AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನ್​ ಸಾಥಿ’ಯಾಗಲು ಬಂದನವನಿಂದ ಯುವತಿಗೆ 60 ಲಕ್ಷ ರೂ. ವಂಚನೆ

ಬೆಂಗಳೂರಿನಲ್ಲಿ ಜೀವನ್ ಸಾಥಿ ವೆಬ್‌ಸೈಟ್ ಮೂಲಕ ಪರಿಚಯವಾದ ಯುವತಿಗೆ ಮದುವೆಯಾಗುತ್ತೇನೆಂದು ನಂಬಿಸಿ ಯುವಕ ವಂಚಿಸಿದ್ದಾನೆ. ಶಿವಲಿಂಗೇಶ್ ಎಂಬ ಆರೋಪಿ ತನ್ನ ತಾಯಿಯ ಚಿಕಿತ್ಸೆಗಾಗಿ ಹಣ ಬೇಕೆಂದು ಸುಳ್ಳು ಹೇಳಿ ಯುವತಿಯನ್ನು ವಂಚಿಸಿದ್ದಾನೆ. ಆರೋಪಿಯ ಕುಟುಂಬಸ್ಥರು ಸಹ ಆತನ ಕೆಸಿನೊ ಚಟ ಮತ್ತು ವಂಚನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯುವತಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

'ಜೀವನ್​ ಸಾಥಿ'ಯಾಗಲು ಬಂದನವನಿಂದ ಯುವತಿಗೆ 60 ಲಕ್ಷ ರೂ. ವಂಚನೆ
ಆರೋಪಿ ಶಿವಲಿಂಗೇಶ್​
TV9 Web
| Edited By: |

Updated on: Feb 26, 2025 | 1:46 PM

Share

ಬೆಂಗಳೂರು, ಫೆಬ್ರವರಿ 26: ಜೀವನ್​ ಸಾಥಿಯಲ್ಲಿ ಪರಿಚಯವಾದ ಯುವತಿಗೆ ಜೀವನ​ ಸಾಥಿಯಾಗುತ್ತೇನೆಂದು ನಂಬಿಸಿ ಯುವಕ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ಶಿವಲಿಂಗೇಶ್ ವಂಚಕ. ಆರೋಪಿ ಶಿವಲಿಂಗೇಶ್ 2022ರ ಡಿಸೆಂಬರ್​ನಲ್ಲಿ ಜೀವನ್ ಸಾಥಿ ಡಾಟ್ ಕಾಂನಲ್ಲಿ ಸಂತ್ರಸ್ಥೆಗೆ ಪರಿಚಯವಾಗಿದ್ದಾನೆ. ಬಳಿಕ, ಇಬ್ಬರು ಭೇಟಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮಧ್ಯೆ ತನ್ನ ತಾಯಿಗೆ ಬ್ರೈನ್ ಸಮಸ್ಯೆ ಇದೆ ಚಿಕಿತ್ಸೆ ಕೊಡಿಸಬೇಕು ಅಂತ ನಾಟಕವಾಡಿದ್ದಾನೆ. ತನ್ನ ತಾಯಿಗೆ ಚಿಕಿತ್ಸೆ ಕೊಡಿಸಬೇಕೆಂದು ಶಿವಲಿಂಗೇಶ್​ ಯುವತಿಯಿಂದ ಹಂತ ಹಂತವಾಗಿ 60 ಲಕ್ಷ ರೂಪಾಯಿ ಪಡೆದಿದ್ದಾನೆ.

ಕುಟುಂಬಸ್ಥರಿಂದಲೇ ಆರೋಪಿ ಬಣ್ಣ ಬಯಲು!

