Murder: ಲೇಡಿ ಪೊಲೀಸ್​ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!

Murder Mystery | 2018ರಲ್ಲಿ ತನ್ನ ಪ್ರೇಯಸಿಗಾಗಿ ಹೆಂಡತಿ, 18 ತಿಂಗಳ ಮಗು, 3 ವರ್ಷದ ಮಗಳನ್ನು ಬರ್ಬರವಾಗಿ ಕೊಂದಿದ್ದ ರಾಕೇಶ್ ಮನೆಯ ಬೇಸ್​ಮೆಂಟ್​ನಲ್ಲೇ ಅವರನ್ನು ಹೂತು ಹಾಕಿದ್ದ. 3 ವರ್ಷಗಳ ಬಳಿಕ ಪೊಲೀಸರ ಕೈಗೆ ಆತ ಸಿಕ್ಕಿಬಿದ್ದಿದ್ದು ಹೇಗೆಂಬ ವಿವರ ಇಲ್ಲಿದೆ.

  • TV9 Web Team
  • Publish Date - 5:22 pm, Thu, 2 September 21

ಲಕ್ನೋ: ಪ್ರೀತಿ ಕುರುಡು ಎಂಬ ಮಾತು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಪ್ರೀತಿಗಾಗಿ ಜಗತ್ತಿನಲ್ಲಿ ಸಾವು, ನೋವು, ಯುದ್ಧಗಳೇ ನಡೆದುಹೋಗಿವೆ. ಉತ್ತರ ಪ್ರದೇಶದ ಕಸಗಂಜ್ ಜಿಲ್ಲೆಯಲ್ಲಿ ಲೇಡಿ ಪೊಲೀಸ್ ಪ್ರೇಮಪಾಶಕ್ಕೆ ಬಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಪಡೆಯುವ ಸಲುವಾಗಿ ಪೊಲೀಸರ ಕಣ್ಣಿಗೇ ಮಣ್ಣೆರಚಿ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಬಚಾವಾಗಿದ್ದ. ಈ ಕೃತ್ಯಕ್ಕೆ ಖುದ್ದು ಆತನ ಪ್ರೇಯಸಿ ಅಂದರೆ ಲೇಡಿ ಪೊಲೀಸ್​ ಕೂಡ ಸಹಾಯ ಮಾಡಿದ್ದಳು. ಆದರೆ, 3 ವರ್ಷಗಳ ನಂತರ ಕೊನೆಗೂ ಆತನ ಕೃತ್ಯ ಬಯಲಾಗಿದೆ.

ಇದು ಅಂತಿಂಥಾ ಕತೆಯಲ್ಲ. 2018ರಲ್ಲಿ ಹೆಂಡತಿ, ಇಬ್ಬರು ಸಣ್ಣ ಮಕ್ಕಳನ್ನು ಕೊಂದು ಮನೆಯ ಬೇಸ್​ಮೆಂಟ್​ನಲ್ಲೇ ಸಮಾಧಿ ಮಾಡಿದ್ದ 34 ವರ್ಷದ ರಾಕೇಶ್ ಎಂಬಾತ ತನ್ನ ಗೆಳೆಯನನ್ನೇ ಕೊಲೆ ಮಾಡಿ, ಆ ಶವದ ಮುಖ ಗುರುತು ಸಿಗದಂತೆ ಮಾಡಿ, ಅದರ ಜೊತೆ ತನ್ನ ಐಡಿ ಕಾರ್ಡ್​ ಇಟ್ಟಿದ್ದ. ಇದರಿಂದಾಗಿ ಪೊಲೀಸರು ಆ ಕುಟುಂಬದ ಎಲ್ಲರನ್ನೂ ಯಾರೋ ಹತ್ಯೆ ಮಾಡಿದ್ದಾರೆ ಎಂದುಕೊಂಡಿದ್ದರು. ನಂತರ ಅಲ್ಲಿಂದ ಪರಾರಿಯಾಗಿದ್ದ ರಾಕೇಶ್ ತನ್ನ ಹೆಸರನ್ನು ಬದಲಾಯಿಸಿಕೊಂಡು, ತನ್ನ ನಿಜವಾದ ಗುರುತನ್ನು ಮರೆಮಾಚಿ, ಲೇಡಿ ಪೊಲೀಸ್ ಜೊತೆಗೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದ.

ನೊಯ್ಡಾದ ಖಾಸಗಿ ಲ್ಯಾಬೋರೇಟರಿಯಲ್ಲಿ ಪ್ಯಾಥಾಲಾಜಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ರಾಕೇಶ್ ಬಹಳ ಪ್ಲಾನ್ ಮಾಡಿ ಈ ಕೊಲೆಗಳನ್ನು ಮಾಡಿದ್ದ. ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಲೇಡಿ ಪೊಲೀಸ್ ಮೇಲೆ ರಾಕೇಶ್​ಗೆ ಮನಸಾಗಿತ್ತು. ಆಕೆಯನ್ನು ಪಡೆಯಲು ಆಕೆಯ ಜೊತೆ ಸೇರಿ ತನ್ನ ಕುಟುಂಬದವರನ್ನು ಕೊಲೆ ಮಾಡಿದ್ದ. ರಾಕೇಶ್​ನ ತಂದೆ ಕೂಡ ನಿವೃತ್ತ ಪೊಲೀಸ್ ಸಿಬ್ಬಂದಿಯಾಗಿದ್ದು, ಆತನೂ ಮಗನ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಕೂಡ ಬಂಧಿಸಲಾಗಿದೆ.

