South Western Railway Recruitment ನೈಋತ್ಯ ರೈಲ್ವೆ ನೇಮಕಾತಿ: 147 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ.
ನೈಋತ್ಯ ರೈಲ್ವೆಯು (South-Western Railway) 147 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ (Goods Train Manager) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಭ್ಯರ್ಥಿಗಳು 25 ಏಪ್ರಿಲ್ 2022 ರವರೆಗೆ ಅಧಿಕೃತ ವೆಬ್‌ಸೈಟ್ rrchubli.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ನೈಋತ್ಯ ರೈಲ್ವೆ ನೇಮಕಾತಿ ಹುದ್ದೆಯ ವಿವರಗಳು: ಗೂಡ್ಸ್ ಟ್ರೈನ್ ಮ್ಯಾನೇಜರ್ 147 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಸಲಾಗುತ್ತಿದೆ.
ನೈಋತ್ಯ ರೈಲ್ವೇ ನೇಮಕಾತಿ ವಯಸ್ಸಿನ ಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳು 18 ಮತ್ತು 42 ರ ನಡುವಿನ ವಯಸ್ಸಿನವರಾಗಿರಬೇಕು. ಒಬಿಸಿ ವರ್ಗದ ಅರ್ಜಿದಾರರು 18 ಮತ್ತು 45 ರ ನಡುವಿನ ವಯಸ್ಸಿನವರಾಗಿರಬೇಕು. ರಿಸರ್ವ್ ಕೆಟಗರಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ 47 ವರ್ಷಕ್ಕೆ ಏರಿಸಲಾಗಿದೆ.
ನೈಋತ್ಯ ರೈಲ್ವೆ ನೇಮಕಾತಿ ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ.
ನೈಋತ್ಯ ರೈಲ್ವೆ ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆ? 1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2. ಮುಖಪುಟದಲ್ಲಿ ಅಧಿಕೃತ ಅಧಿಸೂಚನೆಯ ಪಕ್ಕದಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ. 3. ಹೊಸ ಪುಟ ಕಾಣಿಸುತ್ತದೆ 4. ನಂತರ ಹೊಸ ನೋಂದಣಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ 5. ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ 6. ಪ್ರಮಾಣಪತ್ರಗಳು ಮತ್ತು ಸಹಿ ಅಪ್ಲೋಡ್ ಮಾಡಿ 7. ಯಶಸ್ವಿ ನೋಂದಣಿಯ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ನೀವು ಅಧಿಸೂಚನೆಯನ್ನು ಪಡೆಯುವಿರಿ 8. ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಇದನ್ನೂ ಓದಿ: ರೈತರು ಸರ್ಕಾರ ಉರುಳಿಸಬಹುದು’: ಪ್ರಧಾನಿ ಮೋದಿಗೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಎಚ್ಚರಿಕೆ
Published On - 6:05 pm, Mon, 11 April 22