AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army Recruitment 2022: 10ನೇ ತರಗತಿ ಪಾಸಾದವರಿಗೆ ಗೂರ್ಖಾ ರೈಫಲ್ಸ್​ನಲ್ಲಿ ಉದ್ಯೋಗಾವಕಾಶ

Indian Army Recruitment 2022: ಈ ಹುದ್ದೆಗಳಿಗೆ 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಯುವಕರು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8 ಏಪ್ರಿಲ್ 2022.

Indian Army Recruitment 2022: 10ನೇ ತರಗತಿ ಪಾಸಾದವರಿಗೆ ಗೂರ್ಖಾ ರೈಫಲ್ಸ್​ನಲ್ಲಿ ಉದ್ಯೋಗಾವಕಾಶ
Indian Army Recruitment 2022
TV9 Web
| Updated By: ಝಾಹಿರ್ ಯೂಸುಫ್|

Updated on: Mar 14, 2022 | 7:24 PM

Share

Indian Army Recruitment 2022: ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್ ರೆಜಿಮೆಂಟ್ ಸೆಂಟರ್, ಲಕ್ನೋ ಸ್ಟೆನೋ ಗ್ರೇಡ್-2 ಮತ್ತು ಬಾರ್ಬರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಯುವಕರು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8 ಏಪ್ರಿಲ್ 2022. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ವಿದ್ಯಾರ್ಹತೆ: ಸ್ಟೆನೋಗ್ರಾಫರ್ – ಸ್ಟೆನೋಗ್ರಾಫಿ ಅನುಭವದೊಂದಿಗೆ 12ನೇ ತರಗತಿ ತೇರ್ಗಡೆಯಾಗಿರಬೇಕು. ಕ್ಷೌರಿಕ (ಬಾರ್ಬರ್) – 10ನೇ ತರಗತಿ ಪಾಸಾಗಿರಬೇಕು ಜೊತೆ ಕ್ಷೌರಿಕ ವೃತ್ತಿಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ವಯೋಮಿತಿ: 18 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ನಲ್ಲಿ ಸ್ಟೆನೋಗ್ರಾಫರ್ ಮತ್ತು ಕ್ಷೌರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ನಲ್ಲಿ ಸ್ಟೆನೋಗ್ರಾಫರ್ ಮತ್ತು ಬಾರ್ಬರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ? ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ನಲ್ಲಿ ಸ್ಟೆನೋಗ್ರಾಫರ್ ಮತ್ತು ಬಾರ್ಬರ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ. ಅಂದರೆ ಅರ್ಜಿಯನ್ನು 11 ಗೂರ್ಖಾ ರೈಫಲ್ಸ್​ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಅರ್ಜಿ ಕಳಿಸಬೇಕಾದ ವಿಳಾಸ: ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಇತರ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. The Commandant, 11 Gorkha Rifles Regimental Centre Kiranti Lines, Cantt Lucknow (Uttar Pradesh) – 226002

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(11 Gorakha Rifles Regiment Centre Lucknow Recruitment 2022)