ತಿಂಡಿ, ತಿನಿಸು ಪ್ಯಾಕೆಟ್ಗಳಲ್ಲಿ ಗಾಂಜಾ ಇಟ್ಟು ಮಾರಾಟ; 8 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಹೆಜ್ಜೇನು ದಾಳಿ ಮಾಡಿದ್ದು, ಫ್ರೀಡಂಪಾರ್ಕ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಓರ್ವ ಇನ್ಸ್ಪೆಕ್ಟರ್ ಸೇರಿದಂತೆ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವಂತಹ ಘಟನೆ ನಡೆದಿದೆ.
ಬೆಂಗಳೂರು: ತಿಂಡಿ ತಿನಿಸು ಪ್ಯಾಕೆಟ್‌ನಲ್ಲಿ ಗಾಂಜಾ (Selling marijuana) ಇಟ್ಟು ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನ ಬಂಧಿಸಲಾಗಿದೆ. 8 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ ಗಾಂಜಾ, ತೂಕದ ಯಂತ್ರ, ಮೊಬೈಲ್ ಫೋನ್ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 5, 10 ,20 ಗ್ರಾಂ ತೂಕದ ಪೊಟ್ಟಣಗಳಾಗಿ ಮಾಡಿ, 5 ಗ್ರಾಂ 500 ರೂ 10 ಗ್ರಾಂಗೆ ಒಂದು ಸಾವಿರ 20 ಗ್ರಾಂ ಗೆ 2 ಸಾವಿರದಂತೆ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರತೆಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ:
ಬೆಂಗಳೂರು: ಹೆಜ್ಜೇನು ದಾಳಿ ಮಾಡಿದ್ದು, ಫ್ರೀಡಂಪಾರ್ಕ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಓರ್ವ ಇನ್ಸ್ಪೆಕ್ಟರ್ ಸೇರಿದಂತೆ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವಂತಹ ಘಟನೆ ನಡೆದಿದೆ. ಗಾಯಾಳು ಅಧಿಕಾರಿ ಸಿಬ್ಬಂದಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಇಬ್ಬರು ಸಿಬ್ಬಂದಿ ಗಂಭೀರ, ನಿಗಾ ಘಟನಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈಲು ಹರಿದು ಸ್ಥಳದಲ್ಲೇ ವೃದ್ಧ ಸಾವು:
ವಿಜಯಪುರ: ರೈಲು ಹಳಿ ದಾಟುತ್ತಿದ್ದ ವೃದ್ದನ ರೈಲು ಮೇಲೆ ಹರಿದು ಸ್ಥಳದಲ್ಲೇ ವೃದ್ದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನಗರದ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಶಿವಪ್ಪ ಬಿರಾದಾರ (75) ದುರ್ಮರಣ ಹೊಂದಿರುವ ವೃದ್ಧ. ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೋಲಿಸರು ವಿಚಾರಣೆ ನಡೆಸಿದ್ದಾರೆ. ರೈಲ್ವೇ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ ಆರೋಪಿಗಳ ಬಂಧನ:
ಬ್ಯಾಟರಾಯನಪುರ ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ ಆರೋಪಿಗಳ ಬಂಧನ ಮಾಡಲಾಗಿದೆ. ಬ್ಯಾಟರಾಯನಪುರ ಶ್ಯಾಮಣ್ಣ ಗಾರ್ಡನ್ ಬಳಿ ಘಟನೆ ನಡೆದಿದೆ. ಸೈಯದ್ ಇಕ್ಬಾಲ್ ,ಮುಬಾರಕ್ ಷರೀಫ್ ಬಂಧಿತರು. ಆರೋಪಿಗಳಿಂದ 3. 20 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ.
ತುಂಗಭದ್ರ ಡ್ಯಾಂ ಎಡದಂಡೆ ಕಾಲುವೆಗೆ ರಂದ್ರ; ಅಪಾರ ಪ್ರಮಾಣದ ನೀರು ಪೋಲು:
ಕೊಪ್ಪಳ: ಮುನಿರಾಬಾದ್‌ನ ಪವರ್‌ಹೌಸ್ ಬಳಿ ತುಂಗಭದ್ರಾ ಡ್ಯಾಂನ ಎಡದಂಡೆ ಕಾಲುವೆಯಲ್ಲಿ ರಂಧ್ರವಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ತಾಲೂಕಿನ ಮುನಿರಾಬಾದ್‌ನ ಪವರ್ ಹೌಸ್ ಬಳಿ ಘಟನೆ ನಡೆಸಿದೆ. ಕಾಲುವೆ ದಡದ ಮೇಲಿದ್ದ ಬೇವಿನ ಮರ ಬುಡ ಸಮೇತ ಕಿತ್ತು ಬಿದ್ದಿದ್ದರಿಂದ ಕಾಲುವೆಗೆ ರಂದ್ರವಾಗಿದೆ. ಬಿದ್ದ ಮರ ತೆರವುಗೊಳಿಸಲು ಕಾರ್ಮಿಕರ ಹರಸಾಹಸ ಪಡುತ್ತಿದ್ದು, ಅಧಿಕಾರಿಗಳು ಕಾಲುವೆಗೆ ನೀರಿನ ಹರಿವು ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ:
ಉಕ್ರೇನ್ನಿಂದ ಬಂದ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ; ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕರಿಂದ ವಿರೋಧ