ಹೆಂಡ್ತಿ ಆರೋಗ್ಯ ವಿಚಾರಿಸಲು ಬಂದಿದ್ದ ಯುವತಿ ಮೇಲೆ ಬಿತ್ತು ಕಣ್ಣು, ಹೊಡೆದು ಕೊಂದ ಪೋಷಕರು

ಕಳೆದ ಸುಮಾರು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಉಸ್ಮಾನ್ ಎಂಬಾತ 2ನೇ ಮದುವೆಗೆ ಮುಂದಾಗಿದ್ದಾನೆ. ಪತ್ನಿ ಆರೋಗ್ಯ ವಿಚಾರಿಸಲು ಬಂದಿದ್ದ ಸಂಬಂಧಿ ಯುವತಿ ಮೇಲೆ ಕಣ್ಣಾಕ್ಕಿದ್ದ ಉಸ್ಮಾನ್, ಹುಡುಗಿಯ ಮನೆಗೆ ಹೋಗಿ ಮಗಳನ್ನು ಕೊಟ್ಟು ಮದುವೆ ಮಾಡಿ ಎಂದು ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಮನೆಯವರು ಉಸ್ಮಾನನನ್ನ ಅಟ್ಟಾಡಿಸಿಕೊಂಡು ಹೊಡೆದು ಕೊಂದಿದ್ದಾರೆ.

ಹೆಂಡ್ತಿ ಆರೋಗ್ಯ ವಿಚಾರಿಸಲು ಬಂದಿದ್ದ ಯುವತಿ ಮೇಲೆ ಬಿತ್ತು ಕಣ್ಣು, ಹೊಡೆದು ಕೊಂದ ಪೋಷಕರು
Usman
Edited By:

Updated on: Jan 05, 2025 | 12:39 PM

ಕೋಲಾರ, (ಜನವರಿ 05): ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಹತ್ಯೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್‍ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು.

ಇದನ್ನೂ ಓದಿ: ತಾಯಿಯನ್ನ ಕೊಂದು ಆತ್ಮಹತ್ಯೆಗೆ ಶರಣಾದ ಮಗ..!

ಹೀಗಿರುವಾಗ ಕಳೆದ ರಾತ್ರಿ ಉಸ್ಮಾನ್ ಯುವತಿ ಮನೆಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾನಂತೆ. ಮಗಳನ್ನು ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ. ಈ ವೇಳೆ ಒಂದಿಷ್ಟು ಜಗಳವಾಗಿದೆ. ಬಳಿಕ ಅಲ್ಲಿಂದ ಆತ ಹೊರಟಿದ್ದ ಉಸ್ಮಾನ್ ನನ್ನು ಹುಡುಗಿ ಕಡೆಯವರು ಹಿಂಬಾಲಿಸಿಕೊಂಡು ಹೋಗಿ ನೂರ್ ನಗರ ಸಮೀಪ ಹಿಡಿದು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಜಮಾಯಿಸುತ್ತಿದ್ದಂತೆ ಬಿಟ್ಟು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಿಸದೆ ಉಸ್ಮಾನ್ ಮೃತಪಟ್ಟಿದ್ದಾನೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Loading...
Unable to load recommendations.
Follow Us