Holenarasipura Election Results 2023: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗೆಲುವಿನತ್ತ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ರೇವಣ್ಣ
Holenarasipura Assembly Election Result 2023 Live Counting Updates: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರೂರಾದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ನ ಭದ್ರಕೋಟೆ ಎನಿಸಿದ್ದು ಎಚ್ಡಿ ರೇವಣ್ಣ ಸತತ 5ನೇ ಗೆಲುವಿನತ್ತ ಸಾಗಿದ್ಧಾರೆ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಕಟ ಪೈಪೋಟಿ ನೀಡಿದರೂ ರೇವಣ್ಣ ಮುನ್ನಡೆ ತಡಯಲಾಗುತ್ತಿಲ್ಲ.
Holenarasipura Assembly Election Result 2023: ಕರ್ನಾಟಕ ವಿಧಾನಸಭಾ ಚುನಾವಣೆ2023 ಫಲಿತಾಂಶಕ್ಕೆ ಕ್ಷಣಗಣನೆ ಇದೆ. ಮೇ 10ರಂದು ನಡೆದಿದ್ದ ಚುನಾವಣೆಗೆ ಮೇ 13, ಇಂದು ಫಲಿತಾಂಶ ಪ್ರಕಟವಾಗುತ್ತಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ (Holenarasipura Assembly Constituency) ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ 5ನೇ ಬಾರಿ ಗೆಲುವಿನತ್ತ ಸಾಗಿದ್ದಾರೆ. ಹೊಳೆನರಸೀಪುರ ಎಚ್.ಡಿ. ರೇವಣ್ಣ (HD Revanna) ಮತ್ತು ಜೆಡಿಎಸ್ನ ಭದ್ರಕೋಟೆಯಾಗಿಹೋಗಿದೆ. ಜೆಡಿಎಸ್ಗೆ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಇದ್ದದ್ದು ಕಾಂಗ್ರೆಸ್ಗೆ ಮಾತ್ರವೇ. ಕಾಂಗ್ರೆಸ್ ಪಕ್ಷ ಈ ಬಾರಿ ಶ್ರೇಯಸ್ ಎಂ ಪಟೇಲ್ (Shreyas M Patel) ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಕುತೂಹಲವೆಂದರೆ ಹಾಸನದಲ್ಲಿ ಎಚ್.ಡಿ. ದೇವೇಗೌಡರಿಗೆ ಪ್ರಬಲ ಎದುರಾಳಿಯಾಗಿದ್ದ ಹಾಗೂ ಇದೇ ಹೊಳೆನರಸೀಪುರದಲ್ಲಿ ಎಚ್ಡಿಡಿಯನ್ನು ಸೋಲಿಸಿದ್ದ ಪುಟ್ಟಸ್ವಾಮಿಗೌಡ ಅವರ ಮೊಮ್ಮಗನೇ ಶ್ರೇಯಸ್ ಪಟೇಲ್. ಹೀಗಾಗಿ, ಈ ಬಾರಿ ಹೊಳೆನರಸೀಪುರ ಚುನಾವಣೆಯ ಫಲಿತಾಂಶ ಬಹಳ ಕುತೂಹಲ ಮೂಡಿಸಿತ್ತು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ
ಜೆಡಿಎಸ್: ಹೆಚ್.ಡಿ. ರೇವಣ್ಣ- ಮುನ್ನಡೆ
ಕಾಂಗ್ರೆಸ್: ಶ್ರೇಯಸ್ ಎಂ ಪಟೇಲ್
ಬಿಜೆಪಿ: ದೇವರಾಜೇಗೌಡ
ಬಿಜೆಪಿಯಿಂದ ದೇವರಾಜೇಗೌಡ ಅವರನ್ನು ಕಣಕ್ಕಿಳಿಸಲಾಗಿದೆಯಾದರೂ ಈ ಸ್ಪರ್ಧೆ ಕೇವಲ ಔಪಚಾರಿಕ ಮಾತ್ರ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಬಿಟ್ಟು ಉಳಿದವರಾರಿಗೂ ಠೇವಣಿ ಸಿಗುವುದೂ ಕಷ್ಟಕರ. ಹಾಸನದಲ್ಲಿ ಪೂರ್ಣ ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಹೊಳೆನರಸೀಪುರವೂ ಒಂದು. ದೇವೇಗೌಡರ ಕುಟುಂಬದವರಿಗೆ ತವರೂ ಆಗಿರುವ ಹೊಳೆನರಸೀಪುರದಲ್ಲಿ ಜೆಡಿಎಸ್ ಸಹಜವಾಗಿ ಬಲಿಷ್ಠವಾಗಿದೆ. 1989ಮತ್ತು 1999ಅನ್ನು ಹೊರತುಪಡಿಸಿದರೆ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ. ದೇವೇಗೌಡ ಮತ್ತವರ ಕುಟುಂಬದವರು ಯಾರೂ ಸೋತಿಲ್ಲ. ಎಚ್.ಡಿ. ರೇವಣ್ಣ ಸತತ 5ನೇ ಗೆಲುವಿನತ್ತ ಸಾಗಿದ್ದಾರೆ.
2018ರ ಚುನಾವಣೆಯಲ್ಲಿ ಎಚ್ಡಿ ರೇವಣ್ಣ ಶೇ. 60ಕ್ಕಿಂತ ಹೆಚ್ಚು ಮತ ಪಡೆದು 44 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ರೇವಣ್ಣ ಗೆಲುವಿನ ಅಂತರ ಎಷ್ಟು ಎಂಬುದಷ್ಟೇ ಉಳಿದಿರುವ ಕುತೂಹಲ.
Published On - 3:25 am, Sat, 13 May 23