AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Sasha: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ನಟ ದಳಪತಿ ವಿಜಯ್ ಸದ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡೋದು ಬಹುತೇಕ ಫಿಕ್ಸ್​ ಆಗಿದೆ. ಈ ನಡುವೆ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರಿ ದಿವ್ಯಾ ಸಾಶಾ ಅವರ ಬಗ್ಗೆ ಜನರು ಹೆಚ್ಚು ಹೆಚ್ಚು ಮಾಹಿತಿ ಹುಡುಕುತ್ತಿದ್ದಾರೆ. ಆದ್ದರಿಂದ ದಿವ್ಯಾ ಸಾಶಾ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Divya Sasha: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ
ವಿಜಯ್ ಪುತ್ರಿ ದಿವ್ಯಾ ಸಾಶಾImage Credit source: Facebook
ಅಕ್ಷತಾ ವರ್ಕಾಡಿ
|

Updated on:May 06, 2026 | 4:12 PM

Share

ಸುಮಾರು ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದಳಪತಿ ವಿಜಯ್ ಅವರು ಆಕ್ಷನ್, ಡ್ಯಾನ್ಸ್ ಮತ್ತು ನಟನೆಯ ಮೂಲಕ ದಕ್ಷಿಣ ಭಾರತದಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಇವರು, ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಸದ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಈ ಐತಿಹಾಸಿಕ ಬದಲಾವಣೆಯ ನಡುವೆ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರಿ ದಿವ್ಯಾ ಸಾಶಾ ಅವರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಜನರು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿದ್ದಾರೆ.

ವಿಜಯ್ ಪುತ್ರಿ ದಿವ್ಯಾ ಸಾಶಾ ಶೈಕ್ಷಣಿಕ ಹಿನ್ನೆಲೆ (Education):

2005 ರಲ್ಲಿ ಜನಿಸಿದ ದಿವ್ಯಾ, ಬಾಲ್ಯದಿಂದಲೇ ಶಿಸ್ತು ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬೆಳೆದವರು. ಈಕೆ ಚೆನ್ನೈನ ಪ್ರತಿಷ್ಠಿತ ಅಮೇರಿಕನ್ ಇಂಟರ್ನ್ಯಾಷನಲ್ ಸ್ಕೂಲ್ (AISC) ನಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ, ಕ್ರೀಡೆಯಲ್ಲೂ ದಿವ್ಯಾ ಸೈ ಎನಿಸಿಕೊಂಡಿದ್ದಾರೆ. ಇವರು ಒಬ್ಬ ಅದ್ಭುತ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ತಮ್ಮ ಶಾಲಾ ತಂಡವನ್ನು ಪ್ರತಿನಿಧಿಸಿ ಹಲವು ಪಂದ್ಯಾವಳಿಗಳಲ್ಲಿ ಜಯಗಳಿಸಿದ್ದಾರೆ.

ಇದನ್ನೂ ಓದಿ: ವಿಜಯದ ಬೆನ್ನಲ್ಲೇ ವಿಜಯ್​ ನಿವಾಸಕ್ಕೆ ನಟಿ ತ್ರಿಷಾ ಆಗಮನ

ಬೆಳ್ಳಿಪರದೆಗೆ ಪದಾರ್ಪಣೆ (Film Career):

ಅನೇಕ ಸ್ಟಾರ್ ಕಿಡ್‌ಗಳಂತೆ ದಿವ್ಯಾ ಕೂಡ ಅತಿ ಸಣ್ಣ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. 2016 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ‘ತೆರಿ’ (Theri) ಈಕೆಯ ಮೊದಲ ಚಿತ್ರ. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವಿಜಯ್ ಅವರ ಮಗಳ ಪಾತ್ರದಲ್ಲೇ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಭವಿಷ್ಯದ ಯೋಜನೆಗಳು:

ತಂದೆ ವಿಜಯ್ ಚಿತ್ರರಂಗದ ದೊಡ್ಡ ನಟನಾಗಿದ್ದರೂ ಮತ್ತು ಸಹೋದರ ಜೇಸನ್ ಸಂಜಯ್ ಸಿನಿಮಾ ನಿರ್ದೇಶನದತ್ತ ಆಸಕ್ತಿ ತೋರಿದ್ದರೂ, ದಿವ್ಯಾ ಸಾಶಾ ಮಾತ್ರ ಪ್ರಸ್ತುತ ತಮ್ಮ ಉನ್ನತ ಶಿಕ್ಷಣದತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಅವರು ಪೂರ್ಣಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಾರೆಯೇ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ. ಸಾಮಾಜಿಕ ಜಾಲತಾಣಗಳಿಂದ ಮತ್ತು ಗಾಸಿಪ್‌ಗಳಿಂದ ದೂರವಿರುವ ದಿವ್ಯಾ, ತಮ್ಮ ಸರಳತೆಯಿಂದಲೇ ವಿಜಯ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Wed, 6 May 26

Follow Us
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?