ಹಾಡಹಗಲೇ ಬೈಕ್​ನಲ್ಲಿದ್ದ ಹಣವನ್ನ ಕ್ಷಣದಲ್ಲಿ ಎಗರಿಸಿದ ಖದೀಮರು

ಹಾಡಹಗಲೇ ಬೈಕ್​ನಲ್ಲಿದ್ದ ಹಣವನ್ನ ಕ್ಷಣದಲ್ಲಿ ಎಗರಿಸಿದ ಖದೀಮರು

ಬೆಂಗಳೂರು: ಬ್ಯಾಂಕ್​ನಲ್ಲಿ ಡ್ರಾ ಮಾಡಿದ್ದ ಹಣವನ್ನು ಹಾಡಹಗಲೇ ಎಗರಿಸಿ ಕ್ಷಣಮಾತ್ರದಲ್ಲಿ ಖದೀಮರು ಪರಾರಿಯಾಗಿರುವ ಘಟನೆ ವಿಜ್ಞಾನನಗರ ಮುಖ್ಯರಸ್ತೆ ಬಳಿ ನಡೆದಿದೆ. ಮೊದಲೇ ಸಂಚು ನಡೆಸಿ ಬೈಕ್​ನಲ್ಲಿಟ್ಟಿದ್ದ ಹಣವನ್ನು ದೋಚಿದ್ದಾರೆ. ಡಿ.24ರಂದು ಬ್ಯಾಂಕ್​ನಿಂದ 4 ಲಕ್ಷ ಹಣವನ್ನು ಸಂಜಯ್ ಕುಮಾರ್ ಎಂಬುವರು ಡ್ರಾ ಮಾಡಿದ್ದರು. 50 ಸಾವಿರ ಹಣವನ್ನ ಜೇಬಿನಲ್ಲಿಟ್ಟುಕೊಂಡು ಉಳಿದ ಹಣವನ್ನ ಬೈಕ್​ನ ಡಿಕ್ಕಿಯಲ್ಲಿಟ್ಟಿದ್ದರು. ವಿಜ್ಞಾನ ನಗರದ ಮುಖ್ಯರಸ್ತೆ ಬಳಿ ಬೈಕ್​ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ 3.50 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ. ಮೂರು ಬೈಕ್​ನಲ್ಲಿ […]

sadhu srinath

|

Dec 26, 2019 | 7:58 PM

ಬೆಂಗಳೂರು: ಬ್ಯಾಂಕ್​ನಲ್ಲಿ ಡ್ರಾ ಮಾಡಿದ್ದ ಹಣವನ್ನು ಹಾಡಹಗಲೇ ಎಗರಿಸಿ ಕ್ಷಣಮಾತ್ರದಲ್ಲಿ ಖದೀಮರು ಪರಾರಿಯಾಗಿರುವ ಘಟನೆ ವಿಜ್ಞಾನನಗರ ಮುಖ್ಯರಸ್ತೆ ಬಳಿ ನಡೆದಿದೆ. ಮೊದಲೇ ಸಂಚು ನಡೆಸಿ ಬೈಕ್​ನಲ್ಲಿಟ್ಟಿದ್ದ ಹಣವನ್ನು ದೋಚಿದ್ದಾರೆ.

ಡಿ.24ರಂದು ಬ್ಯಾಂಕ್​ನಿಂದ 4 ಲಕ್ಷ ಹಣವನ್ನು ಸಂಜಯ್ ಕುಮಾರ್ ಎಂಬುವರು ಡ್ರಾ ಮಾಡಿದ್ದರು. 50 ಸಾವಿರ ಹಣವನ್ನ ಜೇಬಿನಲ್ಲಿಟ್ಟುಕೊಂಡು ಉಳಿದ ಹಣವನ್ನ ಬೈಕ್​ನ ಡಿಕ್ಕಿಯಲ್ಲಿಟ್ಟಿದ್ದರು. ವಿಜ್ಞಾನ ನಗರದ ಮುಖ್ಯರಸ್ತೆ ಬಳಿ ಬೈಕ್​ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ 3.50 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.

ಮೂರು ಬೈಕ್​ನಲ್ಲಿ ಬಂದ 6 ಜನರು ಸಂಜಯ್​ರನ್ನು ಹಿಂಬಾಲಿಸಿದ್ದಾರೆ. ಮೊದಲೇ ಸಂಚು ನಡೆಸಿ ಹಣವನ್ನು ಲಪಟಾಯಿಸಿದ್ದಾರೆ. ಹೆಚ್​ಎಎಲ್​ ಪೊಲೀಸ್​ ಠಾಣೆಯಲ್ಲಿ ಸಂಜಯ್ ಕುಮಾರ್ ದೂರು ದಾಖಲಿಸಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada