ಪೋಷಕರು ನೀಡುತ್ತಿದ್ದ ಪಾಕೆಟ್ ಮನಿಯಿಂದ ಡ್ರಗ್ಸ್ ದಂಧೆ: ಕೇರಳ ಮೂಲದ ಆರು ವಿದ್ಯಾರ್ಥಿಗಳ ಬಂಧನ
20 ಲಕ್ಷ ಮೌಲ್ಯದ ಡ್ರಗ್ಸ್, 3.23 ಕೆಜಿ ವೀಡ್ ಆಯಿಲ್, 1.62 ಕೆಜಿ ಗಾಂಜ, 1 ಎಲೆಕ್ಟ್ರಾನಿಕ್ ತಕ್ಕಡಿ, 5 ಮೊಬೈಕ್ ಫೋನ್‌ಗಳು ವಶಕ್ಕೆ ಪಡೆಯಲಾಗಿದೆ. ಪೊಷಕರು ಪಾಕೆಟ್ ಮನಿಗಾಗಿ ಕೊಡುತ್ತಿದ್ದ ಹಣದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದರು.
ನೆಲಮಂಗಲ: ಪ್ರತಿಷ್ಟಿತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹೈಟೆಕ್ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಆರು ಜನ ಡ್ರಗ್ ಪೆಡ್ಲರ್‌ಗಳನ್ನ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರಿಂದ ಬಂಧನ ಮಾಡಲಾಗಿದೆ. ಕೇರಳ ಮೂಲದ ವಿದ್ಯಾರ್ಥಿಗಳಾದ ಸುಬಿನ್ ಬಿಯೋಯ್, ಮೊಹಮದ್ ಇರ್ಫಾನ್, ಸೌಜಿತ್ ಕಿರಣ್ ಕುಮಾರ್, ಆನಂದು ಮುರಳಿ, ಶಿಯಾಜ಼್ ಬಂಧಿತ ಆರೋಪಿಗಳು. ಮುಖ್ಯ ಆರೋಪಿ ಅಶ್ವಿನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಡ್ರಗ್ ಪೆಡ್ಲಿಂಗ್ ಹಣವನ್ನ ಕಲೆಕ್ಟ್ ಮಾಡುವಾಗ ಪೊಲೀಸರ ಬಲೆಗೆ ಬಿದಿದ್ದಾರೆ. 20 ಲಕ್ಷ ಮೌಲ್ಯದ ಡ್ರಗ್ಸ್, 3.23 ಕೆಜಿ ವೀಡ್ ಆಯಿಲ್, 1.62 ಕೆಜಿ ಗಾಂಜ, 1 ಎಲೆಕ್ಟ್ರಾನಿಕ್ ತಕ್ಕಡಿ, 5 ಮೊಬೈಕ್ ಫೋನ್‌ಗಳು ವಶಕ್ಕೆ ಪಡೆಯಲಾಗಿದೆ. ಪೊಷಕರು ಪಾಕೆಟ್ ಮನಿಗಾಗಿ ಕೊಡುತ್ತಿದ್ದ ಹಣದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದರು. ಪಾಕೆಟ್ ಮನಿ ಹಣದಲ್ಲೇ ಕಡಿಮೆ ಬೆಲೆಗೆ ಕೇರಳದಿಂದ ಡ್ರಗ್ಸ್ ತರಿಸ್ತಿದ್ದ ಈ ಆರು ಜನರ ಗ್ಗಾಂಗ್ ನಗರದ ಪ್ರತಿಷ್ಟಿತ ಕಾಲೇಜು ವಿಧ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿದ್ದರು.
ತಾವು ಓದುತ್ತಿರುವ ಕಾಲೇಜು ಸೇರಿದಂತೆ ನಗರದ ಹತ್ತು ಹಲವು ಕಾಲೇಜುಗಳಲ್ಲಿ ಹೈಟೇಕ್ ಆಗಿ ಡ್ರಗ್ ಪೆಡ್ಲಿಂಗ್ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಡ್ರಾಪ್‌ಡೌನ್ ಲೊಕೇಷನ್ ಮೂಲಕ ಗ್ಯಾಂಗ್, ವೀಡ್ ಆಯಿಲ್, ಗಾಂಜ ಸಪ್ಲೈ ಮಾಡುತ್ತಿದ್ದರು. ಕೇರಳದಿಂದ ಅತೀ ಕಡಿಮೆ ಹಣಕ್ಕೆ ಡ್ರಗ್ಸ್ ತರಿಸುತ್ತಿದ್ದ್ರು, ನಗರದ ವಿವಿಧ ಪ್ರತಿಷ್ಟಿತ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಬಲೆ ಬೀಸುತ್ತಿದ್ರು. ಗ್ರಾಹಕರಿರುವ ಏರಿಯಾದಲ್ಲಿ ಹೋಗಿ ಅಲ್ಲಿ ಡ್ರಗ್ಸ್ ಇಟ್ಟು ಫೋಟೋ ಸಮೇತ ಲೊಕೇಷನ್ ಷೇರ್ ಮಾಡ್ತಿದ್ರು. ಪೆಡ್ಲರ್ ಕೊಟ್ಟ ಲೊಕೇಷನ್‌ನಲ್ಲಿ ಗ್ರಾಹಕರು ಡ್ರಗ್ಸ್ ಕಲೆಕ್ಟ್ ಮಾಡುತ್ತಿದ್ದರು. ಡ್ರಗ್ಸ್ ಕೊಡೋದು ಒಬ್ಬನಾದರೆ ಹಣ ಕಲೆಕ್ಟ್ ಮಾಡುತ್ತಿದ್ದವನೇ ಬೇರೆ. ನಗದು ರೂಪದಲ್ಲೆ ಇವರ ಹಣಕಾಸಿನ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ.
ಹುಬ್ಬಳ್ಳಿ ಕೊಲೆ ಪ್ರಕರಣ; ಪ್ರಿಯತಮನ ಜೊತೆ ಸೇರಿ ತಮ್ಮನನ್ನೇ ಕೊಲೆಗೈದ ಅಕ್ಕ
ಹುಬ್ಬಳ್ಳಿ: ಮೇ 14ರಂದು ಹುಬ್ಬಳ್ಳಿ (Hubli) ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶಂಭುಲಿಂಗ ಕಮಡೊಳ್ಳಿ(35) ವ್ಯಕ್ತಿಯ ಕೊಲೆಯಾಗಿತ್ತು. ಪ್ರಕರಣದ ಜಾಡು ಭೇದಿಸಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು (Police) ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಿಯತಮನ ಜೊತೆ ಸೇರಿ ಅಕ್ಕ ತಮ್ಮನನ್ನೇ ಕೊಲೆಗೈದ್ದಿದ್ದಾಳೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಒಡಹುಟ್ಟಿದ ತಮ್ಮನ್ನು ಅಕ್ಕ ಕೊಲೆ ಮಾಡಿದ್ದಾಳೆ. ಅಕ್ಕ ಬಸಮ್ಮ ನರಸಣ್ಣವರ ಮತ್ತು ಪ್ರಿಯಕರ ಚನ್ನಪ್ಪ ಮರೆಪ್ಪಗೌಡ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:56 am, Mon, 16 May 22