Mulabagilu Election 2023 Winner: ಮುಳಬಾಗಿಲು ವಿಧಾನಸಭಾ ಕ್ಷೇತ್ರ ಚುನಾವಣೆ​ 2023 ರಿಸಲ್ಟ್: ಜೆಡಿಎಸ್​​​​​​ ಸಮೃದ್ದಿ ಮಂಜುನಾಥ್ ​ಮನ್ನಡೆ

Mulbagal Assembly Election Result 2023 Live Counting Updates: ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಭಾರೀ ಮನ್ನಡೆಯಲ್ಲಿದ್ದಾರೆ.

Mulabagilu Election 2023 Winner: ಮುಳಬಾಗಿಲು ವಿಧಾನಸಭಾ ಕ್ಷೇತ್ರ ಚುನಾವಣೆ​ 2023 ರಿಸಲ್ಟ್:  ಜೆಡಿಎಸ್​​​​​​ ಸಮೃದ್ದಿ ಮಂಜುನಾಥ್ ​ಮನ್ನಡೆ
Mulbagal Election Result
Follow us
ಅಕ್ಷತಾ ವರ್ಕಾಡಿ
|

Updated on:May 13, 2023 | 3:14 PM

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ (Mulbagal Assembly Constituency) ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಭಾರೀ ಮನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆಸುಂದರ್ ರಾಜ್ ಹಾಗೂ ಕಾಂಗ್ರೆಸ್​​​​ ಆಭ್ಯರ್ಥಿ ಆದಿ ನಾರಾಯಣ ಅವರಿಗೆ ಹಿನ್ನೆಡೆಯಾಗಿದೆ.

ಸಾವಿರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಮುಳಬಾಗಿಲು ಕ್ಷೇತ್ರದಲ್ಲಿ ಶ್ರೀಮಂತ ಶಿಲ್ಪಕಲೆಯ, ರಾಜಮನೆತನಗಳು ಆಳ್ವಿಕೆ ನಡೆಸಿರುವ ಇತಿಹಾಸದ ಜೊತೆಗೆ ಪುರಾತನ ದೇವಾಲಯಗಳು ಇಂದಿಗೂ ಕ್ಷೇತ್ರದಲ್ಲಿ ಜನರಿಗೆ ದೇವಾಲಯದ ನಗರ ಎಂಬಂತೆ ಬಿಂಬಿತವಾಗಿವೆ. ಇಲ್ಲಿ ರಾಮಾಯಣ ಮಹಾಭಾರತ ಕಾಲದಿಂದ ಹಿಡಿದು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮದ್ವಾಚಾರ್ಯರ ವರೆಗೆ, ಗಂಗರು, ಹೊಯ್ಸಳರು, ಬಾದಾಮಿ ಚಾಲುಕ್ಯರು, ಚೋಳರು ಸೇರಿದಂತೆ ಹಲವಾರು ರಾಜ ಮನೆತಗಳು ಇಲ್ಲಿ ಆಳಿರುವಂತೆ ಐತಿಹಾಸವಿರುವ ಇರುವ ಮುಳಬಾಗಿಲು ಕ್ಷೇತ್ರವನ್ನು ರಾಜ್ಯದ ಮೂಡಣ ಬಾಗಿಲು ಎಂದು ಹೇಳಲಾಗುತ್ತದೆ. ಇನ್ನು ಚುನಾವಣೆ ಬಂತೆಂದರೆ ಸಾಕು ಮುಳಬಾಗಿಲಿನ ಕುರುಡುಮಲೆ ವಿನಾಯಕನಿಗೆ ಬಹುತೇಕ ರಾಜಕಾರಣಿಗಳು ಬಂದು ಹರಕೆ ಹೊರುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಬಹುತೇಕ ಜನರು ಕೃಷಿಯ ಮೇಲೆ ಅವಲಂಭಿತ ವಾಗಿದ್ದಾರೆ. ತರಕಾರಿಗಳು ಸೇರಿದಂತೆ ನೆಲಗಡಲೆ ಹಾಗೂ ಏಕದಳ, ದ್ವಿದಳ ದಾನ್ಯಗಳನ್ನು ಬೆಳೆಯುತ್ತಾರೆ. ಈ ಕ್ಷೇತ್ರದಲ್ಲಿ 103704 ಪುರುಷ, 104803 ಮಹಿಳಾ ಮತದಾರರು ಸೇರಿ ಒಟ್ಟು ಕ್ಷೇತ್ರದಲ್ಲಿ 208515 ಜನ ಮತದಾರರಿದ್ದು ಕ್ಷೇತ್ರದಲ್ಲಿ 277 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಮುಳಬಾಗಿಲು ಕ್ಷೇತ್ರವ್ಯಾಪ್ತಿಗೆ ಮುಳಬಾಗಿಲು ನಗರ, ಕಸಬಾ, ಆವಣಿ, ಬೈರಕೂರು, ದುಗ್ಗಸಂದ್ರ ಹಾಗೂ ತಾಯಲೂರು ಹೋಬಳಿ ಕೇಂದ್ರಗಳು ಒಳಪಡುತ್ತವೆ. ಈ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌.ಟಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನಸಂಖ್ಯೆ ಆಧಾರದಲ್ಲಿ, ನಂತರದ ಸ್ಥಾನದಲ್ಲಿ ಒಕ್ಕಲಿಗ, ಹಿಂದುಳಿದ ವರ್ಗ, ಮುಸ್ಲಿಂ ಸಮುದಾಯ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಮುಳಬಾಗಿಲು ಪಟ್ಟಣದಲ್ಲಿ ಬಲಿಜ ಸಮುದಾಯವದವರು ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ. ಮುಸ್ಲಿಂ, ಎಸ್‌ಸಿ, ಎಸ್‌ಟಿ ಸಮುದಾಯವರು ಜನಸಂಖ್ಯೆಯಲ್ಲಿ 2, 3ನೇ ಸ್ಥಾನದಲ್ಲಿದ್ದಾರೆ. ಕಸಾಬ ಹೋಬಳಿಯಲ್ಲಿ ಹಿಂದುಳಿದ ವರ್ಗ, ಮುಸ್ಲಿಂ, ಎಸ್‌ಸಿ,ಎಸ್‌ಟಿ, ತಾಯಲೂರು ಹೋಬಳಿಯಲ್ಲಿ ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ, ಮುಸ್ಲಿಂ, ದುಗ್ಗಸಂದ್ರ ಹೋಬಳಿಯಲ್ಲಿ ಒಕ್ಕಲಿಗ, ಹಿಂದುಳಿದ ವರ್ಗ, ಎಸ್‌ಸಿ,ಎಸ್‌ಟಿ, ಬೈರಕೂರು ಹೋಬಳಿಯಲ್ಲಿ ಒಕ್ಕಲಿಗ, ಹಿಂದುಳಿದ ವರ್ಗ, ಎಸ್‌ಸಿ,ಎಸ್‌ಟಿ, ಆವಣಿ ಹೋಬಳಿಯಲ್ಲಿ ಎಸ್‌ಸಿ,ಎಸ್‌ಟಿ, ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈವರೆಗೆ ಕ್ಷೇತ್ರದಲ್ಲಿ 1957ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಲ್. ನಾರಾಯಣಸ್ವಾಮಿ, 1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಪ್ಪ, 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ನಾರಾಯಣಪ್ಪ, 1967ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಚನ್ನಯ್ಯ, 1972ರಲ್ಲಿ ಪಕ್ಷೇತರ ಅಭ್ಯರ್ಥಿ ಪಿ.ಮುನಿಯಪ್ಪ, 1978ರಲ್ಲಿ ಐಎನ್‌ಸಿ(ಐ)ಅಭ್ಯರ್ಥಿ ಜೆ.ಎಂ.ರೆಡ್ಡಿ,1983ರಲ್ಲಿ ಪಕ್ಷೇತರ ಅಭ್ಯರ್ಥಿ ಬೀರೇಗೌಡ, 1985ರಲ್ಲಿ ಸಿಪಿಎಂನ ಆರ್.ವೆಂಕಟರಾಮಯ್ಯ, 1989ರಲ್ಲಿ ಕಾಂಗ್ರೆಸ್‌ನ ಎಂ.ವಿ.ವೆಂಕಟಪ್ಪ, 1994ರಲ್ಲಿ ಜನತಾದಳದ ಆರ್.ಶ್ರೀನಿವಾಸ್, 1999ನೇ ಸಾಲಿನಲ್ಲಿ ಕಾಂಗ್ರೆಸ್‌ನ ಎಂ.ವಿ.ವೆಂಕಟಪ್ಪ,2004ರಲ್ಲಿ ಜೆಡಿಎಸ್‌ನ ಆರ್.ಶ್ರೀನಿವಾಸ್, 2008ನೇ ಸಾಲಿನಲ್ಲಿ ಕಾಂಗ್ರೆಸ್ ಅಮರೇಶ್ ಹಾಗೂ 2013 ರಲ್ಲಿ ಪಕ್ಷೇತರ ಕೊತ್ತೂರು ಜಿ ಮಂಜುನಾಥ್​ ಮತ್ತು 2018 ರಲ್ಲೂ ಕಾಂಗ್ರೇಸ್​ ಬೆಂಬಲಿತ ಅಭ್ಯರ್ಥಿ ಹೆಚ್​.ನಾಗೇಶ್​ ಗೆಲುವು ಸಾದಿಸಿದ್ದರು. 2006 ರಿಂದ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್​ ಅವರ ಸಮಾಜ ಸೇವಾ ಕಾರ್ಯಗಳ ಮೂಲಕ ಹೆಚ್ಚಿನ ಜನ ಮನ್ನಣೆ ಗಳಿಸಿದ್ದು ಕೊತ್ತೂರು ಮಂಜುನಾಥ್​ ಜಾತಿ ಪ್ರಮಾಣ ಪತ್ರ ವಿವಾದ ಏರ್ಪಟ್ಟ ಹಿನ್ನೆಲೆ ಈಬಾರಿ ಕೊತ್ತೂರು ಮಂಜುನಾಥ್​ ಅವರಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮತದಾರರು ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:45 am, Sat, 13 May 23

BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