ಪ್ರೇಯಸಿಯನ್ನು ಲಾಡ್ಜ್‌ಗೆ ಕರೆದು ಕೊಂದ ಪ್ರೇಮಿ; ಅಷ್ಟಕ್ಕೂ ಆಗಿದ್ದೇನು?
ಒಡಿಶಾದ ಲಾಡ್ಜ್‌ನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕರೆದುಕೊಂಡು ಬಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಆತ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಮದುವೆ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿ ತನ್ನ ಪ್ರೇಮಿಯನ್ನು ಇರಿದು ಕೊಂದಿದ್ದಾನೆ. ಆತ ಪೊಲೀಸರಿಗೆ ಶರಣಾಗಿದ್ದು, ತನಿಖೆ ಮುಂದುವರೆದಿದೆ.

ಪುರಿ, ಜುಲೈ 2: ಒಡಿಶಾದ ಬೆರ್ಹಾಂಪುರದಲ್ಲಿ ಆಘಾತಕಾರಿ ಕೊಲೆ (Crime News) ಪ್ರಕರಣ ನಡೆದಿದೆ. ಆ ಯುವತಿಯನ್ನು ಆಕೆಯ ಪ್ರಿಯಕರನೇ ಇರಿದು ಕೊಂದಿದ್ದಾನೆ. ಆರೋಪಿಯು ಯುವತಿಯನ್ನು ಲಾಡ್ಜ್‌ಗೆ ಕರೆದು, ಆಕೆಯನ್ನು ಕೊಲೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರ ಪ್ರಕಾರ, ಆತ ತನ್ನ ಪ್ರೇಯಸಿಯ ಜೊತೆ ತಮ್ಮ ಮದುವೆಯ ವಿಚಾರದಲ್ಲಿ ನಡೆದ ಜಗಳದ ನಂತರ ಕೊಂದಿದ್ದಾನೆ. ಬಳಿಕ ಅವನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮೃತಳನ್ನು ಪ್ರಿಯಾ ಕುಮಾರಿ ಮೊಹರಾನ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಲಂಜಿಪಲ್ಲಿ ಪ್ರದೇಶದ ನಿವಾಸಿ 24 ವರ್ಷದ ಅಭಯ ಕುಮಾರ್ ಮೊಹರಾನ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಈ ಲಾಡ್ಜ್‌ಗೆ ಮೂರು ಬಾರಿ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ಬೆರ್ಹಾಂಪುರ ಎಸ್‌ಪಿ ಪಿಟಿಐಗೆ ತಿಳಿಸಿದ್ದಾರೆ. ಈ ಜೋಡಿ ಒಟ್ಟು 3 ಬಾರಿ ಇದೇ ಲಾಡ್ಜ್‌ಗೆ ಹೋಗಿದ್ದಾರೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಜಾರ್ಖಂಡ್: ಗೆಳತಿಯ ಕೊಂದು, ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಬಾಲಕ
ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಆ ಯುವಕ ಹೊಸ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ಗೆ ಹೋದ. ಆತನ ಪ್ರೇಯಸಿ ಪ್ರಿಯಾ ಸ್ವಲ್ಪ ಸಮಯದ ನಂತರ ಒಳಗೆ ಹೋದಳು. ಅವರಿಬ್ಬರೂ ಸ್ವಲ್ಪ ಸಮಯ ಒಟ್ಟಿಗೆ ಕಳೆದ ನಂತರ ಆತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವಳನ್ನು ಹಲವು ಬಾರಿ ಇರಿದು ಕೊಂದಿದ್ದಾನೆ. ಇದರಿಂದಾಗಿ ಅವಳು ಸಾವನ್ನಪ್ಪಿದ್ದಾಳೆ. ಈ ಘಟನೆಯ ನಂತರ, ಆರೋಪಿಯು ತನ್ನ ಕೈಯ ಮೇಲಿನ ಗಾಯದ ಚಿಕಿತ್ಸೆಗಾಗಿ ಸಿಟಿ ಆಸ್ಪತ್ರೆಗೆ ಹೋದನು. ನಂತರ, ಅವನು ಗೋಸಾನಿನುವಾಗಾಂವ್ ಪೊಲೀಸ್ ಠಾಣೆಗೆ ಹೋಗಿ ಶರಣಾದನು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




