AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ ಸಿನಿಮಾ? ವಿಮರ್ಶೆ ತಿಳಿಸಿದ ಕಮಲ್ ಹಾಸನ್

ಮಣಿ ರತ್ನಂ ಅವರಿಗೂ ಸಿನಿಮಾ ಇಷ್ಟ ಆಗಿದೆ. ‘ವಿಶ್ಯುವಲ್​ ಅದ್ಭುತವಾಗಿದೆ, ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತದೆ. ಪ್ರಥ್ವಿರಾಜ್ ಹಾಗೂ ಇಡೀ ತಂಡ ಒಳ್ಳೆಯ ಕೆಲಸ ಮಾಡಿದೆ. ಬ್ಲೆಸ್ಸಿ ಅವರು ಮಾಡಿದ್ದು ನಿಜಕ್ಕೂ ಕಠಿಣ ಕೆಲಸ’ ಎಂದಿದ್ದಾರೆ.

ಹೇಗಿದೆ ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ ಸಿನಿಮಾ? ವಿಮರ್ಶೆ ತಿಳಿಸಿದ ಕಮಲ್ ಹಾಸನ್
ಆಡುಜೀವಿತಂ
ರಾಜೇಶ್ ದುಗ್ಗುಮನೆ
|

Updated on:Mar 27, 2024 | 2:30 PM

Share

ಮಲಯಾಳಂ ಚಿತ್ರರಂಗಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು ಸಿಗುತ್ತಿದೆ. ‘ಪ್ರೇಮುಲು’, ‘ಮಂಜುಮ್ಮೇಲ್ ಬಾಯ್ಸ್’ ಹಾಗೂ ‘ಭ್ರಮಾಯುಗಂ’ ಸಿನಿಮಾಗಳು (Bramayugam) ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಅದೇ ರೀತಿ, ‘ಆಡುಜೀವಿತಂ’ ಸಿನಿಮಾ ಕೂಡ ರಿಲೀಸ್​ಗೆ ರೆಡಿ ಇದೆ. ಮಾರ್ಚ್ 28ರಂದು ಈ ಚಿತ್ರ ಮಲಯಾಳಂ ಜೊತೆ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲೂ ರಿಲೀಸ್ ಆಗಲಿದೆ. ಪೃಥ್ವಿರಾಜ್ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಸೆಲೆಬ್ರಿಟಿಗಳಿಗಾಗಿ ಇತ್ತೀಚೆಗೆ ‘ಆಡುಜೀವಿತಂ’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ನಟ ನಿರ್ಮಾಪಕ ಕಮಲ್ ಹಾಸನ್, ನಿರ್ದೇಶಕ ಮಣಿರತ್ನಂ ಮೊದಲಾದವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ‘ನಾನು ಬ್ಲೆಸ್ಸಿಗೆ ಧನ್ಯವಾದ ಹೇಳಬೇಕು. ಇದು ನಿಜಕ್ಕೂ ಕಠಿಣ ಕೆಲಸ. ಇದು ಯಾರದ್ದೋ ಜೀವನದಲ್ಲಿ ನಡೆದ ಕಥೆ. ಬ್ಲೆಸ್ಸಿ ಕೆಲಸದ ಬಗ್ಗೆ ಮಣಿರತ್ನಂ ಅಚ್ಚರಿಪಟ್ಟರು. ಮಧ್ಯಂತರದಲ್ಲಿ ನಿಮಗೆ ಹೆಚ್ಚು ನೀರು ಕುಡಿಯಬೇಕು ಎನಿಸುತ್ತದೆ. ಹೊಸ ರೀತಿಯ ಸಿನಿಮಾ ಮಾಡಬೇಕು ಎನ್ನುವ ಬ್ಲೆಸ್ಸಿಯ ಹಸಿವು ಕಾಣುತ್ತದೆ’ ಎಂದಿದ್ದಾರೆ ಅವರು.

ಪೃಥ್ವಿರಾಜ್ ನಟನೆಯನ್ನೂ ಕಮಲ್ ಹಾಸನ್ ಮೆಚ್ಚಿದ್ದಾರೆ. ‘ಪೃಥ್ವಿರಾಜ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರು ಈ ಚಿತ್ರಕ್ಕಾಗಿ ಇಷ್ಟೆಲ್ಲ ಮಾಡುತ್ತಾರೆ ಎಂದಕೊಂಡಿರಲಿಲ್ಲ. ಛಾಯಾಗ್ರಾಹಕ ಸುನಿಲ್ ಕೆಎಸ್ ಕೆಲಸ ನಿಜಕ್ಕೂ ಚಾಲೆಂಜಿಂಗ್. ಈ ಚಿತ್ರವನ್ನು ಜನರು ಬೆಂಬಲಿಸಬೇಕು’ ಎಂದು ಕಮಲ್ ಕೋರಿದ್ದಾರೆ.

ಮಣಿ ರತ್ನಂ ಅವರಿಗೂ ಸಿನಿಮಾ ಇಷ್ಟ ಆಗಿದೆ. ‘ವಿಶ್ಯುವಲ್​ ಅದ್ಭುತವಾಗಿದೆ, ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತದೆ. ಪ್ರಥ್ವಿರಾಜ್ ಹಾಗೂ ಇಡೀ ತಂಡ ಒಳ್ಳೆಯ ಕೆಲಸ ಮಾಡಿದೆ. ಬ್ಲೆಸ್ಸಿ ಅವರು ಮಾಡಿದ್ದು ನಿಜಕ್ಕೂ ಕಠಿಣ ಕೆಲಸ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಒಂದು ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್​; ಅಕ್ಷಯ್ ಕುಮಾರ್ ರಿಯಾಕ್ಷನ್ ಹೇಗಿತ್ತು?

‘ಆಡುಜೀವಿತಂ’ ಚಿತ್ರದ ವಿಶೇಷ ಶೋನ ಹೈದರಾಬಾದ್​ನಲ್ಲೂ ಆಯೋಜನೆ ಮಾಡಲಾಗಿತ್ತು. ಈ ವೇಳೆ ಹನು ರಾಘವಪುಡಿ, ಶ್ರೀನು ವೈಟ್ಲಾ ಸೇರಿ ಅನೇಕ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದರು. ‘ಸೀತಾ ರಾಮಂ’ ನಿರ್ದೇಶಕ ಹನು ರಾಘವಪುಡಿ ಅವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Wed, 27 March 24