1989 ರಲ್ಲಿ ಕೇರಳದ ಕೊಟ್ಟಾಯಂ 100% ಸಾಕ್ಷರತೆಯನ್ನು ಹೇಗೆ ಸಾಧಿಸಿತು; ಇಲ್ಲಿದೆ ಒಂದು ಸ್ಫೂರ್ತಿ ಕಥೆ!
International Literacy Day 2023: 1989 ರಲ್ಲಿ ಎಂಜಿ ವಿಶ್ವವಿದ್ಯಾಲಯದ NSS ಕಾರ್ಯಕ್ರಮ ಸಂಯೋಜಕರಾಗಿದ್ದ ಡಾ.ಸಿ.ಥಾಮಸ್ ಅಬ್ರಹಾಂ ಈ ಸಾಧನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಜನಸಂಖ್ಯೆಯಲ್ಲಿ ಕೇವಲ 3% ಜನರು ಅನಕ್ಷರಸ್ಥರು ಎಂದು ಸಮೀಕ್ಷೆಯ ಮೂಲಕ ತಿಳಿದ ಅಬ್ರಹಾಂ ಕೊಟ್ಟಾಯಂ ಜನರನ್ನು 100% ಸಾಕ್ಷರರನ್ನಾಗಿ ಮಾಡವ ಗುರಿಯನ್ನು ಹೊಂದಿದ್ದರು.
1989 ರಲ್ಲಿ, ಕೇರಳದ ಕೊಟ್ಟಾಯಂ ಜಿಲ್ಲೆ (Kottayam) ನಂಬಲಸಾಧ್ಯವಾದುದ ಮೈಲುಗಲ್ಲನ್ನು ಸಾಧಿಸಿತು. ಈ ಜಿಲ್ಲೆಯವರು 100% ಸಾಕ್ಷರತೆಯನ್ನು (100% Literacy) ಸಾಧಿಸಿದರು, ಅಂದರೆ ಆ ಕಾಲದಲ್ಲೇ ಈ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಗೂ ಓದಲು ಮತ್ತು ಬರೆಯಲು ಕಲಿತಿದ್ದರು. ಈ ಗಮನಾರ್ಹ ಸಾಧನೆಯನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವಾದ ಸೆಪ್ಟೆಂಬರ್ 8 ರಂದು ಆಚರಿಸಲಾಯಿತು. ಅಂದು ಎಂಜಿ ವಿಶ್ವವಿದ್ಯಾಲಯದ NSS ಕಾರ್ಯಕ್ರಮ ಸಂಯೋಜಕರಾಗಿದ್ದ ಡಾ.ಸಿ.ಥಾಮಸ್ ಅಬ್ರಹಾಂ ಈ ಸಾಧನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಜನಸಂಖ್ಯೆಯಲ್ಲಿ ಕೇವಲ 3% ಜನರು ಅನಕ್ಷರಸ್ಥರು ಎಂದು ಸಮೀಕ್ಷೆಯ ಮೂಲಕ ತಿಳಿದ ಅಬ್ರಹಾಂ ಕೊಟ್ಟಾಯಂ ಜನರನ್ನು 100% ಸಾಕ್ಷರರನ್ನಾಗಿ ಮಾಡವ ಗುರಿಯನ್ನು ಹೊಂದಿದ್ದರು.
