Hangal Election Results: ಹಾನಗಲ್ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಶಿವರಾಜ್ ಸಜ್ಜನರ, ಶ್ರೀನಿವಾಸ ಮಾನೆ ಮಧ್ಯೆ ಪೈಪೋಟಿ
Hangal Assembly Election Results 2023 Live Counting Updates: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನರ, ಕಾಂಗ್ರೆಸ್ನಿಂದ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್ನಿಂದ ಮನೋಹರ ತಹಶೀಲ್ದಾರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Hangal Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಹಾನಗಲ್ ವಿಧಾನಸಭಾ ಕ್ಷೇತ್ರದಿಂದ (Hangal Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನರ ಸ್ಪರ್ಧಿಸಿದ್ದಾರೆ. ಇನ್ನು ಇವರು ಈ ಹಿಂದೆ ನಡೆದಿದ್ದ ಉಪಚುನಾವಣೆಯಲ್ಲಿ 80,117 ಮತಗಳನ್ನ ಪಡೆದು 7,373 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಹೇಗಾದರೂ ಮಾಡಿ ಗೆಲ್ಲಬೇಕೆಂದು ಹರಸಾಹಸ ಪಡುತ್ತಿದ್ದಾರೆ. ಜೊತೆಗೆ ಅಬ್ಬರದ ಪ್ರಚಾರ ಕೂಡ ಕೈಗೊಂಡಿದ್ದಾರೆ.
ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಉತ್ತಮ ಹಿಡಿತವನ್ನ ಸಾಧಿಸಿದ್ದಾರೆ. ಈ ಹಿಂದೆ ನಡೆದ ಉಪಚುನಾವಣೆಯಲ್ಲಿ 87,490 ಮತವನ್ನ ಪಡೆದು ಗೆದ್ದುಬೀಗಿದ್ದರು. ಈ ಬಾರಿ ಕೂಡ ಗೆಲ್ಲುವ ಭರವಸೆ ಹೊಂದಿದ್ದಾರೆ. ಇನ್ನು ಜೆಡಿಎಸ್ನಿಂದ ಮನೋಹರ ತಹಶೀಲ್ದಾರ್ ಸ್ಪರ್ಧೆ ಮಾಡಿದ್ದು, ಇವರು ಈ ಹಿಂದೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಬರೋಬ್ಬರಿ 4 ಬಾರಿ ಗೆದ್ದಿದ್ದರು. ಆದರೂ ಇವರನ್ನ ಕಾಂಗ್ರೆಸ್ ಕೈಬಿಟ್ಟಿತ್ತು. ಬಳಿಕ ಇವರು ಇದೋಗ ಜೆಡಿಎಸ್ ಸೇರಿಕೊಂಡಿದ್ದಾರೆ. ಜೊತೆಗೆ ಗೆಲ್ಲಬೇಕೆಂದು ಭರ್ಜರಿ ಪ್ರಚಾರ ಕೂಡ ಕೈಗೊಂಡಿದ್ದಾರೆ. ಹೀಗಾಗಿ ಒಂದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರು ಗೆಲುವಿನ ಮಂದಹಾಸ ಬಿರುತ್ತಾರೆ ಕಾದು ನೋಡಬೇಕಿದೆ.