ಕುಡಿದ ನಶೆಯಲ್ಲಿ ಅಸಭ್ಯ ವರ್ತನೆ: ಮಂಗಳಮುಖಿಯಿಂದಲೇ ಯುವಕನಿಗೆ ಬಿತ್ತು ಗೂಸಾ

ಕುಡಿದ ನಶೆಯಲ್ಲಿ ಅಸಭ್ಯ ವರ್ತನೆ: ಮಂಗಳಮುಖಿಯಿಂದಲೇ ಯುವಕನಿಗೆ ಬಿತ್ತು ಗೂಸಾ
ಮಂಗಳಮುಖಿಯಿಂದಲ್ಲೇ ಯುವಕನಿಗೆ ಬಿತ್ತು ಗೂಸಾ

ರಾತ್ರಿ ಮನೆಗೆ ಮರಳುತ್ತಿದ್ದ ಮಂಗಳಮುಖಿಗೆ ಅವಾಚ್ಯವಾಗಿ ನಿಂದಿಸಿ ಯುವಕ ಅಸಭ್ಯವಾರ್ತನೆ ಮಾಡಿದ್ದಾನೆ. ಇದನ್ನ ಸಹಿಸಿಕೊಳ್ಳದ ಮಂಗಳಮುಖಿ ಕೂಡಲೇ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 29, 2022 | 7:12 AM

ಬೆಳಗಾವಿ: ಕುಡಿದ ನಶೆಯಲ್ಲಿ ಮಂಗಳಮುಖಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಕ್ಕೆ ಮಂಗಳಮುಖಿಯಿಂದಲ್ಲೇ ಯುವಕನಿಗೆ ಧರ್ಮದೇಟು ನೀಡಿರುವಂತಹ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದ ಬಳಿ ನಡೆದಿದೆ. ರಾತ್ರಿ ಮನೆಗೆ ಮರಳುತ್ತಿದ್ದ ಮಂಗಳಮುಖಿಗೆ ಅವಾಚ್ಯವಾಗಿ ನಿಂದಿಸಿ ಯುವಕ ಅಸಭ್ಯವಾರ್ತನೆ ಮಾಡಿದ್ದಾನೆ. ಇದನ್ನ ಸಹಿಸಿಕೊಳ್ಳದ ಮಂಗಳಮುಖಿ ಕೂಡಲೇ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಿದ್ದಾರೆ. ಇನ್ನೂ ದೇಗುಲಹಳ್ಳಿ ಗ್ರಾಮದ ಯುವಕನೇ ಈ ರೀತಿ ಅಸಭ್ಯವಾಗಿ ತೋರಿದ್ದು, ಕೂಡಲೇ ಯುವಕನನ್ನ ಕಿತ್ತೂರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿಯಾದ್ರೇ ಸಾಕು ಕಿತ್ತೂರು ಚನ್ನಮ್ಮ ವೃತ್ತದ ಬಳಿ ಮಹಿಳೆಯರು, ಮಕ್ಕಳು, ಮಂಗಳಮುಖಿಯರು ಓಡಾಡದ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಇನ್ನಾದರೂ ಪುಂಡರ ವಿರುದ್ಧ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆ

ಅನ್ಯಕೋಮಿನ ಯುವಕರಿಂದ ಚಾಕು ಇರಿತ

ತುಮಕೂರು: ಅನ್ಯಕೋಮಿನ ಯುವಕರಿಂದ ಚಾಕು ಇರಿದ (Stab the knife) ಘಟನೆಯೊಂದು ತುಮಕೂರು ನಗರದ ದಿಬ್ಬೂರಹಳ್ಳಿಯಲ್ಲಿ ನಡೆದಿದೆ. ವಿನೋದ್(17) ಎಂಬ ಯುವಕನ ಮೇಲೆ ದಾಳಿ ನಡೆಸಿದ ಇಬ್ಬರು ಆರೋಪಿಗಳು, ವಿನೋದ್​ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟ್ಯಾಂಕರ್ ಮಾಲೀಕನ ಕಳ್ಳಾಟ

ಬೆಂಗಳೂರು: ಟ್ಯಾಂಕರ್ ಹರಿದು 3 ವರ್ಷದ ಮಗು ಸಾವು ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ವಾಟರ್ ಟ್ಯಾಂಕರ್ ಮಾಲೀಕನ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾನೆ. ಕೃತ್ಯ ನಡೆದಾಗ ಟ್ಯಾಂಕರ್​ನಲ್ಲಿದ್ದ ಅಸಲಿ ಚಾಲಕನ ಬದಲಿಗೆ ಬೇರೊಬ್ಬ ಚಾಲಕನನ್ನು ಠಾಣೆಗೆ ಕರೆತಂದ ಟ್ಯಾಂಕರ್ ಮಾಲೀಕ ಆನಂದ್​ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾನೆ. ವಿಚಾರಣೆ ವೇಳೆ ಅಸಲಿಯತ್ತು ಬೆಳಕಿಗೆ ಬಂದಿದ್ದು, ಹಣದ ಆಸೆಗೆ ರಮೇಶ್ ಬಾಬು ಆರೋಪಿಯಾಗಿ ಬಂದಿದ್ದನು. ಈ ಬಗ್ಗೆ ಸ್ವತಃ ರಮೇಶ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ನಂತರ ಅಸಲಿ ಚಾಲಕ ರಖಿಬ್​ನನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಎಚ್​ಎಸ್​ಆರ್ ಲೇಔಟ್​ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada