AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Crime: ಹುಡುಗಿಯನ್ನು ಬಲವಂತಾಗಿ ಎಳೆದೊಯ್ತಿದ್ದಾರೆ ಕಾಪಾಡಿ, ಮಧ್ಯರಾತ್ರಿ ದೆಹಲಿ ಪೊಲೀಸರಿಗೆ ಬಂತೊಂದು ಕರೆ

ದೆಹಲಿ ಪೊಲೀಸರಿಗೆ ಮಧ್ಯರಾತ್ರಿ ಕರೆಯೊಂದು ಬಂದಿತ್ತು, ಸರ್ ಹುಡುಗಿಯನ್ನು ಬಲವಂತವಾಗಿ ಯಾರೋ ಎಳೆದೊಯ್ಯುತ್ತಿದ್ದಾರೆ ಕಾಪಾಡಿ ಎಂದು ಅಲ್ಲಿದ್ದವರ್ಯಾರೋ ಕರೆ ಮಾಡಿದ್ದರು

Delhi Crime: ಹುಡುಗಿಯನ್ನು ಬಲವಂತಾಗಿ ಎಳೆದೊಯ್ತಿದ್ದಾರೆ ಕಾಪಾಡಿ, ಮಧ್ಯರಾತ್ರಿ ದೆಹಲಿ ಪೊಲೀಸರಿಗೆ ಬಂತೊಂದು ಕರೆ
ದೆಹಲಿ ಪೊಲೀಸ್
ನಯನಾ ರಾಜೀವ್
|

Updated on: Jun 20, 2023 | 9:25 AM

Share

ದೆಹಲಿ ಪೊಲೀಸರಿಗೆ ಮಧ್ಯರಾತ್ರಿ ಕರೆಯೊಂದು ಬಂದಿತ್ತು, ಸರ್ ಹುಡುಗಿಯನ್ನು ಬಲವಂತವಾಗಿ ಯಾರೋ ಎಳೆದೊಯ್ಯುತ್ತಿದ್ದಾರೆ ಕಾಪಾಡಿ ಎಂದು ಅಲ್ಲಿದ್ದವರ್ಯಾರೋ ಕರೆ ಮಾಡಿದ್ದರು. ದೆಹಲಿಯ ಕೋಟ್ಲಾ ಮುಬಾರಕ್‌ಪುರದಲ್ಲಿ ಈ ಘಟನೆ ನಡೆದಿದೆ. ತಕ್ಷಣ ಪೊಲೀಸರು ಅಲ್ಲಿಗೆ ಧಾವಿಸಿದ್ದರು, ಇಲ್ಲಿನ ನಿರ್ಜನ ರಸ್ತೆಯಲ್ಲಿ ಕಾರೊಂದು ವೇಗವಾಗಿ ಹೋಗುತ್ತಿತ್ತು . ಆ ಕಾರಿನಿಂದ ಹುಡುಗಿಯ ಅಳುವಿನ ಸದ್ದು ಇಡೀ ರಸ್ತೆಯ ತುಂಬೆಲ್ಲಾ ಕೇಳುತ್ತಿತ್ತು.

ಹುಡುಗಿ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಳು. ಅಷ್ಟರಲ್ಲಿ ಕೆಲವರ ಕಣ್ಣು ಬಾಲಕಿ ಹಾಗೂ ಕಾರಿನ ಮೇಲೆ ಬಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈಗ ಕಾರು ಮತ್ತು ಹುಡುಗಿಗಾಗಿ ಹುಡುಕುತ್ತಿದ್ದಾರೆ. ಆ ಹುಡುಗಿ ಯಾರು ಎಂಬುದು ಪೊಲೀಸರಿಗೆ ಇನ್ನೂ ಒಗಟಾಗಿಯೇ ಉಳಿದಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಪಿಸಿಆರ್‌ಗೆ ಮಧ್ಯರಾತ್ರಿ 1.15 ಕ್ಕೆ ಕರೆ ಬಂದಿದೆ. ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಕರೆ ಮಾಡಿದವರು ಪೊಲೀಸರಿಗೆ ತಿಳಿಸಿದ್ದಾರೆ.

