71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಇಲ್ಲಿದೆ ವಿವರ
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 23 ರಂದು ದೆಹಲಿಯಲ್ಲಿ ನಡೆಯಲಿದೆ. ಶಾರುಖ್ ಖಾನ್ (ಜವಾನ್), ರಾಣಿ ಮುಖರ್ಜಿ (Mrs. Chatterjee vs Norway), ಮತ್ತು ವಿಕ್ರಾಂತ್ ಮಾಸಿ (12th Fail) ಅವರಿಗೆ ಅತ್ಯುತ್ತಮ ನಟ/ನಟಿ ಪ್ರಶಸ್ತಿ ನೀಡಲಾಗುತ್ತದೆ. ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತಿದೆ.

71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ್ ಭವನ್ನಲ್ಲಿ ಇಂದು (ಸೆಪ್ಟೆಂಬರ್ 23) ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್ನ ನೀಡಲಿದ್ದಾರೆ. ಸಂಜೆ 4 ಗಂಟಗೆ ಕಾರ್ಯಕ್ರಮ ಆರಂಭ ಆಗಲಿದೆ. ಶಾರುಖ್ ಖಾನ್ ಅವರು ಇದೇ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆಯಲಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮಾಸಿ ಅವರಿಗೆ ಈ ಬಾರಿ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾಗಾಗಿ, ವಿಕ್ರಾಂತ್ ಅವರು ‘12th ಫೇಲ್’ ಚಿತ್ರದ ನಟನೆಗೆ ಈ ಅವಾರ್ಡ್ ಪಡೆದಿದ್ದಾರೆ. ರಾಣಿ ಮುಖರ್ಜಿ ಅವರು ‘Mrs ಚಟರ್ಜಿ vs ನಾರ್ವೇ’ ಸಿನಿಮಾದ ನಟನೆಗೆ ಈ ಅವಾರ್ಡ್ ಪಡೆದರು.
ಮೋಹನ್ ಲಾಲ್ ಅವರು ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ನ ಪಡೆದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಅವಾರ್ಡ್ ನೀಡಲಾಗುತ್ತಿದೆ. ಅವರು ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಇದ್ದಾರೆ. ಇತ್ತೀಚೆಗೆ ಅವರಿಗೆ ಅವಾರ್ಡ್ ಘೋಷಣೆ ಮಾಡಲಾಗಿದೆ.
71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದವರ ಪಟ್ಟಿ
- ಅತ್ಯುತ್ತಮ ನಟ – ಶಾರುಖ್ ಖಾನ್ (ಜವಾನ್) ಮತ್ತು ವಿಕ್ರಾಂತ್ ಮಾಸಿ (12th ಫೇಲ್)
- ಅತ್ಯುತ್ತಮ ನಟಿ – ರಾಣಿ ಮುಖರ್ಜಿ (Mrs ಚಟರ್ಜಿ vs ನಾರ್ವೆ)
- ಅತ್ಯುತ್ತಮ ಹಿಂದಿ ಚಿತ್ರ- ಕಥಲ್
- ಅತ್ಯುತ್ತಮ ಫೀಚರ್ ಫಿಲ್ಮ್: ‘12th ಫೇಲ್’
- ಅತ್ಯುತ್ತಮ ಕನ್ನಡ ಚಿತ್ರ – ‘ದಿ ರೇ ಆಫ್ ಹೋಪ್’
- ಅತ್ಯುತ್ತಮ ಗಾಯಕಿ- ಶಿಲ್ಪಾ ರಾವ್ (ಜವಾನ್ ಕೆ ಚಲೇಯಾ)
- ಅತ್ಯುತ್ತಮ ಗಾಯಕ – ಪಿವಿಎನ್ಎಸ್ ರೋಹಿತ್ (ಬೇಬಿ, ತೆಲುಗು)
- ಅತ್ಯುತ್ತಮ ಛಾಯಾಗ್ರಹಣ – ದಿ ಕೇರಳ ಸ್ಟೋರಿ
- ಅತ್ಯುತ್ತಮ ನೃತ್ಯ ಸಂಯೋಜನೆ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ದಿಂಡೋರಾ ಬಜೆ ರೇ)
- ಅತ್ಯುತ್ತಮ ಮೇಕಪ್ ಮತ್ತು ಕಾಸ್ಟ್ಯೂಮ್ ಡಿಸೈನರ್ – ಸ್ಯಾಮ್ ಬಹದ್ದೂರ್
- ವಿಶೇಷ ಉಲ್ಲೇಖ: ಅನಿಮಲ್ (ರೀ-ರೆಕಾರ್ಡಿಂಗ್ ಮಿಕ್ಸರ್) ಎಂ.ಆರ್.ರಾಜಕೃಷ್ಣನ್
- ಅತ್ಯುತ್ತಮ ಧ್ವನಿ ವಿನ್ಯಾಸ – ಅನಿಮಲ್ (ಹಿಂದಿ)
- ಅತ್ಯುತ್ತಮ ನಿರ್ದೇಶನ – ಕೇರಳ ಸ್ಟೋರಿ (ಸುದೀಪ್ತೋ ಸೇನ್)
- ಅತ್ಯುತ್ತಮ ಜನಪ್ರಿಯ ಚಿತ್ರ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
- ಅತ್ಯುತ್ತಮ ತೆಲುಗು ಚಿತ್ರ – ಭಗವಂತ ಕೇಸರಿ
- ಅತ್ಯುತ್ತಮ ಗುಜರಾತಿ ಚಿತ್ರ – ವಾಶ್
- ಅತ್ಯುತ್ತಮ ತಮಿಳು ಚಲನಚಿತ್ರ – ಪಾರ್ಕಿಂಗ್
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







