KGF Election 2023 Winner: ಕೆಜಿಎಫ್ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ನಿಂದ ರೂಪ ಕಲಾ ಎಂ ಮುನ್ನಡೆ, ಬಿಜೆಪಿಯ ಅಶ್ವಿನಿ ಸಂಪಂಗಿ ಹಿನ್ನೆಡೆ
KGF Assembly Election Result 2023 Live Updates: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ರೂಪ ಕಲಾ ಎಂ ಬಾರೀ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಅಶ್ವಿನಿ ಸಂಪಂಗಿ ಹಿನ್ನೆಡೆ

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಪುತ್ರಿ ಹಾಲಿ ಶಾಸಕಿ ರೂಪ ಕಲಾ ಎಂ ಸ್ಪರ್ಧೆ ಮಾಡಿದ್ದು ಎರಡನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು ಇದೀಗಾ ಭಾರೀ ಮುನ್ನಡೆಯಲ್ಲಿದ್ದಾರೆ. ರೂಪ ಕಲಾ ಎಂ ಬಾರೀ ಅಂತರದಲ್ಲಿ ಗೆಲುವಿನ ಸಂಭ್ರಮದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಮಾಜಿ ಶಾಸಕ ವೈ.ಸಂಪಂತಿ ಪುತ್ರಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಅಭ್ಯರ್ಥಿ ಅಶ್ವಿನಿ ಸಂಪಂಗಿ, ಈ ಸಲವೂ ಕೂಡ ಪರಾಭವಗೊಂಡಿದ್ದಾರೆ. ಜೆಡಿಎಸ್ ಪಕ್ಷದದಿಂದ ಹೊಸ ಮುಖ ರಮೇಶ್ ಬಾಬು ಹಾಗೂ ಆರ್.ಪಿ.ಐ ಪಕ್ಷದಿಂದ ಮಾಜಿ ಶಾಸಕ ಎಸ್.ರಾಜೇಂದ್ರನ್ ಸ್ಪರ್ಧೆ ಮಾಡಿದ್ದು ಗೆಲುವು ಇವರ ಕೈ ಹಿಡಿದಿಲ್ಲ. ಕೆಜಿಎಫ್ ವಿಧಾನಸಭಾ ಕ್ಷೇತ್ರ-146 (ಎಸ್.ಸಿ.ಮೀಸಲು ಕ್ಷೇತ್ರ). ಹೀಗಾಗಿ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಇದೀಗಾ ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಪುತ್ರಿ ಹಾಲಿ ಶಾಸಕಿ ರೂಪ ಕಲಾ ಎಂ ಬಾರೀ ಮುನ್ನಡೆಯಲ್ಲಿದ್ದು, ಗೆಲುವಿನ ಸಂಭ್ರಮದಲ್ಲಿದ್ದಾರೆ.
ಪ್ರಪಂಚಕ್ಕೆ ಚಿನ್ನವನ್ನು ಕೊಟ್ಟ ಕೋಲಾರ ಗೋಲ್ಡ್ ಫೀಲ್ಡ್ ಎಂದು ಹೆಸರಾಗಿರುವ ಚಿನ್ನದ ನಾಡು ಕೆಜಿಎಫ್ ಕ್ಷೇತ್ರದಲ್ಲಿ ಹೆಚ್ಚು ತಮಿಳು ಪಕ್ಷಗಳ ಪ್ರಭಾವ ಹೆಚ್ಚಾಗಿದೆ, ಕ್ಷೇತ್ರ ಪುನರ್ ವಿಂಗಡನೆಯಾಗುವವರೆಗೂ ಕೆಜಿಎಫ್ ಕ್ಷೇತ್ರದಲ್ಲಿ ತಮಿಳು ಪಕ್ಷಗಳದ್ದೇ ಪ್ರಾಬಲ್ಯವಿತ್ತು, ಇಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಜನ ಮನ್ನಣೆ ನೀಡರಲಿಲ್ಲ ಆದರೆ, 2008ರ ಕ್ಷೇತ್ರ ಪುನರ್ ವಿಂಗಡಣೆ ನಂತರ ಕ್ಷೇತ್ರಕ್ಕೆ ಗ್ರಾಮೀಣ ಬಾಗಗಳು ಸೇರಲ್ಪಟ್ಟ ನಂತರ ಇಲ್ಲಿ ಜನರು ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕಿದ್ದರು. ಎರಡು ಬಾರಿ ಬಿಜೆಪಿ ಪಕ್ಷಕ್ಕೆ ಮಣೆ ಹಾಕಿದ್ದ ಜನರು