2027ರ ಸಿಬಿಎಸ್‌ಇ 10, 12ನೇ ತರಗತಿ ವೇಳಾಪಟ್ಟಿ ಪ್ರಕಟ; ಫೆಬ್ರವರಿ 16ರಿಂದ ಪರೀಕ್ಷೆಗಳು ಆರಂಭ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2027ನೇ ಶೈಕ್ಷಣಿಕ ಸಾಲಿನ 10 ಮತ್ತು 12ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಬಿಎಸ್‌ಇ ಪ್ರಕಟಣೆಯ ಪ್ರಕಾರ, 10 ಮತ್ತು 12ನೇ ತರಗತಿಗಳೆರಡರ ಪರೀಕ್ಷೆಗಳು ಫೆಬ್ರವರಿ 16ರಿಂದ ಪ್ರಾರಂಭವಾಗಲಿವೆ. 10ನೇ ತರಗತಿ ಪರೀಕ್ಷೆಗಳು ಮಾರ್ಚ್ 9ಕ್ಕೆ ಮುಕ್ತಾಯಗೊಳ್ಳಲಿದ್ದು, 12ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 9ರವರೆಗೆ ನಡೆಯಲಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ಅಥವಾ cbseacademic.nic.in ನಲ್ಲಿ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ನವದೆಹಲಿ, ನವೆಂಬರ್ 6: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2027ರ 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 16ರಿಂದ ಆರಂಭವಾಗಲಿದ್ದು, 10ನೇ ತರಗತಿಯ ಪರೀಕ್ಷೆಗಳು ಮಾರ್ಚ್ 9ಕ್ಕೆ ಮತ್ತು 12ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿವೆ. ವಿದ್ಯಾರ್ಥಿಗಳು ತಮ್ಮ ವೇಳಾಪಟ್ಟಿಯನ್ನು ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.inನಲ್ಲಿ ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
10ನೇ ತರಗತಿಯ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿ:
ಫೆಬ್ರವರಿ 17: ಗಣಿತ
ಫೆಬ್ರವರಿ 22: ವಿಜ್ಞಾನ
ಫೆಬ್ರವರಿ 26: ಇಂಗ್ಲಿಷ್
ಮಾರ್ಚ್ 3: ಹಿಂದಿ
ಇದನ್ನೂ ಓದಿ: 2027 ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಮತ್ತು ಮಂಡಳಿಯ ಕಟ್ಟುನಿಟ್ಟಿನ ಸೂಚನೆ
12ನೇ ತರಗತಿಯ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿ:
ಫೆಬ್ರವರಿ 16: ಭೌತಶಾಸ್ತ್ರ (ಫಿಸಿಕ್ಸ್)
ಫೆಬ್ರವರಿ 23: ಲೆಕ್ಕಶಾಸ್ತ್ರ
ಫೆಬ್ರವರಿ 25: ಭೂಗೋಳಶಾಸ್ತ್ರ (ಜಿಯಾಲಜಿ)
ಫೆಬ್ರವರಿ 27: ರಸಾಯನಶಾಸ್ತ್ರ (ಕೆಮಿಸ್ಟ್ರಿ)
ಮಾರ್ಚ್ 2: ಮನೋವಿಜ್ಞಾನ (ಸೈಕಾಲಜಿ)
ಮಾರ್ಚ್ 5: ಇಂಗ್ಲಿಷ್
ಮಾರ್ಚ್ 9: ಗಣಿತ
ಮಾರ್ಚ್ 13: ಹಿಂದಿ
ಮಾರ್ಚ್ 16: ಅರ್ಥಶಾಸ್ತ್ರ
ಮಾರ್ಚ್ 19: ರಾಜ್ಯಶಾಸ್ತ್ರ
ಮಾರ್ಚ್ 20: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ)
ಮಾರ್ಚ್ 25: ಜೀವಶಾಸ್ತ್ರ (ಬಯಾಲಜಿ)
ಮಾರ್ಚ್ 27: ಇತಿಹಾಸ
ಮಾರ್ಚ್ 30: ಸಮಾಜಶಾಸ್ತ್ರ
ಮಾರ್ಚ್ 31: ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಟೆಕ್ನಾಲಜಿ
ಏಪ್ರಿಲ್ 1: ಬ್ಯುಸಿನೆಸ್ ಸ್ಟಡೀಸ್, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್
ಇದನ್ನೂ ಓದಿ: ತ್ರಿಭಾಷಾ ಸೂತ್ರ ಮರುಪರಿಶೀಲನೆಗೆ ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್ ಸೂಚನೆ; 6ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿಗೆ ಸಲಹೆ
ವೇಳಾಪಟ್ಟಿ ಡೌನ್‌ಲೋಡ್ ಮಾಡುವ ವಿಧಾನ:
- ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: cbse.gov.in ಅಥವಾ cbseacademic.nic.in
- ಮುಖಪುಟದಲ್ಲಿರುವ ‘CBSE 10th and 12th date sheet 2027’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ಪರದೆ ಮೇಲೆ ತೆರೆದುಕೊಳ್ಳುತ್ತದೆ.
- ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ಪಡೆದುಕೊಳ್ಳಿ.
10 ಮತ್ತು 12ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಸಿಬಿಎಸ್‌ಇ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು cbseacademic.nic.in ವೆಬ್‌ಸೈಟ್‌ಗೆ ಭೇಟಿ ನೀಡಿ, ವಿಷಯವಾರು ಹಾಗೂ ತರಗತಿವಾರು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳ ಪಿಡಿಎಫ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




