DU Recruitment 2022: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
Delhi University Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
DU Recruitment 2022: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
DU Recruitment 2022: ಹುದ್ದೆಗಳ ವಿವರಗಳು: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಇಂಗ್ಲೀಷ್ – 7 ಹುದ್ದೆಗಳು ಪಂಜಾಬಿ – 5 ಹುದ್ದೆಗಳು ಹಿಂದಿ – 3 ಹುದ್ದೆಗಳು ಅರ್ಥಶಾಸ್ತ್ರ – 4 ಹುದ್ದೆಗಳು ಇತಿಹಾಸ – 4 ಹುದ್ದೆಗಳು ರಾಜಕೀಯ ವಿಜ್ಞಾನ – 3 ಹುದ್ದೆಗಳು ವಾಣಿಜ್ಯ – 11 ಹುದ್ದೆಗಳು ಗಣಿತ – 3 ಹುದ್ದೆಗಳು ಸಸ್ಯಶಾಸ್ತ್ರ – 6 ಹುದ್ದೆಗಳು ರಸಾಯನಶಾಸ್ತ್ರ – 2 ಹುದ್ದೆಗಳು ಎಲೆಕ್ಟ್ರಾನಿಕ್ಸ್ – 2 ಹುದ್ದೆಗಳು ಕಂಪ್ಯೂಟರ್ ಸೈನ್ಸ್ – 5 ಹುದ್ದೆಗಳು ಭೌತಶಾಸ್ತ್ರ – 3 ಹುದ್ದೆಗಳು ಪ್ರಾಣಿಶಾಸ್ತ್ರ – 6 ಹುದ್ದೆಗಳು ಪರಿಸರ ವಿಜ್ಞಾನ – 2 ಹುದ್ದೆಗಳು
DU Recruitment 2022ಗಾಗಿ ಅರ್ಹತಾ ಮಾನದಂಡಗಳು: ಭಾರತೀಯ ವಿಶ್ವವಿದ್ಯಾನಿಲಯದಿಂದ ಸಂಬಂಧಪಟ್ಟ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೇಲಿನ ವಿದ್ಯಾರ್ಹತೆಗಳನ್ನು ಪೂರೈಸುವುದರ ಹೊರತಾಗಿ, ಅಭ್ಯರ್ಥಿಯು UGC ಅಥವಾ CSIR ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಗೆ ಅರ್ಹತೆ ಪಡೆದಿರಬೇಕು.
DU Recruitment 2022ಗಾಗಿ ಅರ್ಜಿ ಶುಲ್ಕ: UR/OBC/EWS ವರ್ಗ – ರೂ. 500/- SC, ST, PWBD ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
DU Recruitment 2022ರ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 20
DU Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Delhi University (DU) Recruitment 2022 for 66 Assistant Professor)