ಕಾರಿನಲ್ಲಿ ಕುಳಿತಿದ್ದವರು ಬಾಲಕಿಯನ್ನು ಕರೆದುಕೊಂಡು ಸೌತ್ ಎಕ್ಸ್ ಭಾಗ-1ರಿಂದ ಏಮ್ಸ್ ಮೂಲಕ ಐಎನ್‌ಎ ಕಡೆಗೆ ತೆರಳಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಪೊಲೀಸ್ ತಂಡ ಸೌತ್ ಎಕ್ಸ್ ಪಾರ್ಟ್-1 ತಲುಪಿದೆ. ಪೊಲೀಸರು ಅಲ್ಲಿ ನಿಂತಿದ್ದವರಿಂದ ಇಡೀ ಘಟನೆಯ ವಿವರವಾದ ಮಾಹಿತಿ ಪಡೆದರು. ಐ10 ಬೂದು ಬಣ್ಣದ ಕಾರನ್ನು ಬಾಲಕನೊಬ್ಬ ಓಡಿಸುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಕಾರಿನಲ್ಲಿ ಇಬ್ಬರು ಹುಡುಗಿಯರು ಕುಳಿತಿದ್ದರು. ಈ ಪೈಕಿ ಓರ್ವ ಹುಡುಗು ಕಾರಿನ ಮುಂಭಾಗದ ಸೀಟಿನಲ್ಲಿ ಮತ್ತು ಮತ್ತೊಬ್ಬ ಬಾಲಕಿ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು. ಕಾರಿನ ಹಿಂದಿನ ಸೀಟಿನಲ್ಲಿ ಒಬ್ಬ ಹುಡುಗ ಕುಳಿತಿದ್ದ, ಅವನು ಹುಡುಗಿಯ ಕೈ ಹಿಡಿದಿದ್ದ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಕೆ ಕಾರಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಳು. ಅದೇ ಸಮಯದಲ್ಲಿ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿ ಸಹಾಯಕ್ಕಾಗಿ ಕೂಗುತ್ತಿದ್ದಳು.

ಅವರು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಕಾರು ಚಲಾಯಿಸುತ್ತಿದ್ದ ಬಾಲಕ ಕಾರನ್ನು ನಿಲ್ಲಿಸಲಿಲ್ಲ. ಆದರೆ, ವಾಹನದ ನಂಬರ್‌ ಪ್ಲೇಟ್‌ ನೋಟ್‌ ಮಾಡಲು ಯತ್ನಿಸಿದ್ದಾರೆ. ಆ ನಂಬರ್ ಅನ್ನು ಪೊಲೀಸರಿಗೂ ತಿಳಿಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ವಾಹನದ ನಂಬರ್ ಪ್ಲೇಟ್‌ನಿಂದ ವಾಹನದ ಮಾಲೀಕರ ಬಗ್ಗೆ ತಿಳಿಯಲು ಪ್ರಯತ್ನಿಸಿದಾಗ ಅಂತಹ ಯಾವುದೇ ವಾಹನವಿಲ್ಲ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ಆದರೆ, ಪೊಲೀಸರು ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕಾರು ಪತ್ತೆಯಾಗಿದೆ. ಕಂದು ಬಣ್ಣದ ಕಾರು ರಸ್ತೆಯಿಂದ ಹೋಗುತ್ತಿರುವುದು ದೃಶ್ಯಾವಳಿಗಳಲ್ಲಿ ಗೋಚರಿಸುತ್ತಿದೆ. ಕಾರಿನ ಎಡಭಾಗದ ಬಾಗಿಲು ತೆರೆದಿದ್ದು, ಅದರಲ್ಲಿ ಒಬ್ಬ ಹುಡುಗಿ ಕಾರಿನಿಂದ ಇಳಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಆದರೆ, ಸಿಸಿಟಿವಿ ಕ್ಯಾಮೆರಾದಲ್ಲಿ ವಾಹನದ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಕಾರಿನಲ್ಲಿ ಕುಳಿತಿದ್ದ ಹುಡುಗರು ಮತ್ತು ಹುಡುಗಿಯನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