ಯೋಜನೆಗೆ ಸರಕಾರದಿಂದ ರೂ.63,000 ಬೆಂಬಲ ಸಿಕ್ಕಿತ್ತು, ಈ ಪ್ರಯತ್ನವು 600 NSS ಸ್ವಯಂಸೇವಕರನ್ನು ಒಳಗೊಂಡಿತ್ತು, ಇದರಲ್ಲಿ ಹೆಚ್ಚಾಗಿ ಪದವೀಧರರು ಸೇವೆ ಸಲ್ಲಿಸುತ್ತಿದ್ದರು. ಈ ಸ್ವಯಂಸೇವಕರ ಗುಂಪು ‘ಈಚ್ ಒನ್ ಟೀಚ್ ಒನ್’ (ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಕಳಿಸುತ್ತಾರೆ) ಎಂಬ ಧ್ಯೇಯವಾಕ್ಯವನ್ನು ಅನುಸರಿಸಿದರು. ಜಿಲ್ಲೆಯ 2,208 ಅನಕ್ಷರಸ್ಥರಿಗೆ ಕಲಿಸಲು ಅವರು ಅವಿರತವಾಗಿ ಶ್ರಮಿಸಿದರು.
ಮೊದಲಿಗೆ, 10 ನೇ ತರಗತಿಯನ್ನು ಪೂರ್ಣಗೊಳಿಸಿದವರು ಮಾತ್ರ ಸ್ವಯಂಸೇವಕರಾಗಲು ಅರ್ಹರಾಗಿದ್ದರು, ಆದರೆ ನಂತರ ಈ ನಿಯಮವನ್ನು ಬದಲಾಯಿಸಲಾಯಿತು. ಸ್ವಯಂಸೇವಕರು ಸಾಕ್ಷರತೆಯನ್ನು ಉತ್ತೇಜಿಸಲು ರಂಗಭೂಮಿ, ಮಾಧ್ಯಮ ಪ್ರಚಾರಗಳು ಮತ್ತು ಮನೆ-ಮನೆ ಭೇಟಿ ಸೇರಿದಂತೆ ವಿವಿಧ ವಿಧಾನಗಳನ್ನು ಬಳಸಿದರು. ಕಲಿಕೆಯ ಮಹತ್ವವನ್ನು ಸಾರಲು ಕವಿತೆಗಳು ಮತ್ತು ಹಾಡುಗಳನ್ನು ರಚಿಸಲಾಗಿದೆ.
ಕೊಟ್ಟಾಯಂ ಸಾಕ್ಷರತೆಯನ್ನು ಹೆಮ್ಮೆಯ ವಿಷಯವನ್ನಾಗಿ ಮಾಡಿತು ಮತ್ತು ಅನಕ್ಷರಸ್ಥರಾದ ಅನೇಕರು ಮುಜುಗರವನ್ನು ತಪ್ಪಿಸಲು ಖಾಸಗಿಯಾಗಿ ಸಹಾಯವನ್ನು ಮಾಡಿತು. ಸ್ವಯಂಸೇವಕರು ಜನರ ಮನೆಗಳಿಗೆ ತೆರಳಿ ಸೂಕ್ತ ಶಿಕ್ಷಣ ನೀಡುತ್ತಿದ್ದರು.
ಕೊಟ್ಟಾಯಂನಲ್ಲಿ ಎಲ್ಲರಿಗೂ ಓದಲು ಮತ್ತು ಬರೆಯಲು ಕಲಿಸುವ ಪ್ರಯತ್ನದ ಸಮಯಗಳಿಂದ ಎರಡು ಸ್ಫೂರ್ತಿ ಕಥೆಗಳನ್ನು ಅಬ್ರಹಾಂ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಹಂಚಿಕೊಂಡಿದ್ದಾರೆ.
