Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದಿದ್ದ ವ್ಯಕ್ತಿ ಪೊಲೀಸ್​ ಠಾಣೆಯಲ್ಲೇ ಸಾವು

ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಉಡುಪಿ: ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದಿದ್ದ ವ್ಯಕ್ತಿ ಪೊಲೀಸ್​ ಠಾಣೆಯಲ್ಲೇ ಸಾವು
ಉಡುಪಿ: ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದಿದ್ದ ವ್ಯಕ್ತಿ ಪೊಲೀಸ್​ ಠಾಣೆಯಲ್ಲೇ ಸಾವು
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 10, 2024 | 9:07 PM

ಉಡುಪಿ, ನವೆಂಬರ್​ 10: ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲೇ ಸಾವನ್ನಪ್ಪಿರುವಂತಹ (Dies) ಘಟನೆ ನಡೆದಿದೆ. ಕೇರಳ ಮೂಲದ ಬಿಜು ಮೋಹನ್(44) ಮೃತ ವ್ಯಕ್ತಿ. ಕೊಚ್ಚಿನ್ ಶಿಪ್ ಯಾರ್ಡ್​ನಲ್ಲಿ ಮೃತ ಬಿಜು ಕಾರ್ಮಿಕನಾಗಿದ್ದ.

ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಆರೋಪಿಯನ್ನು ತಂದು ಠಾಣೆಯಲ್ಲಿ ಇರಿಸಿದ್ದರು. ಮುಂಜಾನೆ ಟಾಯ್ಲೆಟ್​ನಲ್ಲಿ ಆರೋಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಠಾಣೆಗೆ ಉಡುಪಿ ಎಸ್​ಪಿ ಡಾ.ಅರುಣ್ ಕುಮಾರ್ ಭೇಟಿ ನೀಡಿದ್ದಾರೆ.

ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವಾಗಲೇ ಮೃತ: ಅನುಪಮ್‌ ಅಗರವಾಲ್‌

ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರವಾಲ್‌ ಪ್ರತಿಕ್ರಿಯಿಸಿದ್ದು, ಮಹಿಳೆಯೊಬ್ಬರು ಲೈಂಗಿಕ‌ ಕಿರುಕುಳ ಆರೋಪದಡಿ ದೂರು ನೀಡಿದ್ದರು. ಹೀಗಾಗಿ ಆರೋಪಿಯನ್ನು ಕರೆತಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮಹಿಳಾ ಪೊಲೀಸ್ ಸಿಬ್ಬಂದಿ  3.45 ಗಂಟೆಗೆ ಸೆಲ್​  ಗಮನಿಸಿದಾಗ ಗೋಡೆಗೆ ತಲೆ ತಾಗಿಸಿ ಆರೋಪಿ ಬಿಜು ಮೋಹನ್ ಕುಸಿದು ಬಿದ್ದಿದ್ದ. ಕೂಡಲೇ ಪೊಲೀಸ್ ಠಾಣಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಡುಪಿ ಬಾಲಕೃಷ್ಣ ಹತ್ಯೆ: ಆರೋಪಿಗಳ 5 ತಿಂಗಳ ಕೊಲೆ ಸಂಚು ಬಯಲು

ಎಸ್ಪಿ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಸೂಚನೆ ನೀಡಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವಾಗಲೇ ಆತ ಮೃತಪಟ್ಟಿದ್ದ. ಡೆಂಗ್ಯೂ ಜ್ವರ ಸೇರಿದಂತೆ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಈತ ಚಿಕಿತ್ಸೆ ಪಡೆದಿರುವ ಮಾಹಿತಿ ಇದೆ. ಈಗಾಗಲೇ ಪ್ರಾಥಮಿಕ ತನಿಖೆ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಇಂತಹ ಘಟನೆ ನಡೆದಾಗ ಪ್ರಕರಣ ಸಿಐಡಿಗೆ ಹೋಗುತ್ತೆ ಎಂದಿದ್ದಾರೆ.

ಬಿಜು ಮೋಹನ್ ಅವರ ಕುಟುಂಬಸ್ಥರು ಬಂದ ಬಳಿಕ ಹೇಳಿಕೆ ಪಡೆದುಕೊಳ್ಳಲಾಗುತ್ತೆ. ಆ ಬಳಿಕ ಪ್ರಕರಣವನ್ನ ಸಿಐಡಿಗೆ ಹಸ್ತಾಂತರ ಮಾಡಲಾಗುತ್ತೆ. ಸಿಐಡಿ ಮುಂದಿನ ತನಿಖೆ ನಡೆಸುತ್ತಾರೆ. ಮರಣೋತ್ತರ ಪರೀಕ್ಷೆ ಅನುಮತಿಯನ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮೂಲಕ ಮಾಡಲಾಗುತ್ತೆ. ಆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಮಹಿಳೆಯ ಪರಿಚಿತರಾದ ಗೌರಿ ಎಂಬುವವರು ಹೇಳಿದ್ದಿಷ್ಟು

ಆರೋಪಿ ಕಿರುಕುಳ ನೀಡಿದ್ದ ಮಹಿಳೆಯ ಪರಿಚಿತರಾದ ಗೌರಿ ಎಂಬುವವರು ಮಾತನಾಡಿ, ಸಂಜೆ 7ರ ಹೊತ್ತಿಗೆ ಈ ಅಪರಿಚಿತ ವ್ಯಕ್ತಿ, ಆತ ಮನೆ ಒಳಗೆ ನುಗ್ಗಲು ಪ್ರಯತ್ನಿಸಿದ. ನಮ್ಮ ಪಕ್ಕದ ಮನೆಯವರನ್ನು ಅಂಕಲ್, ಅಂಕಲ್ ಎಂದು ಮಗಳು ಕರೆದಿದ್ದಾಳೆ. ಆತ ವಿಪರೀತ ಕುಡಿದು ತೇಲಾಡುತ್ತಿದ್ದ. ಆತ ಎಲ್ಲಿಯವರು ಅಂತ ನಮಗೆ ಗೊತ್ತಿಲ್ಲ. ಅವನನ್ನು ಈವೆರೆಗೆ ನಾವು ನೋಡಿಲ್ಲ. ನೋಡಲು ಆತ ಗಟ್ಟಿಮುಟ್ಟಾಗಿದ್ದ. ಅಲ್ಪ ಸ್ವಲ್ಪ ಕನ್ನಡ , ಹಿಂದಿ ಮಾತನಾಡುತ್ತಿದ್ದ. ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸ್ಥಳಕ್ಕೆ ಪೊಲೀಸರು ಬಂದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರಿಮಣಿ ಮಾಲೀಕ ನೀನಲ್ಲ ಎಂದ ರೀಲ್ಸ್ ರಾಣಿ…ಲವರ್ ಜತೆ ಸೇರಿ ತಾಳಿ ಕಟ್ಟಿದವನನ್ನೇ ಕೊಂದಳು!

ಆತ ಕಳ್ಳತನ ಮಾಡಲು ಬಂದಿರಬಹುದು. ನಾವು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿದ್ದೇವೆ. ನಮಗೆ ತುಂಬಾ ಭಯವಾಯಿತು. ಘಟನೆ ನಡೆದಾಗ ತುಂಬಾ ಜನ ಇಲ್ಲಿ ಸೇರಿದರು. ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋದ್ದಾರೆ ಎಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:32 pm, Sun, 10 November 24