‘ದಿ ಬಿಗ್​ ಬುಲ್​’ ರಿಲೀಸ್​ ಡೇಟ್​ ಬಹಿರಂಗ; ಇದು ಹರ್ಷದ್​​ ಮೆಹ್ತಾ ಹಗರಣದ ಇನ್ನೊಂದು ವರ್ಷನ್​!

ಅಭಿಷೇಕ್​ ಬಚ್ಚನ್​ ನಟನೆಯ ‘ದಿ ಬಿಗ್​ ಬುಲ್​’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನೇರವಾಗಿ ಆನ್​ಲೈನ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ದಿ ಬಿಗ್​ ಬುಲ್​’ ರಿಲೀಸ್​ ಡೇಟ್​ ಬಹಿರಂಗ; ಇದು ಹರ್ಷದ್​​ ಮೆಹ್ತಾ ಹಗರಣದ ಇನ್ನೊಂದು ವರ್ಷನ್​!
ದಿ ಬಿಗ್​ ಬುಲ್​ ಪೋಸ್ಟರ್​
Follow us
ಮದನ್​ ಕುಮಾರ್​
|

Updated on:Mar 16, 2021 | 5:29 PM

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರಿಗೆ ಬೆಳ್ಳಿಪರದೆಗಿಂತಲೂ ಹೆಚ್ಚಾಗಿ ಓಟಿಟಿಯಲ್ಲಿ ಯಶಸ್ಸು ಸಿಗುತ್ತಿದೆ. ಬ್ರೀಥ್​ ವೆಬ್​ ಸರಣಿಯ ಗೆಲುವಿನ ಬಳಿಕ ಮತ್ತೊಮ್ಮೆ ಆನ್​ಲೈನ್​ನಲ್ಲಿ ಸದ್ದು ಮಾಡಲು ಅಭಿಷೇಕ್​ ಬಚ್ಚನ್​ ಸಜ್ಜಾಗುತ್ತಿದ್ದಾರೆ. ಅವರು ನಟಿಸಿರುವ ‘ದಿ ಬಿಗ್​ ಬುಲ್​’ ಚಿತ್ರ ಕೂಡ ನೇರವಾಗಿ ಓಟಿಟಿಯಲ್ಲಿ ತೆರೆಕಾಣಲಿದೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಹಗರಣ ನಡೆಸಿದ ಹರ್ಷದ್​​ ಮೆಹ್ತಾ ಜೀವನವನ್ನು ಆಧರಿಸಿ ‘ದಿ ಬಿಗ್​ ಬುಲ್​’ ಸಿನಿಮಾ ತಯಾರಾಗಿದೆ. ಆದರೆ ಕೆಲವು ಕಾಲ್ಪನಿಕ ಅಂಶಗಳನ್ನು ಸೇರಿಸಲಾಗಿದೆ. ಪಾತ್ರಗಳ ಹೆಸರುಗಳನ್ನು ಕೂಡ ಬದಲಾಯಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿ ಅಭಿಷೇಕ್​ ಬಚ್ಚನ್​ ನಟಿಸಿದ್ದು, ಮಂಗಳವಾರ (ಮಾ.16) ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದರ ಜೊತೆ ರಿಲೀಸ್​ ಡೇಟ್​ ಬಹಿರಂಗಪಡಿಸಲಾಗಿದೆ. ಏಪ್ರಿಲ್​ 8ರಂದು ‘ದಿ ಬಿಗ್​ ಬುಲ್​’ ರಿಲೀಸ್​ ಆಗಿದೆ.

ಮೊದಲೇ ತಿಳಿಸಿದಂತೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣುವುದಿಲ್ಲ. ಬದಲಿಗೆ, ಡಿಸ್ನಿ ಹಾಟ್​ ಸ್ಟಾರ್​ ಮೂಲಕ ನೇರವಾಗಿ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ವಿಶೇಷ ಏನೆಂದರೆ, ಹರ್ಷದ್​ ಮೆಹ್ತಾ ನಡೆಸಿದ ಹಗರಣಗಳನ್ನೇ ಆಧರಿಸಿ ಕಳೆದ ವರ್ಷ ‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ಬಿಡುಗಡೆ ಆಗಿತ್ತು. ಅದು ಸಿಕ್ಕಾಪಟ್ಟೆ ಜನಪ್ರಿಯವಾಯಿತು. ಈಗ ಅದೇ ಕಥೆಯನ್ನು ‘ದಿ ಬಿಗ್​ ಬುಲ್​’ ಸಿನಿಮಾದಲ್ಲಿ ಯಾವ ರೀತಿ ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.

‘ದಿ ಬಿಗ್​ ಬುಲ್​’ ಚಿತ್ರಕ್ಕೆ ಕೂಕಿ ಗುಲಾಟಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್​ ಬಚ್ಚನ್​ ಜೊತೆಗೆ ಇಲಿಯಾನಾ ಡಿಕ್ರೂಜ್​, ನಿಖಿತಾ ದತ್ತ, ರಾಮ್​ ಕಪೂರ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಾ.19ರಂದು ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಅಕ್ಟೋಬರ್​ನಲ್ಲಿಯೇ ಈ ಚಿತ್ರ ತೆರೆಕಾಣಬೇಕಿತ್ತು. ಆದರೆ ಕೋವಿಡ್​ ಕಾರಣದಿಂದ ಕೆಲಸಗಳು ತಡವಾಯಿತು. ನಂತರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗ್ತಿದೆ ಅಭಿಷೇಕ್‌ ಬಚ್ಚನ್‌ ಹೊಸ ಹೇರ್‌ ಸ್ಟೈಲ್‌

Published On - 5:29 pm, Tue, 16 March 21