AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Election Results: ಬಿಜೆಪಿಗೆ ಮತ್ತೆ ಮುಚ್ಚಿತು ದಕ್ಷಿಣದ ಹೆಬ್ಬಾಗಿಲು; ಕಮಲ ಪಡೆಯ ಏರಿಳಿತದ ಹಾದಿ ಹೀಗಿದೆ ನೋಡಿ

ಬಿಜೆಪಿಯು ಕರ್ನಾಟಕವನ್ನು ದಕ್ಷಿಣದ ರಾಜ್ಯಗಳ ಹೆಬ್ಬಾಗಿಲು ಎಂದು ಪರಿಗಣಿಸಿದೆ. ಕಳೆದ ನಾಲ್ಕು ದಶಕಗಳಿಂದ ಈ ಹೆಬ್ಬಾಗಿಲು ತೆರೆದು ಅಧಿಕಾರಕ್ಕೆ ಪ್ರವೇಶಿಸಲು ಪಕ್ಷವು ನಿರಂತರ ಹೋರಾಟ ನಡೆಸಿದೆ. ಆದರೆ ಅವಿರತ ಪ್ರಯತ್ನಗಳ ಹೊರತಾಗಿಯೂ, ಬಿಜೆಪಿಗೆ ಕರ್ನಾಟಕದ ಗಡಿಯನ್ನು ಬಹುಮತದೊಂದಿಗೆ ದಾಟಲು ಅವಕಾಶ ಸಿಗಲಿಲ್ಲ.

Karnataka Election Results: ಬಿಜೆಪಿಗೆ ಮತ್ತೆ ಮುಚ್ಚಿತು ದಕ್ಷಿಣದ ಹೆಬ್ಬಾಗಿಲು; ಕಮಲ ಪಡೆಯ ಏರಿಳಿತದ ಹಾದಿ ಹೀಗಿದೆ ನೋಡಿ
ಬಿಜೆಪಿ ಧ್ವಜ
Ganapathi Sharma
|

Updated on: May 13, 2023 | 7:35 PM

Share

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Election Results) ಪ್ರಕಟಗೊಡಿದ್ದು, ಬಿಜೆಪಿಯ (BJP) ವಿಜಯದ ರಥ ಹಳಿತಪ್ಪಿದೆ. ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಂತೆಯೇ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು ಮ್ಯಾಜಿಕ್ ಸಂಖ್ಯೆಗಿಂತ ಹೆಚ್ಚಿನ (136) ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ ಕೇವಲ 64 ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಸ್ಟಾರ್ ಪ್ರಚಾರಕರು ರಾಜ್ಯದಲ್ಲಿ ಪ್ರಚಾರ ಮಾಡಿದ ರೀತಿಯನ್ನು ಪರಿಗಣಿಸಿದರೆ ಈ ಅಂಕಿಅಂಶವನ್ನು ಬಿಜೆಪಿ ನಿರೀಕ್ಷಿಸಿರದು.

ಬಿಜೆಪಿಯು ಕರ್ನಾಟಕವನ್ನು ದಕ್ಷಿಣದ ರಾಜ್ಯಗಳ ಹೆಬ್ಬಾಗಿಲು ಎಂದು ಪರಿಗಣಿಸಿದೆ. ಕಳೆದ ನಾಲ್ಕು ದಶಕಗಳಿಂದ ಈ ಹೆಬ್ಬಾಗಿಲು ತೆರೆದು ಅಧಿಕಾರಕ್ಕೆ ಪ್ರವೇಶಿಸಲು ಪಕ್ಷವು ನಿರಂತರ ಹೋರಾಟ ನಡೆಸಿದೆ. ಆದರೆ ಅವಿರತ ಪ್ರಯತ್ನಗಳ ಹೊರತಾಗಿಯೂ, ಬಿಜೆಪಿಗೆ ಕರ್ನಾಟಕದ ಗಡಿಯನ್ನು ಬಹುಮತದೊಂದಿಗೆ ದಾಟಲು ಅವಕಾಶ ಸಿಗಲಿಲ್ಲ. ಕೆಲವೊಮ್ಮೆ ಗೆಲುವು ಸಾಧಿಸಿದರೆ ಇನ್ನು ಕೆಲವೊಮ್ಮೆ ಸೋಲನ್ನು ಎದುರಿಸಬೇಕಾಗಿತ್ತು. 2023ರ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಸೋತಿದೆ.

1983 ರಲ್ಲಿ ಎಂಟ್ರಿ ಕೊಟ್ಟ ಬಿಜೆಪಿ

ದೇಶದ ಹಲವು ರಾಜ್ಯಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಸುದೀರ್ಘ ಆಡಳಿತ ನಡೆಸಿತ್ತು. ಆದರೆ, 1983 ರಿಂದ ಎಲ್ಲಾ ರಾಜಕೀಯ ಸಮೀಕರಣಗಳು ಬದಲಾಗುತ್ತಲೇ ಇದ್ದವು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನತಾ ಪಕ್ಷ ಅಧಿಕಾರದಿಂದ ಕೆಳಗಿಳಿಸಿತು. ಜನತಾ ಪಕ್ಷವನ್ನು ಹೊರಗಿನಿಂದ ಬೆಂಬಲಿಸುವ ಮೂಲಕ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಎಂಟ್ರಿ ಕೊಟ್ಟಿತು.

