ಪ್ರೇಮ ಕಲಹ, ನಡುರಸ್ತೆಯಲ್ಲೇ ಗುಂಡಿಟ್ಟು ಪ್ರಿಯಕರನ ಹತ್ಯೆ
ಹಾಸನ: ಅಂತರ್ ಜಾತಿ ಪ್ರೇಮ ಕಲಹ ವಿಚಾರಕ್ಕೆ ಹಾಡಹಗಲೇ ನಡುರಸ್ತೆಯಲ್ಲೇ ಯುವಕನಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು (28) ಕೊಲೆಯಾದ ಯುವಕ. ಮಧು ತನ್ನದೇ ಗ್ರಾಮದ ಯುವತಿಯನ್ನ ಪ್ರೀತಿಸುತ್ತಿದ್ದ. ಪ್ರೀತಿಯ ಸೋಗಿನಲ್ಲಿ ಕಳೆದ ವರ್ಷ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಆತನ ಮೇಲಿತ್ತು. ನಂತರ ಪೊಸ್ಕೋ ಕೇಸ್ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗಲೆ ಯುವತಿ ಜೊತೆ ಮತ್ತೆ ಸಂಪರ್ಕ ಬೆಳೆಸಿರುವ […]
ಹಾಸನ: ಅಂತರ್ ಜಾತಿ ಪ್ರೇಮ ಕಲಹ ವಿಚಾರಕ್ಕೆ ಹಾಡಹಗಲೇ ನಡುರಸ್ತೆಯಲ್ಲೇ ಯುವಕನಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು (28) ಕೊಲೆಯಾದ ಯುವಕ.
ಮಧು ತನ್ನದೇ ಗ್ರಾಮದ ಯುವತಿಯನ್ನ ಪ್ರೀತಿಸುತ್ತಿದ್ದ. ಪ್ರೀತಿಯ ಸೋಗಿನಲ್ಲಿ ಕಳೆದ ವರ್ಷ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಆತನ ಮೇಲಿತ್ತು. ನಂತರ ಪೊಸ್ಕೋ ಕೇಸ್ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗಲೆ ಯುವತಿ ಜೊತೆ ಮತ್ತೆ ಸಂಪರ್ಕ ಬೆಳೆಸಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ತಾನು ಪ್ರೀತಿಸುತ್ತಿದ್ದ ಹುಡುಗಿ ಮನೆ ಸಮೀಪ ಸುತ್ತಾಡುತ್ತಿದ್ದ.
ಆಗಾಗ ಮನೆ ಬಳಿ ಬರುವುದು ಯುವತಿಯ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಯುವತಿಯ ಚಿಕ್ಕಪ್ಪ ರೂಪೇಶ್ ನಿನ್ನೆ ಸಂಜೆ ತನ್ನ ಡಬಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿ ಮಧುನನ್ನು ಹತ್ಯೆ ಮಾಡಿದ್ದಾನೆ. ರೂಪೇಶ್ ಬೆಂಗಳೂರಿನಿಂದ ಬಂದು ಹಾಸನದ ಮನೆಯಲ್ಲಿ ಹೋಂ ಕ್ವಾರೆಂಟೈನ್ ಆಗಿದ್ದರು. ಘಟನೆ ನಂತರ ಆರೋಪಿ ರೂಪೇಶ್ ಪರಾರಿಯಾಗಿದ್ದಾನೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:29 am, Thu, 16 July 20