CBSE Recruitment 2024: ಗ್ರೂಪ್ A, B ಮತ್ತು C ಶ್ರೇಣಿಯಲ್ಲಿ 118 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರ ಇಲ್ಲಿದೆ
CBSE Group A, B, C Recruitment 2024: ಸಿಬಿಎಸ್‌ಇ ವಿವಿಧ ಹುದ್ದೆಗಳನ್ನು (CBSE Group A, B, C Recruitment 2024) ಭರ್ತಿ ಮಾಡಲು ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಆಧಾರದ ಮೇಲೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಯ್ಕೆಯಾದರೆ, ಅಭ್ಯರ್ಥಿಗಳನ್ನು ಭಾರತದಲ್ಲಿ ಎಲ್ಲಿಯಾದರೂ ಪೋಸ್ಟ್ ಮಾಡಬಹುದು" ಎಂದು ಅಧಿಕೃತ ಸೂಚನೆಯಿಂದ ತಿಳಿದುಬಂದಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( Central Board of Secondary Education -CBSE) ಗ್ರೂಪ್ A, B ಮತ್ತು C ಶ್ರೇಣಿಯಲ್ಲಿ (Group A, B, and C positions) 118 ಖಾಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಮಾರ್ಚ್ 12 ರಿಂದ ಏಪ್ರಿಲ್ 11, 2024 ರವರೆಗೆ ತೆರೆದಿರುತ್ತದೆ. CBSE ಶೀಘ್ರದಲ್ಲೇ PDF ಸ್ವರೂಪದಲ್ಲಿ ವಿವರವಾದ ಅರ್ಜಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಸದ್ಯಕ್ಕೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು CBSE ನೇಮಕಾತಿ 2024 ರ ಎಂಪ್ಲಾಯ್ಮೆಂಟ್ ನ್ಯೂಸ್ ಪತ್ರಿಕೆಯಲ್ಲಿ ಕಿರು ಸೂಚನೆ ನೀಡಿದೆ. ನೇಮಕಾತಿ ಅಭಿಯಾನದ (Recruitment 2024, ) ಪ್ರಕಾರ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಒಟ್ಟು 118 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಸಿಬಿಎಸ್‌ಇ ವಿವಿಧ ಹುದ್ದೆಗಳನ್ನು (CBSE Group A, B, C Recruitment 2024) ಭರ್ತಿ ಮಾಡಲು ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಆಧಾರದ ಮೇಲೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಯ್ಕೆಯಾದರೆ, ಅಭ್ಯರ್ಥಿಗಳನ್ನು ಭಾರತದಲ್ಲಿ ಎಲ್ಲಿಯಾದರೂ ಪೋಸ್ಟ್ ಮಾಡಬಹುದು” ಎಂದು ಅಧಿಕೃತ ಸೂಚನೆಯಿಂದ ತಿಳಿದುಬಂದಿದೆ. ಸೂಚನೆಯ ಪ್ರಕಾರ, CBSE ನೇಮಕಾತಿ 2024 ಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಮಾರ್ಚ್ 12 ರಿಂದ ಏಪ್ರಿಲ್ 11, 2024 ರವರೆಗೆ ತೆರೆದಿರುತ್ತದೆ.
CBSE Group A, B, C Recruitment 2024 – ಹುದ್ದೆಯ ವಿವರಗಳು
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗ್ರೂಪ್ ಎ, ಬಿ ಮತ್ತು ಸಿ ಶ್ರೇಣಿಯಲ್ಲಿ ಸಹಾಯಕ ಕಾರ್ಯದರ್ಶಿ, ಅಕೌಂಟ್ಸ್ ಆಫೀಸರ್, ಜೂನಿಯರ್ ಇಂಜಿನಿಯರ್, ಜೂನಿಯರ್ ಟ್ರಾನ್ಸ್‌ಲೇಶನ್ ಆಫೀಸರ್, ಅಕೌಂಟೆಂಟ್ ಮತ್ತು ಜೂನಿಯರ್ ಅಕೌಂಟೆಂಟ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಒಟ್ಟು 118 ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ.
ಮಂಡಳಿಯು ಶೀಘ್ರದಲ್ಲೇ CBSE ನೇಮಕಾತಿ 2024 ಗಾಗಿ PDF ಸ್ವರೂಪದಲ್ಲಿ ವಿವರವಾದ ಅಧಿಸೂಚನೆಯನ್ನು ಪ್ರಕಟಿಸುತ್ತದೆ. ಈ ಡಾಕ್ಯುಮೆಂಟ್ ನಲ್ಲಿ ಅಭ್ಯರ್ಥಿಗಳು ಅರ್ಹತೆ, ವಯಸ್ಸಿನ ಸಡಿಲಿಕೆ, ಪರೀಕ್ಷಾ ಶುಲ್ಕಗಳು, ಸಂಬಳ, ಪರೀಕ್ಷಾ ಸ್ಥಳಗಳು, ಪ್ರಮುಖ ಮಾರ್ಗಸೂಚಿಗಳು, ಪರೀಕ್ಷೆಯ ರಚನೆ ಮತ್ತು ಪಠ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆಯಬಹುದು, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಮುಖ ವಿವರಗಳೂ ಒಳಗೊಂಡಿರುತ್ತದೆ.