಿ ಸಂಶಯದ ಕಾರಣ ಬಿರುಕು ಮೂಡಿತ್ತು.ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದ ರಾಮನಾರಾಯಣ ಪಾಂಡೆ ದಿನಾಲೂ ಮನೆಯಲ್ಲಿ ಜಗಳವಾಡುತ್ತಿದ್ದ. ಎಂದಿನಂತೆ ಬುಧವಾರ ಕೂಡ ದಂಪತಿ ನಡುವೆ ಜಗಳ ನಡೆದಿದೆ.

ಈ ವೇಳೆ ರಾಮನಾರಾಯಣ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಹೆಂಡತಿಯು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಈ ವೇಳೆ ಗ್ಯಾಸ್ ಸ್ಟವ್ ಆನ್​ ಮಾಡಿ ಆಕೆಯ ಮೇಲಿಟ್ಟು ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ದೇವಸ್ಥಾನದ ಕೋಣೆಯ ಬಳಿ ಬೆಂಕಿ ನೋಡಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪತ್ನಿಯು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮನಾರಾಯಣ ನಾಟಕವಾಡಿದ್ದ.

ಇದಾಗ್ಯೂ ಆತನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ರಾಮನಾರಾಯಣ ಒಪ್ಪಿಕೊಂಡಿದ್ದಾನೆ. ಪತ್ನಿಗೆ ಪರಪುರುಷನ ಜೊತೆ ಅನೈತಿಕ ಸಂಬಂಧವಿತ್ತು. ಹೀಗಾಗಿ ನಾನು ಈ ಕೃತ್ಯ ಎಸೆಗಿರುವುದಾಗಿ ತಿಳಿಸಿದ್ದಾನೆ. ಇದೀಗ ರಾಮನಾರಾಯಣ ವಿರುದ್ದ ಎಫ್​ಐಆರ್​ ದಾಖಲಿಸಿ ಬಂಧಿಸಿರುವುದಾಗಿ ಭಟಾಪರ ಠಾಣಾ ಅಧಿಕಾರಿ ರೋಶನ್ ಸಿಂಗ್ ರಜಪೂತ್ ಹೇಳಿದ್ದಾರೆ.

ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ

ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!

ಇದನ್ನೂ ಓದಿ: IPL 2021: ಐಪಿಎಲ್ ದ್ವಿತಿಯಾರ್ಧದಲ್ಲಿ ಸೃಷ್ಟಿಯಾಗಲಿದೆ ಹೊಸ ದಾಖಲೆ

(Chhattisgarh Sai Mandir Priest Killed Wife By Sharp Weapon)

ತಾಜಾ ಸುದ್ದಿ

Related Stories

Click on your DTH Provider to Add TV9 Kannada