Punjab: ಫಲಿತಾಂಶಕ್ಕೆ ಆಪ್​ನ ಭಗವಂತ್ ಮಾನ್ ಸಿದ್ಧತೆ: ಕೇಜಿಗಟ್ಟಲೆ ಜಿಲೇಬಿ, ಗುರುದ್ವಾರಕ್ಕೆ ಭೇಟಿ

ಈ ಬಾರಿ ಆಪ್ ವಿಜಯಿಯಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿರುವುದರಿಂದ ಸಂಗ್ರೂರ್​ನಲ್ಲಿರುವ ಭಗವಂತ್ ಮಾನ್​ರ ಸ್ವಗೃಹದಲ್ಲಿ ದೊಡ್ಡದೊಡ್ಡ ಕಡಾಯಿಗಳಲ್ಲಿ ಜಿಲೇಬಿ ಸಿದ್ಧಪಡಿಸಲಾಗುತ್ತಿದೆ.

Punjab: ಫಲಿತಾಂಶಕ್ಕೆ ಆಪ್​ನ ಭಗವಂತ್ ಮಾನ್ ಸಿದ್ಧತೆ: ಕೇಜಿಗಟ್ಟಲೆ ಜಿಲೇಬಿ, ಗುರುದ್ವಾರಕ್ಕೆ ಭೇಟಿ
ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 10, 2022 | 9:01 AM

ಸಂಗ್ರೂರ್: ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿ ಫಲಿತಾಂಶದ ದಿನವಾದ ಗುರುವಾರ (ಮಾರ್ಚ್ 10) ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರ ಮನೆಯಲ್ಲಿ ಫಲಿತಾಂಶದ ನಂತರದ ಸಂಭ್ರಮಕ್ಕಾಗಿ ಸಡಗರದ ಸಿದ್ಧತೆಗಳು ನಡೆಯುತ್ತಿವೆ. ಪಂಜಾಬ್​ನಲ್ಲಿ ಈ ಬಾರಿ ಆಪ್ ವಿಜಯಿಯಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿರುವುದರಿಂದ ಸಂಗ್ರೂರ್​ನಲ್ಲಿರುವ ಭಗವಂತ್ ಮಾನ್​ರ ಸ್ವಗೃಹದಲ್ಲಿ ದೊಡ್ಡದೊಡ್ಡ ಕಡಾಯಿಗಳಲ್ಲಿ ಜಿಲೇಬಿ ಸಿದ್ಧಪಡಿಸಲಾಗುತ್ತಿದೆ.

ಸಂಗ್ರೂರ್​ನ ಗುರುಸಾಗರ್ ಮಸ್ತೌನಾ ಸಾಹಿಬ್ ಗುರುದ್ವಾರದಲ್ಲಿ ಭಗವಂತ್ ಮಾನ್ ಪ್ರಾರ್ಥನೆ ಸಲ್ಲಿಸಿದರು. ‘CM (Chief Minister) Means Common Man’ (ಮುಖ್ಯಮಂತ್ರಿ ಅಂದರೆ ಸಾಮಾನ್ಯ ಮನುಷ್ಯ) ಎಂದು ನಿನ್ನೆಯಷ್ಟೇ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಒಂದು ವೇಳೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರೂ ನಂತರದ ದಿನಗಳಲ್ಲಿಯೂ ಈಗಿರುವಂತೆಯೇ ಸಹಜ ಬದುಕನ್ನು ನಿರ್ವಹಿಸಲಿದ್ದೇನೆ ಎಂದಿದ್ದರು. ಜನಪ್ರಿಯತೆ ಎನ್ನುವುದು ನನ್ನ ಬದುಕಿನ ಭಾಗವೇ ಆಗಿದೆ. ನನ್ನ ವ್ಯಕ್ತಿತ್ವದ ಮೇಲೆ ಹೊಸ ಜವಾಬ್ದಾರಿಯಿಂದ ಹೆಚ್ಚೇನು ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದರು.

