AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರ್ಕರ್ ಬಗೆಗಿನ ಪರ-ವಿರೋಧ ಚರ್ಚೆಗಳ ನಡುವೆ ಮುನ್ನೆಲೆಗೆ ಬಂದ ವೀರ ಸಾವರ್ಕರ್ ಪಠ್ಯ ಸೇರ್ಪಡೆ ವಿಚಾರ

ವೀರ ಸಾವರ್ಕರ್ ಬಗ್ಗೆ ಪರ-ವಿರೋಧಗಳು ಚರ್ಚೆಗಳಾಗುತ್ತಿರುವ ನಡುವೆಯೇ 8ನೇ ತರಗತಿಯ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿರುವ ವಿಚಾರ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಮತ್ತೊಮ್ಮೆ ಶಾಲಾ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.

ಸಾವರ್ಕರ್ ಬಗೆಗಿನ ಪರ-ವಿರೋಧ ಚರ್ಚೆಗಳ ನಡುವೆ ಮುನ್ನೆಲೆಗೆ ಬಂದ ವೀರ ಸಾವರ್ಕರ್ ಪಠ್ಯ ಸೇರ್ಪಡೆ ವಿಚಾರ
ರೋಹಿತ್ ಚಕ್ರತೀರ್ಥ ಮತ್ತು ವೀರ ಸಾವರ್ಕರ್
TV9 Web
| Edited By: Rakesh Nayak Manchi|

Updated on:Aug 27, 2022 | 1:15 PM

Share

ರಾಜ್ಯದಲ್ಲಿ ವೀರ ಸಾವರ್ಕರ್ ಬಗ್ಗೆ ಪರ-ವಿರೋಧಗಳು ಚರ್ಚೆಗಳಾಗುತ್ತಿರುವ ನಡುವೆಯೇ 8ನೇ ತರಗತಿಯ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿರುವ ವಿಚಾರ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ವೇಳೆ ಪಠ್ಯದಲ್ಲಿದ್ದ ಬ್ಲಡ್ ಗ್ರೂಪ್ ಪಠ್ಯವನ್ನು ತೆಗೆದು ಸಾವರ್ಕರ್ ಕುರಿತಾದ ಪಠ್ಯ ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಪಠ್ಯ ಪರಿಷ್ಕರಣೆ ವೇಳೆ ಟಿಪ್ಪು ವಿಚಾರದಲ್ಲಿ ವಿವಾದ ಉಂಟಾಗಿತ್ತು. ಇದೀಗ ಕೆಲವು ದಿನಗಳಿಂದ ಸಾವರ್ಕರ್ ವಿಚಾರದಲ್ಲಿ ರಾಜಕೀಯವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಪಠ್ಯ ಸೇರ್ಪಡೆಯೂ ಪುಸ್ತಕದ ಮತ್ತೊಂದು ದಂಗಲ್​ಗೆ ಕಾರಣವಾಗುವ ಸಾಧ್ಯತೆ ಇದೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು 8ನೇ ತರಗತಿ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿದೆ. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಸಾವರ್ಕರ್ ವಿಚಾರವನ್ನು ಸೇರಿಸಲಾಗಿದೆ.

ಸಾವರ್ಕರ್ ಪಠ್ಯದಲ್ಲಿ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಬಗ್ಗೆ ಹಾಗೂ ಅವರ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ಈ ವಿಚಾರ ಮುನ್ನೆಲೆಗೆ ಬಂದು ಪರ-ವಿರೋಧಗಳು ವ್ಯಕ್ತವಾಗಲು ಆರಂಭಿಸಿದೆ. ಟಿಪ್ಪು ಮತ್ತು ಸಾವರ್ಕರ್ ಭಾವಚಿತ್ರದಲ್ಲಿ ಉಂಟಾದ ವಿವಾದವು ಇಡೀ ರಾಜ್ಯಾದ್ಯಂತ ರಾಜಕೀಯ ಪ್ರೇರಿತ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈ ಹಿಂದೆ ಟಿಪ್ಪು ಪಠ್ಯ ಕೈಬಿಟ್ಟ ಹಾಗೂ ಆರ್​ಎಸ್​ಎಸ್ ಮುಖ್ಯಸ್ಥರ ಪಠ್ಯ ಸೇರ್ಪಡೆ ವಿಚಾರದಲ್ಲಿ ವಿವಾದಗಳು ಏರ್ಪಟ್ಟು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಸಾವರ್ಕರ್ ವಿಚಾರ ಮುನ್ನೆಲೆಗೆ ಬರುವ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತೊಮ್ಮೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.

ತಮ್ಮ ಕವಿತೆ ಬೋಧಿಸಲು ನಿರಾಕರಿಸಿದ ಸಾಹಿತಿ ರೂಪಾ

ರೋಹಿತ ಚಕ್ರತೀರ್ಥ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತವಾಗುತ್ತಿದ್ದು, ತಮ್ಮ ಕವಿತೆ ಬೋಧಿಸಲು ಒಪ್ಪಿಗೆ ಇಲ್ಲವೆಂದು ಅಧಿಕಾರಿಗಳಿಗೆ ಸಾಹಿತಿ ರೂಪಾ ಸ್ಪಷ್ಟಪಡಿಸಿದ್ದಾರೆ. ‘ಅಮ್ಮನಾಗುವುದೆಂದರೆ’ ಕವಿತೆಯ ಲೇಖಕಿ ರೂಪಾ ಹಾಸನ ಅವರು ಈ ಹಿಂದೆ ತಮ್ಮ ಕವಿತೆ ಬಳಕೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಪಠ್ಯ ಪರಿಷ್ಕರಣೆ ವಿವಾದ ಉಂಟಾದ ಬೆನ್ನಲ್ಲೆ  ತಮ್ಮ ಕವಿತೆ ಬೋಧಿಸಲು ಒಪ್ಪಿಗೆ ಇಲ್ಲವೆಂದು ಹೇಳಿದ್ದರು. ವಿವಾದ ತಣ್ಣಗಾದ ಬಳಿಕ ಲೇಖಕಿ ರೂಪಾ ಹಾಸನಗೆ ಅಧಿಕಾರಿಗಳು ಪತ್ರ ಬರೆದು ತಮ್ಮ ಕವಿತೆ ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ಕವಿತೆ ಬಳಸದಂತೆ ಮತ್ತೆ ರೂಪಾ ಅವರು ಪತ್ರ ಬರೆದಿದ್ದಾರೆ. ಪಠ್ಯಪುಸ್ತಕ ಮುದ್ರಣ ಆಗಿರುವ ಹಿನ್ನೆಲೆ ಅನುಮತಿಗಾಗಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳ ಮನವಿಯನ್ನು ರೂಪಾ ಅವರು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Sat, 27 August 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್