Kampli Election 2023 Winner: ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಜೆಎನ್ ಗಣೇಶ್ ಗೆಲುವು
JN Ganesh: ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ (Kampli Assembly Constituency) ಕಾಂಗ್ರೆಸ್ ಪಕ್ಷದ ಜೆಎನ್ ಗಣೇಶ್ ಗೆಲುವು ಸಾಧಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದ ಟಿಎಚ್ ಸುರೇಶ ಬಾಬು ಹಾಗು JDS ಪಕ್ಷದ ರಾಜು ನಾಯಕ ಸೋಲನ್ನು ಎದುರಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ (Kampli Assembly Constituency) ಕಾಂಗ್ರೆಸ್ ಪಕ್ಷದ ಜೆಎನ್ ಗಣೇಶ್ ಗೆಲುವು ಸಾಧಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದ ಟಿಎಚ್ ಸುರೇಶ ಬಾಬು ಹಾಗು JDS ಪಕ್ಷದ ರಾಜು ನಾಯಕ ಸೋಲನ್ನು ಎದುರಿಸಿದ್ದಾರೆ.
ಈ ಕ್ಷೇತ್ರದ ಮೊಟ್ಟ ಮೊದಲ ಶಾಸಕ ಟಿ.ಎಚ್.ಸುರೇಶ್ ಬಾಬು. 2008ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದ ಟಿ.ಎಚ್ ಸುರೇಶ್ ಬಾಬು 61,388 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಣ್ಣ ಹನುಮಕ್ಕ ಸುಮಾರು 22,336 ಮತಗಳ ಅಂತರದಲ್ಲಿ ಸೋತಿದ್ದರು. ಬಳಿಕ ಟಿ.ಎಚ್ ಸುರೇಶ್ ಬಾಬು2013 ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್‌ಸಿಪಿಯಿಂದ ಸ್ಪರ್ಧಿಸಿ ಜೆಎನ್ ಗಣೇಶ್ ವಿರುದ್ಧ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲೇ ತಮ್ಮದೇ ಹಿಡಿತ ಹೊಂದಿ ಸತತ ಗೆಲುವು ಸಾಧಿಸುತ್ತಿದ್ದ ಸುರೇಶ್ ಬಾಬು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ಜೆಎನ್ ಗಣೇಶ್ 2018ರ ಚುನಾವಣೆಯಲ್ಲಿ ಚಕ್ರವ್ಯೂಹ ರಚಿಸಿ, 5,555 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಕಂಪ್ಲಿ ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಗಂಡುಗಲಿ ಕುಮಾರರಾಮನ ವೀರಭೂಮಿ. 14ನೇ ಶತಮಾನದಲ್ಲಿ ಇದ್ದಂತಹ ಶಕ್ತಿಶಾಲಿ ಹಿಂದೂ ಸಾಮ್ರಾಜ್ಯದ ಹೆಸರೇ ಕಂಪ್ಲಿಯಾಗಿದ್ದು, ಕಂಪ್ಲಿ ಪಟ್ಟಣ ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಐತಿಹಾಸಿಕವಾಗಿ ಶ್ರೀಮಂತ ಇತಿಹಾಸ ಹೊಂದಿರುವ ಕಂಪ್ಲಿ ಇಂದು ರಾಜಕೀಯವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿದೆ.