1983ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಥಮ ಬಾರಿಗೆ ಇಲ್ಲಿ ಸ್ಪರ್ಧಿಸಿತ್ತು. ಆಗ ಬಿಜೆಪಿ 110 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಜನತಾ ಪಕ್ಷವು 95 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 82 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಬಿಜೆಪಿ 18 ಸ್ಥಾನಗಳನ್ನು ಗಳಿಸಿತು. ನಂತರ ಜನತಾ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಗಳು ಒಟ್ಟಾಗಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದವು.

ಆದರೆ, ಎರಡು ವರ್ಷಗಳ ನಂತರ, ವಿಶೇಷ ಸಂದರ್ಭಗಳ ಕಾರಣ, ರಾಜ್ಯದಲ್ಲಿ ಮರು ಚುನಾವಣೆ ನಡೆಯಿತು. ಈ ಬಾರಿ ಜನತಾ ಪಕ್ಷ 139 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿತು. ಇದರ ಪರಿಣಾಮವಾಗಿ ಕಾಂಗ್ರೆಸ್ 65 ಸ್ಥಾನಗಳನ್ನು ಪಡೆದರೆ ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ನಂತರದ 1989 ರ ಚುನಾವಣೆಯಲ್ಲೂ ಬಿಜೆಪಿಯ ಹೋರಾಟ ಮುಂದುವರಿಯಿತು. ಕಾಂಗ್ರೆಸ್ 178 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರೆ, ಬಿಜೆಪಿ ಕೇವಲ 4 ಸ್ಥಾನಗಳನ್ನು ಗಳಿಸಿತು.

ಕಮಲ ಅರಳಲು ನೆರವಾದ ರಾಮಮಂದಿರ ಆಂದೋಲನ

1990 ರ ನಂತರ, ದೇಶದ ರಾಜಕೀಯವು ವಿಶೇಷವಾಗಿ ಎರಡು ವಿಶೇಷ ಚಳವಳಿಗಳಿಂದ ಪ್ರಭಾವಿತವಾಯಿತು. ಮೊದಲನೆಯದ್ದು ಮಂಡಲ್ ಆಯೋಗದ ಕ್ರಾಂತಿ ಮತ್ತು ಎರಡನೇಯದ್ದು ರಾಮಜನ್ಮಭೂಮಿ ಚಳವಳಿ. ರಾಮಮಂದಿರ ಆಂದೋಲನದಿಂದ ಭಾರತೀಯ ಜನತಾ ಪಕ್ಷಕ್ಕೆ ಅಪಾರ ಲಾಭವಾಯಿತು. 1994ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 40 ಸ್ಥಾನಗಳನ್ನು ಪಡೆದಿತ್ತು. ಇದರ ನಂತರ ಬಿಜೆಪಿಯ ಸಂಖ್ಯಾಬಲ ಕ್ರಮೇಣ ಹೆಚ್ಚಾಯಿತು. ಬಿಜೆಪಿ 1999ರಲ್ಲಿ 44, 2004ರಲ್ಲಿ 79 ಮತ್ತು 2008ರಲ್ಲಿ 110 ಸ್ಥಾನಗಳನ್ನು ಪಡೆದಿತ್ತು.

ಮುಂದುವರಿದ ಬಿಜೆಪಿಯ ಏರಿಳಿತ

2008ರಲ್ಲಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಬೇಕಾಯಿತು. ನಂತರದಲ್ಲಿ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ನಂತರ ನಡೆದ ಬೆಳವಣಿಗೆಗಳಿಂದಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಪಡೆದರೆ ಬಿಜೆಪಿ 40ಕ್ಕೆ ತೃಪ್ತಿಪಡಬೇಕಾಯಿತು.

ಇದನ್ನೂ ಓದಿ: Karnataka Election Results: ಬಿಜೆಪಿ ಸೋಲು, ಕಾಂಗ್ರೆಸ್​​ ಗೆಲುವಿಗೆ ನಾಯಕರು ಹೇಳಿದ್ದಲ್ಲ, ನಿಜವಾದ ಕಾರಣ ಇಲ್ಲಿದೆ

2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಪಡೆದಿತ್ತು. ಆದರೆ, ಗರಿಷ್ಠ ಸ್ಥಾನ ಗಳಿಸಿದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಸಿಕ್ಕಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದವು. ಆದರೆ ಈ ಸರ್ಕಾರ ಹೆಚ್ಚು ದಿನ ಬಾಳಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾದ ನಂತರ ಬಿಜೆಪಿ ಮತ್ತೆ ಸರ್ಕಾರ ರಚಿಸಿತು. ಮೊದಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಒಂದೇ ವರ್ಷದಲ್ಲಿ ಅವರು  ರಾಜೀನಾಮೆ ನೀಡಿದರು. ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇದೀಗ ಮತ್ತೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