ಬಳಿಕ, ಶಿವಲಿಂಗೇಶ್​ನ ಮೇಲೆ ಅನುಮಾನಗೊಂಡು ಸಂತ್ರಸ್ತ ಯುವತಿ ಆತನ ಹಿನ್ನಲೆ ಪರಿಶೀಲಿಸಿದಾಗ ಇದೇ ರೀತಿಯಾಗಿ ಬೇರೆಯವರಿಂದಲೂ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಲಿಂಕ್ಡ್ ಇನ್‌ನಲ್ಲಿ ಆರೋಪಿ ಬಗ್ಗೆ ಹುಡುಕಿದಾಗ ಬಂಡವಾಳ ಬಯಲಾಗಿದೆ. ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದಿದ್ದು, ಈ ಸಂಬಂಧ ಹಲವರಿಂದ ಹಣ ಪಡೆದು ವಂಚಿಸ್ತಿದ್ದಾನೆಂದು ಆತನ ಕುಟುಂಬಸ್ಥರೇ ಫೋಸ್ಟ್ ಹಾಕಿರುವುದು ಸಂತ್ರಸ್ತ ಯುವತಿ ಕಂಡಿದ್ದಾರೆ.

ಶಿವಲಿಂಗೇಶ್​ ಕುಟುಂಬಸ್ಥರು ಹಾಕಿದ ಪೋಸ್ಟ್​ನಲ್ಲಿ ಏನಿದೆ?

ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದ್ದಿದ್ದು ಸುಳ್ಳು ಹೇಳಿ ಎಲ್ಲರಿಂದ ಹಣ ವಸೂಲಿ ಮಾಡುತ್ತಿದ್ದಾನೆ. ನನ್ನ ತಾಯಿಗೆ ಹಾರ್ಟ್​ ಸರ್ಜರಿ, ಬ್ರೇನ್​ ಸರ್ಜರಿ, ಮೆಡಿಕಲ್​ ಎಮರ್ಜೆನ್ಸಿ ಇದೆ. ನಾನು ಒಂದು ಭೂಮಿ ಖರೀದಿಸಿದ್ದು, ಮುಂಗಡ ಹಣ ನೀಡಬೇಕಾಗಿದೆ. ಅಲ್ಲದೇ, ನನ್ನ ಬ್ಯಾಂಕ್ ಖಾತೆ ಸಮಸ್ಯೆಯಾಗಿದ್ದು, ತುರ್ತಾಗಿ ನನ್ನ ತಾಯಿಗೆ ಹಣ ಕಳುಹಿಸಬೇಕಾಗಿದೆ ಎಂದು ಸುಳ್ಳು ಹೇಳಿ ಹಣ ಪಡೆಯುತ್ತಿದ್ದಾನೆ. ನಮ್ಮ ಕುಟುಂಬಸ್ಥರಿಂದ 20 ಲಕ್ಷ ರೂಪಾಯಿಗಿಂತಲೂ ಹೆಚ್ಚು, ಸ್ನೇಹಿತರಿಂದ 50 ಲಕ್ಷ ರೂಪಾಯಿಗಿಂತಲೂ ಅಧಿಕ ಮತ್ತು ಮೂರು ಬ್ಯಾಂಕ್​ಗಳಿಂದ 30 ರಿಂದ 40 ಲಕ್ಷಕ್ಕಿಂತಲೂ ಅಧಿಕ ರೂ. ಸಾಲ ಪಡೆದಿದ್ದಾನೆ. ಹೀಗಾಗಿ, ಆರೋಪಿ ಶಿವಲಿಂಗೇಶ್​ಗೆ ಯಾರೂ ಕೂಡ ಹಣ ನೀಡಬೇಡಿ ಎಂದು ಆತನ ಕುಟುಂಬಸ್ಥರು ಪೋಸ್ಟ್​ ಹಾಕಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ ಆರೋಪ: ಎರಡನೇ ಹೆಂಡತಿಯನ್ನ ಕೂಡಿಹಾಕಿ ಮೊದಲನೇ ಪತ್ನಿ ಕಡೆಯವರಿಂದ ಹಲ್ಲೆ

ಇನ್ನು, ಮೋಸ ಹೋದ ಸಂತ್ರಸ್ತ ಯುವತಿ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದೂರು ನೀಡಿದರೂ ಆರೋಪಿಯನ್ನ ಬಂಧಿಸಿಲ್ಲ ಅಂತ ಯುವತಿ ಎಕ್ಸ್​ನಲ್ಲಿ ಟ್ವೀಟ್ ಮಾಡಿ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