ರಾಕೇಶ್​ 2018ರ ಫೆಬ್ರವರಿಯಲ್ಲಿ ತನ್ನ ಹೆಂಡತಿ ಹಾಗೂ 18 ತಿಂಗಳು ಮತ್ತು 3 ವರ್ಷದ ಇಬ್ಬರು ಅಮಾಯಕ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ. ನಂತರ ಮನೆಯ ಬೇಸ್​ಮೆಂಟ್​ನಲ್ಲೇ ಅವರನ್ನು ಹೂತು ಹಾಕಿದ್ದ. ಅದರ ಮೇಲೆ ಸಿಮೆಂಟ್ ಮುಚ್ಚಿ, ಯಾರಿಗೂ ಅನುಮಾನ ಬರದಂತೆ ನೋಡಿಕೊಂಡಿದ್ದ. ಬಳಿಕ ತನ್ನ ಹೆಂಡತಿ ಮತ್ತು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಇದಾದ ಒಂದು ತಿಂಗಳಾದರೂ ಆ ಮಹಿಳೆ ಮತ್ತು ಮಕ್ಕಳ ಪತ್ತೆಯಾಗದ ಕಾರಣ ಆ ಮಹಿಳೆಯ ತಂದೆ ತನ್ನ ಮಗಳನ್ನು ಅಳಿಯನೇ ಕಿಡ್ನಾಪ್ ಮಾಡಿದ್ದಾನೆ, ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದರಿಂದ ಕೊಂಚ ಗಾಬರಿಯಾದ ರಾಕೇಶ್ ತನ್ನ ಪ್ಲಾನ್ ಬದಲಾಯಿಸಿದ. ಈಗ ಪೊಲೀಸರು ಹುಡುಕಾಟ ನಡೆಸಿದರೆ ತನ್ನ ಮನೆಯಲ್ಲಿ ಹೂತು ಹಾಕಿರುವ ಹೆಂಡತಿ ಮತ್ತು ಮಕ್ಕಳ ಶವದ ವಿಷಯ ಬಯಲಾಗುತ್ತದೆ ಎಂದು ತಾನೇ ಸಾಯುವ ನಾಟಕವಾಡಲು ತೀರ್ಮಾನಿಸಿದ. ಪ್ರೇಯಸಿಯೊಂದಿಗೆ ಸೇರಿ ತನ್ನ ಊರಿನ ಗೆಳೆಯನನ್ನು ಕೊಲೆ ಮಾಡಿ, ಮುಖವನ್ನು ಜಜ್ಜಿ ಹಾಕಿ ಆ ಮೃತದೇಹಕ್ಕೆ ತನ್ನ ಬಟ್ಟೆಯನ್ನು ಹಾಕಿದ್ದ. ನಂತರ ಆ ಶವವನ್ನು ರಸ್ತೆ ಬದಿಗೆ ಎಸೆದು ಹೋಗಿದ್ದ. ಅಲ್ಲೇ ಸ್ವಲ್ಪ ದೂರದಲ್ಲಿ ತನ್ನ ಐಡಿ ಕಾರ್ಡ್ ಕೂಡ ಬಿಸಾಡಿದ್ದ. ಈ ಮೂಲಕ ಅಲ್ಲಿ ಕೊಲೆಯಾಗಿರುವುದು ತಾನೇ ಎಂದು ಆತ ಪೊಲೀಸರನ್ನು ನಂಬಿಸಿದ್ದ.

ಮುಖ ಪೂರ್ತಿ ಜಜ್ಜಿ ಹೋಗಿದ್ದ ಆ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಅದು ರಾಕೇಶನ ಶವ ಅಲ್ಲವೆಂದು ಗೊತ್ತಾಗಿತ್ತು. ಡಿಎನ್​ಎ ಪರೀಕ್ಷೆ ನಡೆಸಿದಾಗ ಅದು ಬೇರೆಯವರ ಶವ ಎಂದು ಗೊತ್ತಾಗಿತ್ತು. ಹೀಗಾಗಿ, ಇದರ ಹಿಂದೆ ರಾಕೇಶನ ಕೈವಾಡವಿದೆ ಎಂಬ ಅನುಮಾನದಿಂದ 2 ವರ್ಷಗಳ ಹಿಂದೆಯೇ ಹುಡುಕಾಟ ಶುರು ಮಾಡಿದ್ದ ಪೊಲೀಸರಿಗೆ ಹರಿಯಾಣದಲ್ಲಿ ತಲೆ ಮರೆಸಿಕೊಂಡು, ಪ್ರೇಯಸಿಯೊಂದಿಗೆ ವಾಸವಾಗಿದ್ದ ರಾಕೇಶನ ಸುಳಿವು ಸಿಕ್ಕಿತ್ತು. ಇದೀಗ ರಾಕೇಶ್​, ಆತನ ಪ್ರೇಯಸಿ ಹಾಗೂ ತಂದೆ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: Crime News: ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

(Crime News: Husband Brutally Killed Wife, Children and Buried Them in Basement Over Sexual Affair Murder Mystery)

Ads By Adgebra

ನನಗಾಗಿ ನಾನೇನೂ ಮಾಡುವುದಿಲ್ಲ, ನಾನು ತಪ್ಪು ಉದ್ದೇಶದಿಂದ ಏನನ್ನೂ ಮಾಡುವುದಿಲ್ಲ, ನಾನು ಕಠಿಣ ಪರಿಶ್ರಮದ ಹೊಸ ಮಾದರಿಯನ್ನು ರಚಿಸುತ್ತೇನೆ. ಈ ಮೂರೂ ಮಾತನ್ನು ನಾನು ಉಳಿಸಿಕೊಂಡಿದ್ದೇನೆ ಎಂದು ನಾನು ಅಧಿಕಾರಕ್ಕೆ ಬಂದಾಗ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.