ಲಾಕ್ ಡೌನ್ ಸಡಿಲಿಕೆ ಬಳಿಕ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು ರಿಲೀಸ್ ಆಗಲು ಅನುಮಾನ ಪಡುತ್ತಿದ್ದವು. ಅಂಥ ಸಂದರ್ಭದಲ್ಲಿ ಧೈರ್ಯವಾಗಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು ‘ಆಕ್ಟ್ 1978’ ಚಿತ್ರ. ಆದರೆ ಆಗಿನ್ನೂ ಕೊರೊನಾ ಲಸಿಕೆ ಲಭ್ಯವಿಲ್ಲದ ಕಾರಣ ಬಹುತೇಕರು ಥಿಯೇಟರ್ಗೆ ಬರಲು ಭಯ ಪಟ್ಟುಕೊಂಡಿದ್ದರು. ಹಾಗಾಗಿ ಚಿತ್ರಮಂದಿರದಲ್ಲಿ ‘Act 1978’ ನೋಡಲು ಅನೇಕರಿಗೆ ಸಾಧ್ಯವಾಗಿರಲಿಲ್ಲ.
ಥಿಯೇಟರ್ಗಳಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದವರು ಈಗ ಮನೆಯಲ್ಲೇ ಕುಳಿತು ನೋಡಬಹುದು. ಬಿಡುಗಡೆಯಾಗಿ ಎರಡೂವರೆ ತಿಂಗಳ ಬಳಿಕ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ‘ಆಕ್ಟ್ 1978’ ಚಿತ್ರ ವೀಕ್ಷಣೆಗೆ ಲಭ್ಯವಾಗುತ್ತಿದೆ. ಅಮೇಜಾನ್ ಪ್ರೈಮ್ನಲ್ಲಿ ಪ್ರಸಾರ ಆರಂಭಿಸಿದೆ. ಇದು ಚಿತ್ರಪ್ರೇಮಿಗಳಿಗೆ ಖುಷಿ ನೀಡಿದೆ.
‘ಹರಿವು’ ಮತ್ತು ‘ನಾತಿಚರಾಮಿ’ ಸಿನಿಮಾಗಳ ಬಳಿಕ ನಿರ್ದೇಶಕ ಮಂಸೋರೆ ಅವರು ‘Act 1978’ ಚಿತ್ರ ಮಾಡಿದರು. ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ಯಗ್ನಾ ಶೆಟ್ಟಿ ನಟಿಸಿದರು. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಬಿ. ಸುರೇಶ, ಸಂಚಾರಿ ವಿಜಯ್, ಪ್ರಮೋದ್ ಶೆಟ್ಟಿ, ರಾಘು ಶಿವಮೊಗ್ಗ, ಕೃಷ್ಣ ಹೆಬ್ಬಾಳೆ ಮುಂತಾದವರು ಅಭಿನಯಿಸಿರುವ ಈ ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಓಟಿಟಿ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಈ ಸಿನಿಮಾ ಲಭ್ಯವಾಗಿದೆ.
ತುಂಬ ಗರ್ಭಿಣಿಯೊಬ್ಬಳು ತನ್ನ ಗಂಡನ ಸಾವಿಗೆ ನ್ಯಾಯ ಹುಡುಕುವ ಕಥೆಯನ್ನು Act 1978 ಸಿನಿಮಾ ಹೊಂದಿದೆ. ಆ ಮೂಲಕ ಸರ್ಕಾರಿ ಅಧಿಕಾರಿಗಳ ಲಂಚಾವತಾರವನ್ನು ಬಯಲಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಿತ್ರವನ್ನು ಕನ್ನಡ ಸಿನಿಮಾರಂಗದ ಅನೇಕ ಸೆಲೆಬ್ರಿಟಿಗಳು ಪ್ರಶಂಸಿಸಿದ್ದರು. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಇಡೀ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ಅಭಿನಂದಿಸಿದ್ದರು. ಹಂಸಲೇಖ ಅವರು ಚಿತ್ರವನ್ನು ಹಾಡಿ ಹೊಗಳಿದ್ದರು.
ಇದನ್ನೂ ಓದಿ: ‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್
ಲಾಕ್ಡೌನ್ ನಂತರ ಬಿಡುಗಡೆಯಾಗಿ ಯಶಸ್ವಿ 50 ದಿನ ಪೂರೈಸಿದ ಆ್ಯಕ್ಟ್- 1978