Athani Election Results: ಅಥಣಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿಗೆ ಗೆಲುವು
Athani Assembly Election Result 2023 Live Counting Updates:ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡಲಿದೆ.

Athani Assembly Election Results 2023: ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ (Athani Assembly Constituency) ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ನಾಯಕ ಮಹೇಶ್ ಈರನಗೌಡ ಕುಮಟಳ್ಳಿ ಶಾಸಕರಾಗಿದ್ದಾರೆ, 2018 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ನಂತರ ಬಿಜೆಪಿಗೆ ಹಾರಿದ್ದ ಕಮಟಳ್ಳಿ 2019 ರ ಉಪಚುನಾವಣೆಯಲ್ಲಿಯೀ ಗೆದ್ದು ಬೀಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು ಸವದಿ ಗೆದ್ದಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ್ ಸವದಿ ಬಿಗ್ ಶಾಕ್ ಕೊಟ್ಟಿದ್ದಾರೆ.
ಇತ್ತ ಆಮ್ ಆದ್ಮಿ ಪಕ್ಷವು ಸಂಪತ್ ಕುಮಾರ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದು ಜೆಡಿಎಸ್ ಶಶಿಕಾಂತ್ ಪಡಸಲಗಿ ಅವರನ್ನು ಕಣಕ್ಕಿಳಿಸಿದೆ.
2019 ರ ಅಂಕಿ ಅಂಶಗಳ ಪ್ರಕಾರ ಅಥಣಿ ವಿಧಾನಸಭೆಯಲ್ಲಿ ಒಟ್ಟು ಮತದಾರರ ಸಂಖ್ಯೆ 2,17,974 ಆಗಿದೆ. 2011 ರ ಜನಗಣತಿಯ ಪ್ರಕಾರ, ಅಥಣಿ ಅಸೆಂಬ್ಲಿಯಲ್ಲಿ ಸರಿಸುಮಾರು 34,353 ಎಸ್‌ಸಿ ಮತದಾರರು ಇದ್ದಾರೆ, 5,449 ಎಸ್ಟಿ, 27,029 ಮುಸ್ಲಿಂ ಮತದಾರರು ಇದ್ದಾರೆ.
Published On - 2:04 am, Sat, 13 May 23