ಕಳೆದ ಬಾರಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ 95504 ಮಂದಿ ಪುರುಷರು, 96208 ಮಂದಿ ಮಹಿಳೆಯರು ಸೇರಿ 1,91,750 ಮಂದಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 232 ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಚಂಗಲರಾಯರೆಡ್ಡಿ ಅವರ ಜನ್ಮಸ್ಥಳ ಕ್ಯಾಸಂಬಳ್ಳಿ ಕೆಜಿಎಪ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ ಇನ್ನು ಕೆಜಿಎಫ್ ಕ್ಷೇತ್ರ ವ್ಯಾಪ್ತಿಯಲ್ಲಿ ರಾಬರ್ಟ್ಸನ್ ಪೇಟೆ, ಬೇತಮಂಗಲ, ಕ್ಯಾಸಂಬಳ್ಳಿ ಮೂರು ಹೋಬಳಿಗಳು ಬರುತ್ತವೆ. ಕ್ಷೇತ್ರದಲ್ಲಿ ಎಸ್‌ಸಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಸಮುದಾಯದ ಜನಸಂಖ್ಯೆ ವಿಷಯದಲ್ಲಿ ನಂತರದ ಸ್ಥಾನ ರೆಡ್ಡಿ ಸಮುದಾಯ, ಕುರುಬ, ಬಲಜಿಗರು ಇದ್ದಾರೆ. ರಾಬರ್ಟ್ ಸನ್ ಪೇಟೆ ಹೋಬಳಿಯಲ್ಲಿ ಎಸ್‌ಸಿ, ಮೊದಲಿಯಾರ್, ಬೇಗಮಂಗಲ ಹೋಬಳಿಯಲ್ಲಿ ಒಕ್ಕಲಿಗರು, ಬಲಿಜಿಗರು, ಕುರುಬ, ರೆಡ್ಡಿ ಸಮುದಾಯ ಮತ್ತು ಕ್ಯಾಸಂಬಳ್ಳಿ ಹೋಬಳಿಯಲ್ಲಿ ರೆಡ್ಡಿ, ಕುರುಬ, ಬಲಜಿಗ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದಲ್ಲಿ ಎಡಪಕ್ಷಗಳಿಗೆ ಹಾಗೂ ತಮಿಳುನಾಡು ಪ್ರಾದೇಶಿಕ ಪಕ್ಷಗಳಿಗೆ ಸಿಕ್ಕಿದಷ್ಟು ಪ್ರಾಧಾನ್ಯತೆ ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿಲ್ಲ.
1957ರಲ್ಲಿ ಸಿಪಿಐನ ಎಂ.ಸಿ.ನರಸಿಂಹನ್, ಎಸ್‌ಸಿಎಫ್‌ನ ಸಿ.ಎಂ. ಆರ್ಮುಗಂ, 1962ರಲ್ಲಿ ಸಿಪಿಐ ಪಕ್ಷದ ಎಸ್.ರಾಜಗೋಪಾಲ್, 1967ರಲ್ಲಿ ಕಾಂಗ್ರೆಸ್‌ನ ಎಸ್.ಆರ್.ಗೋಪಾಲ್, 1972ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಎಂ.ಆರ್ಮುಗಂ, 1978ರಲ್ಲಿ ಆರ್‌ಪಿಐನ ಸಿ.ಎಂ.ಆರ್ಮುಗಂ, 1983ರಲ್ಲಿ ಸಾಲಿನಲ್ಲಿ ಎಐಡಿಎಂಕೆ ಎಂ.ಭಕ್ತವತ್ಸಲಂ, 1985ರಲ್ಲಿ ಸಿಪಿಎಂ ಪಕ್ಷದ ಟಿ.ಎಸ್.ಮಣಿ, 1989ರಲ್ಲಿ ಸಾಲಿನಲ್ಲಿ ಎಐಡಿಎಂಕೆ ಎಂ.ಭಕ್ತವತ್ಸಲಂ, 1994ರಲ್ಲಿ ಆರ್‌ಪಿಐ ಪಕ್ಷದ ಎಸ್.ರಾಜೇಂದ್ರನ್, 1999ನೇ ಸಾಲಿನಲ್ಲಿ ಎಐಎಡಿಎಂಕೆಯ ಎಂ.ಭಕ್ತವತ್ಸಲಂ, 2004ರಲ್ಲಿ ಸಾಲಿನಲ್ಲಿ ಆರ್‌ಪಿಐನ ಎಸ್. ರಾಜೇಂದ್ರನ್, 2008ನೇ ಸಾಲಿನಲ್ಲಿ ಬಿಜೆಪಿಯ ವೈ.ಸಂಪಂಗಿ,2013ನೇ ಸಾಲಿನಲ್ಲಿ ವೈ.ರಾಮಕ್ಕ ಆಯ್ಕೆಯಾಗಿದ್ದರು 2018ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ರೂಪಕಲಾ ಅವರು ಗೆಲುವು ಸಾಧಿಸಿದ್ದಾರೆ.
Published On - 12:46 am, Sat, 13 May 23