ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಜುನೈದ್ ಸರಳ ಜೀವನ ನಡೆಸುತ್ತಿದ್ದು, ಐಷಾರಾಮಿ ಕಾರು ಬದಲು ಬಸ್, ಓಲಾ ಬಳಸುತ್ತಾರೆ ಎಂದಿದ್ದಾರೆ. ಕೇವಲ ಎರಡು ಸಿನಿಮಾಗಳನ್ನು ಮಾಡಿರುವ ಜುನೈದ್, ಸಾಮಾನ್ಯ ಜನರಂತೆ ರಾಜ್ಯ ಸಾರಿಗೆ ಬಸ್‌ನಲ್ಲಿಯೂ ಪ್ರಯಾಣಿಸುತ್ತಾರೆ.

ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ
ಆಮಿರ್-ಜುನೈದ್
Edited By:

Updated on: Mar 24, 2026 | 8:12 AM

ಆಮಿರ್ ಖಾನ್ ಅವರು ಬಾಲಿವುಡ್​​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಸಿನಿಮಾ ಮಾಡುವುದರಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಈಗ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಮಗ ಯಾವ ರೀತಿ ಎಂದು ಹೇಳಿದ್ದಾರೆ. ಕಾರಿನಲ್ಲಿ ಓಡಾಡುವುದೇ ಇಲ್ಲ ಎಂದು ಹೇಳಿದ್ದಾರೆ. ಅವರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರಂತೆ.

‘ನನ್ನ ಮೂವರು ಮಕ್ಕಳೂ ತುಂಬಾ ಸೂಕ್ಷ್ಮ. ಕೊವಿಡ್ ಸಮಯದಲ್ಲಿ ರೀನಾಳ ಹೆತ್ತವರಿಬ್ಬರಿಗೂ ವೈರಸ್ ತಗುಲಿತು. ಆಗ ಜುನೈದ್ ತಕ್ಷಣ ಅವರೊಂದಿಗೆ ವಾಸಿಸಲು ಮುಂದಾದ. ಎರಡು ವಾರಗಳ ಕಾಲ ಅವನು ಚೆನ್ನಾಗಿರುವಂತೆ ನೋಡಿಕೊಂಡ. ಇದು ಜುನೈದ್ ಖಾನ್’ ಎಂದು ಹೇಳಿದ್ದಾರೆ ಆಮಿರ್ ಖಾನ್.

‘ಜುನೈದ್ ಖಾನ್​​ ಬಳಿ ಕಾರು ತೆಗೆದುಕೊಳ್ಳುವಂತೆ ನಾನು ಹೇಳಿ ಹೇಳಿ ಸಾಕಾಗಿದೆ. ಅವನು ಈವರೆಗೆ ಕಾರು ಖರೀದಿಸಿಲ್ಲ. ಎರಡು ಸಿನಿಮಾ ಮಾಡಿದ್ದಾನೆ. ಅವನು ಓಲಾದಲ್ಲಿ ಹೋಗುತ್ತಾನೆ ಅಥವಾ ಬಸ್​​ನಲ್ಲಿ ಓಡಾಡುತ್ತಾನೆ’ ಎಂದು ಆಮಿರ್ ಖಾನ್ ಅವರು ಎಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿ, ಹೊಸ ಪ್ರೇಯಸಿ ಜತೆ ಆಮಿರ್ ಖಾನ್ ಹುಟ್ಟುಹಬ್ಬ 

‘ಅವನು ಒಮ್ಮೆ ಕೇರಳದಲ್ಲಿದ್ದ.ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಹಾಜರಾಗಬೇಕಾಯಿತು. ನಾನು ಅವನ ಬಳಿ ಯಾವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಕೇಳಿದೆ. ಅವನು ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ. ಅವನು ಅಸಾಮಾನ್ಯ ರೀತಿಯ ವ್ಯಕ್ತಿ. ಆದರೆ ಅವರನ್ನು ಎಂದಿಗೂ ಭೌತಿಕವಾದಿಗಳಾಗಿ ಬೆಳೆಸಲಾಗಿಲ್ಲ. ನನಗೆ ಹಣದ ಬಗ್ಗೆ ಹೆಚ್ಚು ಕಾಳಜಿ ಇಲ್ಲ’ ಎಂದಿದ್ದಾನೆ ಆಮಿರ್ ಖಾನ್. ಆಮಿರ್ ಖಾನ್ ಅವರು ಸದ್ಯ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಅವರು ನಟನೆಯಲ್ಲಿ ಹೆಚ್ಚು ಬ್ಯುಸಿ ಆಗಿಲ್ಲ. ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿರೋ ಅವರು ಗೌರಿ ಹೆಸರಿನ ಯುವತಿ ಜೊತೆ ಓಡಾಡುತ್ತಿದ್ದಾರೆ. ಅವರು ಸದ್ಯಕ್ಕೆ ಮದುವೆ ಆಗುವ ಆಲೋಚನೆ ಹೊಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us