“ಒಂದು ಕಥೆಯಲ್ಲಿ, ಜೋಬಿ ಜಿರಿಯಾಕ್ ಎಂಬ ಸ್ವಯಂಸೇವಕ ಗಾಡಿಜೌಮ್ಮನ ಮನೆಗೆ ಭೇಟಿ ನೀಡಿದ್ದನು. ಗಾಡಿಜೌಮ್ಮ ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳುತ್ತಿದ್ದರು. ಅವಳು ಓದಲು ಮತ್ತು ಬರೆಯಲು ಹೇಗೆ ಕಲಿಯಬಹುದು ಎಂದು ಜೋಬಿಯನ್ನು ಕೇಳಿದಳು. ಜೋಬಿ ಅವಳ ಪರಿಸ್ಥಿತಿಯಿಂದ ಬೇಸರಗೊಂಡು ಅಲ್ಲಿಂದ ಹೊರಟುಹೋದನು, ಆದರೆ ಅವನು ಎರಡು ದಿನಗಳ ನಂತರ ಹಿಂದಿರುಗಿದನು. ಗಾಡಿಜೌಮ್ಮ ಅವರು ಕಲಿಯದಿದ್ದರೆ ಮಿಷನ್ ಹೇಗೆ ಪೂರ್ಣಗೊಳ್ಳುತ್ತದೆ ಎಂದು ಕೇಳಿದರು, ಕಲಿಯುವ ಬಯಕೆಯನ್ನು ಗಾಡಿಜೌಮ್ಮನಲ್ಲಿ ಹುಟ್ಟಿಸಿದನು” ಎಂದು ಅಬ್ರಹಾಂ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನೊಂದು ಕಥೆಯಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಕುಟ್ಟಪನ್ ಎಂಬ ವ್ಯಕ್ತಿ ಸಣ್ಣ ವಯಸ್ಸಿನಲ್ಲೇ ಕಲಿಯದಿರಲು ನಿರ್ಧರಿಸಿದ್ದರು. ಈ ನಿರ್ಧಾರವು ಅವರ ಬಾಲ್ಯದ ನೋವಿನ ಅನುಭವವನ್ನು ಆಧರಿಸಿದೆ. ಅವರು ಏಳು ವರ್ಷದವರಾಗಿದ್ದಾಗ ಶಾಲೆಗೆ ಹೋಗಲು ನಿರ್ಧರಿಸಿದರು, ಆದರೆ ಕೇವಲ 8 ದಿನಗಳಲ್ಲಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು. ಇದಕ್ಕೆ ಕಾರಣ ಅವರು ಒಮ್ಮೆ ಅವರು ತಮ್ಮ ಸ್ನೇಹಿತನೊಂದಿಗೆ ಜಗಳವಾಡಿದರು. ಮುಖ್ಯೋಪಾಧ್ಯಾಯರು ಕುಟ್ಟಪನ್ ಅವರನ್ನು ಮಾತ್ರ ಕಠಿಣವಾಗಿ ಶಿಕ್ಷಿಸಿದರು, ಆದರೆ ಇವರ ಮೇಲ್ಜಾತಿಯ ಸ್ನೇಹಿತನಿಗೆ ಯಾವ ಶಿಕ್ಷೆಯನ್ನು ನೀಡಲಿಲ್ಲ.
ಮುಖ್ಯೋಪಾಧ್ಯಾಯರು ತರಗತಿಯ ಮುಂದೆಯೇ ಕುಟ್ಟಪನ್ ಅವರನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದಾಗ, ಅವರು ತನ್ನ ಸ್ಲೇಟನ್ನು ಶಿಕ್ಷಕರ ಮುಖಕ್ಕೆ ಎಸೆದು ಶಾಲೆಯಿಂದ ಓಡಿಹೋದರು. ಅಕ್ಕಪಕ್ಕದ ಮನೆಯಲ್ಲಿ ಒಂದು ವಾರ ತಲೆಮರೆಸಿಕೊಂಡಿದ್ದುರು, ನಂತರ ಸಿಕ್ಕಾಗ ತಂದೆ ಮರಕ್ಕೆ ಕಟ್ಟಿ ಥಳಿಸಿದ್ದರು. ಅಂದು ಕುಟ್ಟಪ್ಪನು ತಾನು ಎಂದಿಗೂ ಕಲಿಯುವುದಿಲ್ಲ ಎಂದು ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದರು. ಈ ರೀತಿ ಪಟ್ಟು ಹಿಡಿದಿದ್ದ ವ್ಯಕ್ತಿಯ ಮನಃಪರಿವರ್ತಿಸುವುದು ಕಷ್ಟದ ಕೆಲಸವಾಗಿತ್ತು.
