AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ​ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಗೆ ಚಾಕು ಇರಿದ ಯುವತಿ

ಮೈಸೂರು: ಸರ್​ಪ್ರೈಸ್​ ನೀಡುವುದಾಗಿ ಹೇಳಿ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಭಾವಿ ಪತ್ನಿಯೇ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ. ಸುರಗಳ್ಳಿ ಗ್ರಾಮದ ರವಿಕುಮಾರ್​ಗೆ ಭಾವಿ ಪತ್ನಿ ವಿ.ಜಿ.ಕೊಪ್ಪಲಿನ ಅರುಣಿ ಚಾಕು ಇರಿದಿದ್ದಾಳೆ. ನಾಲ್ಕು ತಿಂಗಳ ಹಿಂದೆ ರವಿಕುಮಾರ್, ಅರುಣಿಗೆ ಮದುವೆ ನಿಶ್ಚಯವಾಗಿತ್ತು. ಸೋಮವಾರ ಸಂಜೆ ಯುವತಿ ಮನೆಗೆ ರವಿಕುಮಾರ್ ತೆರಳಿದ್ದ. ಈ ವೇಳೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅರುಣಿ ಕೃತ್ಯ ಎಸಗಿದ್ದಾಳೆ. ಘಟನೆ ಬಳಿಕ ಪೊಲೀಸರ […]

ಸರ​ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಗೆ ಚಾಕು ಇರಿದ ಯುವತಿ
ಸಾಧು ಶ್ರೀನಾಥ್​
|

Updated on:Mar 05, 2020 | 5:29 PM

Share

ಮೈಸೂರು: ಸರ್​ಪ್ರೈಸ್​ ನೀಡುವುದಾಗಿ ಹೇಳಿ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಭಾವಿ ಪತ್ನಿಯೇ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ. ಸುರಗಳ್ಳಿ ಗ್ರಾಮದ ರವಿಕುಮಾರ್​ಗೆ ಭಾವಿ ಪತ್ನಿ ವಿ.ಜಿ.ಕೊಪ್ಪಲಿನ ಅರುಣಿ ಚಾಕು ಇರಿದಿದ್ದಾಳೆ.

ನಾಲ್ಕು ತಿಂಗಳ ಹಿಂದೆ ರವಿಕುಮಾರ್, ಅರುಣಿಗೆ ಮದುವೆ ನಿಶ್ಚಯವಾಗಿತ್ತು. ಸೋಮವಾರ ಸಂಜೆ ಯುವತಿ ಮನೆಗೆ ರವಿಕುಮಾರ್ ತೆರಳಿದ್ದ. ಈ ವೇಳೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅರುಣಿ ಕೃತ್ಯ ಎಸಗಿದ್ದಾಳೆ. ಘಟನೆ ಬಳಿಕ ಪೊಲೀಸರ ಮುಂದೆ ಶರಣಾಗಿರುವ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ.

ನನಗೆ ವ್ಯಾಸಂಗ ಮಾಡಲು ಇಷ್ಟವಿತ್ತು. ಆದ್ರೆ ಮನೆಯಲ್ಲಿ ಎಷ್ಟೆ ಹೇಳಿದರು ಕೇಳದೆ ಮದುವೆ ನಿಶ್ಚಯಮಾಡಿದ್ದಾರೆ. ಇದರಿಂದ ಬೇಸತ್ತು ತಾನೇ ಚಾಕು ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 4:54 pm, Thu, 5 March 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More