SBI Recruitment 2022: ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಸುರ್ವಣಾವಕಾಶ
SBI Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
SBI Clerk Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಕ್ಲರ್ಕ್ ಕೇಡರ್‌ನಲ್ಲಿನ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 5008
ಅರ್ಹತಾ ಮಾನದಂಡಗಳು: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಂದರೆ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20 ವರ್ಷದಿಂದ 28 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ- ರೂ. 750/-
- SC / ST / PWBD / ESM / DESM – ಯಾವುದೇ ಶುಲ್ಕವಿಲ್ಲ.
ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 19900 ರಿ.ಂದ 47920 ರೂ.ವರೆಗೆ ವೇತನ ನಿಗದಿ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಪೂರ್ವಭಾವಿ ಪರೀಕ್ಷೆಯ
- ಮುಖ್ಯ ಪರೀಕ್ಷೆಯ
- ಭಾಷಾ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 27, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.