ಇದನ್ನೂ ಓದಿ: ಅಂತರಾಷ್ಟ್ರೀಯ ಸಾಕ್ಷರತಾ ದಿನ 2023: ಸೆಪ್ಟೆಂಬರ್ 8 ರಂದು ಏಕೆ ಆಚರಿಸಲಾಗುತ್ತದೆ, ಈ ವರ್ಷದ ಥೀಮ್ ಏನೆಂದು ತಿಳಿಯಿರಿ
ಸ್ವಯಂಸೇವಕರು ಕುಟ್ಟಪ್ಪನ್ ರನ್ನು ಕಲಿಯಲು ಮನವೊಲಿಸಲು ಪ್ರಯತ್ನಿಸಿದರು, ಆದರೆ ಕುಟ್ಟಪ್ಪನ್ ಸ್ವಯಂಸೇವಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದರು ಮತ್ತು ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದರು. ಅವರನ್ನು ಜಿಲ್ಲಾಧಿಕಾರಿ ಕಣ್ಣಂತಾನಂ ಅವರ ಮನೆಗೆ ಕರೆದೊಯ್ದು ಅಲ್ಲಿ ಅವರಿಗೆ ಅನ್ನ, ಕೋಳಿ ಮತ್ತು ಮೀನು ಕರಿಯೊಂದಿಗೆ ಊಟ ನೀಡಲಾಯಿತು. ಕಣ್ಣಂತಾನಂ ಅವರ ಮಾತು ಕುಟ್ಟಪನ್‌ಗೆ ಮನ ಮುಟ್ಟಿತು, ಅವರ ಪತ್ನಿಯೂ ಅವರ ಮನವೊಲಿಸಿದರು. ಕಣ್ಣಂತಾನಂ ಅವರು “ನಾವು ದೇವರ ನಾಡು ಎಂಬ ವಿಶೇಷ ಸ್ಥಳದಲ್ಲಿದ್ದೀವಿ, ಅಲ್ಲಿ ನೀನು ನಿನ್ನ ಪ್ರಮಾಣವನ್ನು ಮುರಿದರೆ ದೇವರು ಶಿಕ್ಷೆ ಕೊಡುವುದಿಲ್ಲ” ಎಂದು ಕುಟ್ಟಪ್ಪನ್ ಅವರಿಗೆ ಹೇಳಿದರು. 30 ಸೆಕೆಂಡ್‌ಗಳಲ್ಲಿ ಕುಟ್ಟಪ್ಪನ ಮನಸ್ಸು ಬದಲಿಸಿ ಕಲಿಯುವ ಭರವಸೆ ಮೂಡಿಸಿದರು. ಕಣ್ಣಂತಾನಂಗೆ ಕಾಣಿಕೆಗಾಗಿ 1 ರೂಪಾಯಿಯನ್ನೂ ಕೊಟ್ಟರು.
ಇಂತಹ ವಿಶಿಷ್ಟ, ವಿಭಿನ್ನ ಸ್ಫೂರ್ತಿ ಕತೆಗಳನ್ನು ಹೊತ್ತಿರುವ ಕೊಟ್ಟಾಯಂನ ಸಾಧನೆಯು ಸಮುದಾಯದ ಶಕ್ತಿ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. 1989 ಅಲ್ಲಿ ಆದ ಗಂತನೇ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅಂತಾರಾಷ್ಟ್ರೀಯ ಸಾಕ್ಷರತೆ ದಿನದಂದು ಕೊಟ್ಟಾಯಂನ ಕಥೆಯಿಂದ ಸ್ಪೂರ್ತಿಗೊಂಡು ಸಾಕ್ಷರತೆಯ ಮಹತ್ವವನ್ನು ಉತ್ತೇಜಿಸಲು ಒಟ್ಟಾಗಿ ಕೈ ಜೋಡಿಸೋಣ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