ಸಂಸತ್ತಿಗೂ ಮದ್ಯ ಸೇವಿಸಿ ಬರುವ ಮದ್ಯವ್ಯಸನಿ ಭಗವಂತ ಮಾನ್ ಎಂದು ಪ್ರತಿಪಕ್ಷಗಳು ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದವು. ಜನರ ನಡುವೆ ಇದ್ದು ಕೆಲಸ ಮಾಡಬಲ್ಲ ಅವರ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದವು. ಆದರೆ ಮತದಾರರು ಅವರತ್ತಲೇ ಒಲವು ತೋರಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ನಾನು ಇಂದಿಗೂ ಎಂದೆಂದಿಗೂ ಜನರ ನಡುವೆಯೂ ಇದ್ದು ಅವರ ಕೆಲಸ ಮಾಡಿಕೊಡುತ್ತೇನೆ. ನನ್ನ ತಲೆಯನ್ನು ರಾಜಕಾರಣ ಹಾಳು ಮಾಡುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ನನಗೆ ಯಾವುದೂ ಹೊಸದಲ್ಲ. ಪಂಜಾಬ್​ ಅನ್ನು ಮತ್ತೊಮ್ಮೆ ನಿಜವಾದ ಅರ್ಥದಲ್ಲಿ ಪಂಜಾಬ್​ ಮಾಡುತ್ತೇವೆ. ಇದನ್ನು ಪ್ಯಾರಿಸ್, ಲಂಡನ್ ಅಥವಾ ಕ್ಯಾಲಿಫೋರ್ನಿಯಾ ಮಾಡುವ ಅಗತ್ಯವಿಲ್ಲ. ಪಂಜಾಬ್​ ಅನ್ನು ಬೇರೆ ದೇಶಗಳ ನಗರಗಳಾಗಿ ಮಾರ್ಪಡಿಸುತ್ತೇವೆ ಎಂದು ಹೇಳಿದ್ದವರು ಸೋಲಲಿದ್ದಾರೆ ಎಂದು ಭಗವಂತ ಮಾನ್ ಹೇಳಿದ್ದರು.

ಎಕ್ಸಿಟ್ ಪೋಲ್​ಗಳು ಆಪ್ ಪಕ್ಷವೇ ಪಂಜಾಬ್​ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. 11 ಎಕ್ಸಿಟ್ ಪೋಲ್​ಗಳ ಸರಾಸರಿ ಲೆಕ್ಕಹಾಕಿದಾದ ಆಪ್​ಗೆ 63 ಸ್ಥಾನ ಸಿಗುವ ನಿರೀಕ್ಷೆ ವ್ಯಕ್ತವಾಗಿತ್ತು. ಒಟ್ಟು 117 ಸ್ಥಾನಗಳಿರುವ ಪಂಜಾಬ್ ವಿಧಾನಸಭೆಯಲ್ಲಿ ಅಧಿಕಾರ ರಚನೆಗೆ 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಒಳಜಗಳದಲ್ಲಿ ಮುಳುಗಿದ್ದ ಅಧಿಕಾರರೂಢ ಕಾಂಗ್ರೆಸ್ ಪಕ್ಷವು 28 ಸ್ಥಾನ ಗಳಿಸಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು.

ಇದನ್ನೂ ಓದಿ: Goa Assembly Elections: ಗೋವಾದಲ್ಲಿ ಕಿಂಗ್ ಮೇಕರ್ ಆಗಲಿದೆ ಎಂಜಿಪಿ- ಟಿಎಂಸಿ; ಬಿಜೆಪಿ, ಕಾಂಗ್ರೆಸ್​ ಜೊತೆ ಮುಂದುವರಿದ ಮಾತುಕತೆ

ಇದನ್ನೂ ಓದಿ: Punjab Election: ಚುನಾವಣೋತ್ತರ ಸಮೀಕ್ಷೆ; ಪಂಜಾಬ್ ದಲಿತರ ಮೇಲೆ ಚರಣ್​ಜಿತ್ ಸಿಂಗ್ ಚನ್ನಿ ಪ್ರಭಾವ ಕೆಲಸ ಮಾಡಲಿಲ್ಲವೇ?

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್