ಅತ್ಯಾಚಾರದಿಂದ ಪಾರಾಗಲು ಹೋಟೆಲ್ ಮಹಡಿಯಿಂದ ಹಾರಿದ ಮಹಿಳೆ; ಮೊಬೈಲ್​ನಲ್ಲಿ ವಿಡಿಯೋ ಸೆರೆ

ಕೇರಳದ ಕೋಝಿಕ್ಕೋಡ್‌ನಲ್ಲಿ ಹೋಟೆಲ್ ಮಾಲೀಕರು ಮತ್ತು ಇಬ್ಬರು ಸಿಬ್ಬಂದಿ ನಡೆಸಿದ ಅತ್ಯಾಚಾರ ಪ್ರಯತ್ನದಿಂದ ತಪ್ಪಿಸಿಕೊಳ್ಳಲು 24 ವರ್ಷದ ಮಹಿಳೆಯೊಬ್ಬರು ಹೋಟೆಲ್ ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಈ ಭಯಾನಕ ಘಟನೆ ಮೊಬೈಲ್​ನಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ. ಆ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ಯಾಚಾರದಿಂದ ಪಾರಾಗಲು ಹೋಟೆಲ್ ಮಹಡಿಯಿಂದ ಹಾರಿದ ಮಹಿಳೆ; ಮೊಬೈಲ್​ನಲ್ಲಿ ವಿಡಿಯೋ ಸೆರೆ
Sexual Harassment
Follow us
ಸುಷ್ಮಾ ಚಕ್ರೆ
|

Updated on: Feb 04, 2025 | 9:13 PM

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್‌ನಲ್ಲಿ ಶನಿವಾರ ನಡೆದ ಅತ್ಯಾಚಾರ ಯತ್ನದಿಂದ ತಪ್ಪಿಸಿಕೊಳ್ಳಲು 24 ವರ್ಷದ ಮಹಿಳೆಯೊಬ್ಬರು ಹೋಟೆಲ್​ನ ಮೊದಲ ಮಹಡಿಯಿಂದ ಹಾರಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಣ್ಣೂರಿನ ಪಯ್ಯನೂರು ಮೂಲದ ಮಹಿಳೆ ಮುಕ್ಕಂ ಬಳಿಯ ಮಾಂಪೆಟ್ಟಾದಲ್ಲಿ ಹೊಸದಾಗಿ ತೆರೆಯಲಾದ ‘ಸಂಕೇತಂ’ ಹೋಟೆಲ್‌ನಲ್ಲಿ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದರು.

ಹೋಟೆಲ್ ಮಾಲೀಕರು ಮತ್ತು ಇತರ ಇಬ್ಬರು ಸಿಬ್ಬಂದಿ ಆ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಆಕೆಯ ಮೇಲೆ ಹಲ್ಲೆ ನಡೆಸಲಾಯಿತು. ಆಕೆ ಅವರಿಂದ ತಪ್ಪಿಸಿಕೊಳ್ಳಲುದ ಮೊದಲ ಮಹಡಿಯಿಂದ ಕೆಳಗೆ ಹಾರಿದಾಗ ಆಕೆಯ ಸೊಂಟ, ಬೆನ್ನುಮೂಳೆ ಮತ್ತು ಕೈಗಳಿಗೆ ಗಂಭೀರವಾದ ಗಾಯಗಳಾಗಿವೆ. ಈ ಘಟನೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ವಿಚಿತ್ರವೆಂದರೆ ಇಡೀ ಘಟನೆ ಅದೇ ಮಹಿಳೆಯ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ಇದನ್ನೂ ಓದಿ: ಸೂಟ್‌ಕೇಸ್‌ನಲ್ಲಿ ದೆಹಲಿ ಮಹಿಳೆಯ ಸುಟ್ಟ ಶವ ಪತ್ತೆ; ಒಂದೇ ದಿನದಲ್ಲಿ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?

ಆ ಮಹಿಳೆ ಪ್ರಸ್ತುತ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಹೋಟೆಲ್ ಮಾಲೀಕರು ಮತ್ತು ಆತನ ಸಹಚರರು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಆಕೆಗೆ ಹಣದ ಅಗತ್ಯ ಇದ್ದುದರಿಂದ ಹಣದ ಆಮಿಷವೊಡ್ಡಿ ಆಕೆಯನ್ನು ಬಳಸಿಕೊಳ್ಳಲು ಆತ ಪ್ರಯತ್ನಿಸುತ್ತಿದ್ದ. ಆತ ಆಕೆಗೆ ತಂದೆಯಂತೆ ಇದ್ದ. ಆದರೆ ಇತ್ತೀಚೆಗೆ ಆಕೆಯ ಜೊತೆ ಆತನ ವರ್ತನೆ ಬದಲಾಗಿತ್ತು.” ಎಂದು ಆ ಮಹಿಳೆಯ ಸಂಬಂಧಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಭಯಾನಕ ಘಟನೆ: ಕ್ಯಾಬ್​ಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

ಈಗ ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಮಹಿಳೆ ಕಿರುಚುತ್ತಾ, ಅಳುತ್ತಾ, ಆರೋಪಿಗಳ ಬಳಿ ನನಗೇನೂ ಮಾಡಬೇಡಿ ಎಂದು ಬೇಡಿಕೊಳ್ಳುತ್ತಿರುವುದು ಸೆರೆಯಾಗಿದೆ. ಆ ಮಹಿಳೆ ತನ್ನ ಫೋನ್‌ನಲ್ಲಿ ಆಟವಾಡುತ್ತಿದ್ದಾಗ ಆರೋಪಿಗಳು ದಾಳಿ ಮಾಡಿದ ಘಟನೆ ಸಂಭವಿಸಿದೆ. ಇಡೀ ಘಟನೆ ಮಹಿಳೆಯ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ
ಕುಟುಂಬದ ಮನೆಯನ್ನು ಸೀಜ್ ಮಾಡಿರುವ ಎಎಮ್​ಒಎಮ್ ಫೈನಾನ್ಸ್ ಸಂಸ್ಥೆ
ಕುಟುಂಬದ ಮನೆಯನ್ನು ಸೀಜ್ ಮಾಡಿರುವ ಎಎಮ್​ಒಎಮ್ ಫೈನಾನ್ಸ್ ಸಂಸ್ಥೆ
ಸಿದ್ದರಾಮಯ್ಯ ರಾಜೀನಾಮೆ: ಕೋರ್ಟ್​ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ
ಸಿದ್ದರಾಮಯ್ಯ ರಾಜೀನಾಮೆ: ಕೋರ್ಟ್​ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