ರಾಜೀನಾಮೆ ಸಲ್ಲಿಸಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್; ಡಿಸೆಂಬರ್ 12ಕ್ಕೆ ಪ್ರಮಾಣ ವಚನ ಸ್ವೀಕಾರ
ಮೂಲಗಳ ಪ್ರಕಾರ, ಹೊಸ ಗುಜರಾತ್ ಕ್ಯಾಬಿನೆಟ್ ಡಿಸೆಂಬರ್ 12 ರಂದು ಮುಖ್ಯಮಂತ್ರಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದರಲ್ಲಿ ಹನ್ನೆರಡುಕ್ಕೂ ಹೆಚ್ಚು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದೆಹಲಿ: ಗುಜರಾತ್ (Gujarat )ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಶುಕ್ರವಾರ ಗಾಂಧಿನಗರದ ರಾಜಭವನಕ್ಕೆ ತೆರಳಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಹೊಸ ಗುಜರಾತ್ ಕ್ಯಾಬಿನೆಟ್ ಡಿಸೆಂಬರ್ 12 ರಂದು ಮುಖ್ಯಮಂತ್ರಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದರಲ್ಲಿ ಹನ್ನೆರಡುಕ್ಕೂ ಹೆಚ್ಚು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುಜರಾತ್‌ನಲ್ಲಿ ಐತಿಹಾಸಿಕ ಜನಾದೇಶವನ್ನು ಪಡೆದುಕೊಂಡಿರುವ ಬಿಜೆಪಿ ಗುರುವಾರ ರಾಜ್ಯದ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಮುಂದುವರಿಯಲಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದೆ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೂಪೇಂದ್ರ ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Chief Minister of Gujarat Bhupendra Patel submits the resignation of his government to Governor Acharya Devvrat. #GujaratElectionResult https://t.co/hcxor7YhyI pic.twitter.com/88e5lZnFRb
ಇದನ್ನೂ ಓದಿ— ANI (@ANI) December 9, 2022
ಭೂಪೇಂದ್ರ ಪಟೇಲ್ ಬಗ್ಗೆ
ಜುಲೈ 15, 1962 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುಜರಾತಿ ಕಡವ ಪಾಟಿದಾರರ ಕುಟುಂಬದಲ್ಲಿ ಜನಿಸಿದ ಭೂಪೇಂದ್ರ ಪಟೇಲ್, ಏಪ್ರಿಲ್ 1982 ರಲ್ಲಿ ಅಹಮದಾಬಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದರು. ರಾಜಕೀಯಕ್ಕೆ ಹೋಗುವ ಮೊದಲು ಅವರು ಬಿಲ್ಡರ್ ಆಗಿ ಕೆಲಸ ಮಾಡಿದ್ದರು. ಭೂಪೇಂದ್ರಭಾಯಿ ಪಟೇಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಸರ್ದಾರ್ಧಾಮ್ ವಿಶ್ವ ಪಾಟಿದಾರ್ ಕೇಂದ್ರದ ಟ್ರಸ್ಟಿ ಮತ್ತು ಪ್ರತಿಷ್ಠಾನದ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅವರು ದಾದಾ ಭಗವಾನ್ ಅವರ ಅಕ್ರಮ್ ವಿಜ್ಞಾನ ಚಳವಳಿಯ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ. ಅದಕ್ಕಾಗಿಯೇ ಅವರನ್ನು “ದಾದಾ” ಎಂದು ಕರೆಯಲಾಗುತ್ತದೆ.
ಪಟೇಲ್ ಅವರು “ರಿಮೋಟ್ ಕಂಟ್ರೋಲ್” ಸಿಎಂ ಆಗುತ್ತಾರೆ ಎಂಬ ಆರೋಪಗಳು ಮತ್ತು ಊಹಾಪೋಹಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿಯು ತನ್ನ ವೇಗವನ್ನು ಮುಂದುವರೆಸುತ್ತದೆ ಎಂದು ನಾನು ನಂಬುತ್ತೇನೆ ಎಂದು ವಿಶ್ವಾಸ ಪಡಿಸಿದ್ದಾರೆ.
ಗುಜರಾತ್ ರಾಜ್ಯ ಚುನಾವಣೆ 2022 ರಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್‌ನ 1985 ರ ದಾಖಲೆಯನ್ನು ಮುರಿದಿದೆ. ಕಾಂಗ್ರೆಸ್ ನ ಸಂಖ್ಯಾಬಲ 17ಕ್ಕೆ ಇಳಿದಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) 5 ಸೀಟು ಗೆದ್ದುಕೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 9 December 22