ಮೈಸೂರು: ಮಹಿಳಾ ಜಿಮ್ ಟ್ರೈನರ್ ಬಳಿ ಎಂಡಿಎಂಎ ಮಾದಕ ವಸ್ತು ಪತ್ತೆ; ಇಬ್ಬರು ವಶ
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ ಸಿಬ್ಬಂದಿ ಮಹಿಳಾ ಜಿಮ್ ಟ್ರೈನರ್ ಓರ್ವಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಈ ವಿಚಾರ ತಿಳಿದ ಮೈಸೂರು ಸೆನ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ಸೆ.09: ಮಹಿಳಾ ಜಿಮ್ ಟ್ರೈನರ್ ಬಳಿ ಎಂಡಿಎಂಎ (MDMA) ಮಾದಕ ವಸ್ತು (Drug) ಪತ್ತೆಯಾದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಸೇರಿದಂತೆ ಇಬ್ಬರನ್ನು ಮೈಸೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ಜಿಮ್ ಟ್ರೈನರ್ ಕುಸುಮಾ ರಾಜ್ (22) ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ ಸಿಬ್ಬಂದಿ ಅನಿಲ್ ಬೋಬ್ಡೆ ಬಂಧಿತ ಆರೋಪಿಗಳು. ಆರೋಪಿಗಳಿಂದ 16.57 ಗ್ರಾಂ ಎಂಡಿಎಂಎ ಮಾದಕ ವಸ್ತು, ಡಿಯೋ, ಹೋಂಡಾ ಆ್ಯಕ್ಟೀವಾ ಮತ್ತು ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನಿಲ್ ಬೋಬ್ಡೆ, ಜಿಮ್ ಟ್ರೈನರ್ ಕುಸುಮಾ ರಾಜ್ ಅವರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದನು. ಇನ್ನು ಪೊಲೀಸರಿಗೆ ಮೈಸೂರಿನ ಕಾಲೇಜು ವಿದ್ಯಾರ್ಥಿಗಳಿಗೂ ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ತನಿಖೆ ನಡೆಸಲು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸೆನ್ ಇನ್ಸಪೆಕ್ಟರ್ ಪ್ರಸನ್ನಕುಮರ್ ಸಬ್ ಇನ್ಸಪೆಕ್ಟರ್ ಅನಿಲ್ ಸಿದ್ದೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ: ಬೈಕ್ನಲ್ಲಿ ಕಿಡ್ನಾಪ್, ರೂಮ್ನಲ್ಲಿ ಕೂಡಿ ಹಾಕಿ ಹಲ್ಲೆ, ಸುಲಿಗೆ
ಮೈಸೂರಿನಲ್ಲಿ ಇಬ್ಬರು ಸುಲಿಗೆಕೋರರ ಬಂಧನ: 10 ಪ್ರಕರಣಗಳು ಪತ್ತೆ
ಮೈಸೂರು ಪೊಲೀಸರಿಗೆ ತಲೆನೋವಾಗಿದ್ದ, 10 ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಪಿ ಸಿದ್ದನಹುಂಡಿ ಗ್ರಾಮದ ಉಮೇಶ್ (23) ಮಂಚಳ್ಳಿಹುಂಡಿಯ ಶಿವಾನಂದ (21) ಬಂಧಿತ ಆರೋಪಿಗಳು. ಬಂಧಿತರಿಂದ ಆಟೋ ಹಾಗೂ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರು ಜನರ ಆರೋಪಿಗಳ ತಂಡ ನಿರಂತರವಾಗಿ ಮೈಸೂರು ಗ್ರಾಮಾಂತರದಲ್ಲಿ ಕಳ್ಳತನ ಮಾಡುತ್ತಿತ್ತು. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇವರ ವಿರುದ್ಧ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಇನ್ನು ಉಳಿದ ನಾಲ್ವರ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