Hadagali Election Results: ಹಡಗಲಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಬಿಜೆಪಿಯ ಕೃಷ್ಣ ನಾಯಕ ಗೆಲುವು
Hadagali Assembly Election Result 2023 Live Counting Updates: ಹಡಗಲಿ ವಿಧಾನಸಭಾ ಕ್ಷೇತ್ರ 2008ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾದಾಗ ಬಿಜೆಪಿಯ ಚಂದ್ರ ನಾಯ್ಕ ಗೆಲುವು ಸಾಧಿಸಿದರು. ನಂತರ 2013 ಮತ್ತು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಪರಮೇಶ್ವರ್ ನಾಯ್ಕ್ ಎರಡು ಬಾರಿ ಶಾಸಕರಾಗಿ, ಆಯ್ಕೆಯಾಗಿದ್ದರು
Hadagali Assembly Election Results 2023: ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ (Hadagali Assembly Constituency)ದಲ್ಲಿ ಬಿಜೆಪಿಯ ಕೃಷ್ಣ ನಾಯಕ ಗೆದ್ದಿದ್ದಾರೆ. 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮರಿಸ್ವಾಮಿ ಎಂಬುವವರು, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಂಗಡಿ ಚೆನ್ನಬಸಪ್ಪನವರನ್ನು ಸೋಲಿಸಿದ್ದರು,1961 ರಲ್ಲಿ ಅಂಗಡಿ ಚನ್ನಬಸಪ್ಪ ಮತ್ತೆ ಸ್ಪರ್ಧಿಸಿ ಜಯಗಳಿಸಿದರೆ, 1968ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಎನ್ಎಂಕೆ ಸೋಗಿ ಗೆದ್ದರು,1972ರಲ್ಲಿ ಸಿ ಅಂದಾನಪ್ಪ 1978ರಲ್ಲಿಕೋಗಳಿ ಕರಿಬಸವನ ಗೌಡ ಗೆಲುವಿನ ಮೂಲಕ ಕಾಂಗ್ರೆಸ್ ಇಲ್ಲಿ ಅಧಿಪತ್ಯ ಸ್ಥಾಪಿಸಿತು. 1983ರಲ್ಲಿಇದು ಬದಲಾಯಿತು. ಆ ಬಾರಿ ಜನತಾ ಪಕ್ಷದಿಂದ ಎಂ ಪಿ ಪ್ರಕಾಶ್ ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್ ಮತ್ತೆ ಗೆದ್ದಿತು. 1994ರ ಚುನಾವಣೆಯಲ್ಲಿ ಜನತಾದಳದ ಎಂ ಪಿ ಪ್ರಕಾಶ್, 1999ರಲ್ಲಿಕಾಂಗ್ರೆಸ್ ಪಕ್ಷದ ನಂದಿಹಳ್ಳಿ ಹಾಲಪ್ಪ, 2004ರಲ್ಲಿ ಜೆಡಿಎಸ್ ನಿಂದ ಎಂ ಪಿ ಪ್ರಕಾಶ್ ಶಾಸಕರಾದರು.
2008ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾದಾಗ ಬಿಜೆಪಿಯ ಚಂದ್ರ ನಾಯ್ಕ ಗೆಲುವು ಸಾಧಿಸಿದರು. ನಂತರ 2013 ಮತ್ತು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಪರಮೇಶ್ವರ್ ನಾಯ್ಕ್ ಎರಡು ಬಾರಿ ಶಾಸಕರಾಗಿ, ಆಯ್ಕೆಯಾಗಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಪರಮೇಶ್ವರ ನಾಯ್ಕ್ ಪಿಟಿ, ಬಿಜೆಪಿಯಿಂದ ಕೃಷ್ಣ ನಾಯಕ ಮತ್ತು ಎಎಪಿಯಿಂದ ಶ್ರೀಧರ್ ನಾಯಕ, ಜೆಡಿಎಸ್ ನಿಂದ ಪುತ್ರೇಶ್ ಕಣದಲ್ಲಿದ್ದಾರೆ.
Published On - 2:14 am, Sat, 13 May 23