ಬೀದರ್, ಜೂನ್ 04: ಸಚಿವ ಈಶ್ವರ್ ಖಂಡ್ರೆ (Eshwar Khandre) ಪುತ್ರ, ಸಾಗರ ಖಂಡ್ರೆ (Sagar Kahndre) ಬೀದರ್ ಲೋಕಸಭಾ ಕ್ಷೇತ್ರದಲ್ಲಿ (Bidar Lok Sabha Constituency) ಗೆಲ್ಲುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಕ್ಷೇತ್ರವನ್ನು ಮರಳಿ “ಕೈ” ವಶವಾಗಿದೆ. ಸಾಗರ ಖಂಡ್ರೆ ಗೆಲವು ಸುಲಭವಾದದ್ದು ಅಲ್ಲ. ಸಾಗರ ಖಂಡ್ರೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ (BJP) ಘಟಾನುಘಟಿ ನಾಯಕ ಕೇಂದ್ರ ಸಚಿವ ಭಗವಂತ ಖೂಬಾ (Bhagavanth Kumbha) ಸೋಲುಂಡಿದ್ದಾರೆ. 26 ವರ್ಷದ ಸಾಗರ ಖಂಡ್ರೆ ಸಂಸತ್ತು ಪ್ರವೇಶಿಸಿದ ಕರ್ನಾಟಕದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಸಾಗರ್ ಖಂಡ್ರೆ ವಿರುದ್ಧ ಸಾಗರ ಖಂಡ್ರೆ ಒಬ್ಬ ಅನುಭವ ಇಲ್ಲದ ಹುಡುಗ, ಆತ ಗೆದ್ದರೆ ಸಂಸತ್‌ಗೆ ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ಬರು ಬೇಕು ಎಂದು ವ್ಯಂಗ್ಯ ವಾಡಿದ್ದರು. ಆದರೆ ಸಾಗರ ಖಂಡ್ರೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಾನೊಬ್ಬ ಪ್ರಭುದ್ಧ ಎಂದು ಟಾಂಗ್ ಕೊಟ್ಟಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ ಖಂಡ್ರೆ ಅವರಿಗೆ ಇದು ಮೊದಲನೇ ಲೋಕಸಭೆ ಚುನಾವಣೆಯಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ಸಾಗರ್ ಖಂಡ್ರೆ ತಂದೆಯ ನೆರಳಿನಲ್ಲೇ ರಾಜಕೀಯಕ್ಕೆ ದುಮುಖಿದ್ದಾರೆ. ಸಾಗರ ಖಂಡ್ರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇನ್ನು ಸಾಗರ ಖಂಡ್ರೆ 3-4 ವರ್ಷಗಳ ಹಿಂದಿನಿಂದಲೇ ಕ್ಷೇತ್ರಾದ್ಯಂತ ಓಡಾಡಿದ್ದಾರೆ.
1952ರಿಂದ 1989ರವರೆಗೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಷ್ಟೇ ಇಲ್ಲಿ ಗೆಲುವು ಸಾಧಿಸಿದ್ದು. 1952ರಲ್ಲಿ ಶೌಕತುಲ್ಲಾ ಶಾ ಅನ್ಸಾರಿ, 1962, 1967ರಲ್ಲಿ ರಾಮಚಂದ್ರ ವೀರಪ್ಪ, 1971, 1977ರಲ್ಲಿ ಶಂಕರ್ ದೇವ್, 1980, 1984, 1989ರಲ್ಲಿ ನರಸಿಂಗರಾವ್ ಸೂರ್ಯವಂಶಿ ಅವರು ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದರು. 1991ರಲ್ಲಿ ಮೊದಲ ಬಾರಿ ಇಲ್ಲಿ ಬಿಜೆಪಿ ಗೆದ್ದಿತ್ತು. ಆ ಬಾರಿ ಗೆದ್ದ ರಾಮಚಂದ್ರ ವೀರಪ್ಪ ಅವರು 1996, 1998, 1999, 2004 ಹೀಗೆ ನಿರಂತರ 5 ಬಾರಿ ಗೆಲುವಿನ ದಾಖಲೆ ಬರೆದರು. 2004ರಲ್ಲಿ ನರಸಿಂಗರಾವ್ ಸೂರ್ಯವಂಶಿ ಅವರು ಗೆಲ್ಲುವ ಮೂಲಕ ಬೀದರ್ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋಯಿತು . 2009ರಲ್ಲಿ ಮಾಜಿ ಸಿಎಂ ಧರಂ ಸಿಂಗ್ ಅವರು ಗೆದ್ದರು. 2014, 2019ರಲ್ಲಿ ಭಗವಂತ ಖೂಬಾ ವಿಜಯ ಪತಾಕೆ ಹಾರಿಸಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Tue, 4 June 24