Brahmanandam: ಕಪಿಲ್ ಶರ್ಮಾ ಅಲ್ಲ, ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮಿಡಿಯನ್; ಸ್ಟಾರ್​​​ಗಳನ್ನೂ ಮೀರಿಸುತ್ತದೆ ಆಸ್ತಿ

|

Updated on: Jun 09, 2023 | 6:30 AM

ಬ್ರಹ್ಮಾನಂದಂ ಅವರು ತೆಲುಗು ಕಾಮಿಡಿಯನ್. ಅವರಿಗೆ ಈಗ 67 ವರ್ಷ ವಯಸ್ಸು. ಅವರು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

Brahmanandam: ಕಪಿಲ್ ಶರ್ಮಾ ಅಲ್ಲ, ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮಿಡಿಯನ್; ಸ್ಟಾರ್​​​ಗಳನ್ನೂ ಮೀರಿಸುತ್ತದೆ ಆಸ್ತಿ
ಕಪಿಲ್ ಶರ್ಮಾ-ಬ್ರಹ್ಮಾನಂದಂ
Follow us on

ನಟರಷ್ಟು ಕಮಾಯಿ ಮಾಡಲು ಕಾಮಿಡಿ ಕಲಾವಿದರ ಬಳಿ ಸಾಧ್ಯವಿಲ್ಲ ಎಂಬುದು ಚಿತ್ರರಂಗದಲ್ಲಿ ಇರುವವರ ನಂಬಿಕೆ. ಆದರೆ, ಇದನ್ನು ಸುಳ್ಳು ಮಾಡಿದ ಅನೇಕರಿದ್ದಾರೆ. ಕಪಿಲ್ ಶರ್ಮಾ (Kapil Sharma) , ಸುನಿಲ್ ಗ್ರೋವರ್ ಸೇರಿ ಅನೇಕರು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ಇವರ್ಯಾರೂ ಬ್ರಹ್ಮಾನಂದಂನಷ್ಟು ಶ್ರೀಮಂತರಲ್ಲ ಅನ್ನೋದು ಅಚ್ಚರಿಯ ವಿಚಾರ. ಹೌದು, ಬ್ರಹ್ಮಾನಂದಂ ಅವರ ಆಸ್ತಿ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಅವರು ಅನೇಕ ಸ್ಟಾರ್ ಹೀರೋಗಳನ್ನೂ ಮೀರಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡ ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಬ್ರಹ್ಮಾನಂದಂ ಅವರು ತೆಲುಗು ಕಾಮಿಡಿಯನ್. ಅವರಿಗೆ ಈಗ 67 ವರ್ಷ ವಯಸ್ಸು. ಅವರು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 2009ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಪ್ರತಿ ಸಿನಿಮಾಗೆ ಅವರು ಒಂದರಿಂದ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಬ್ರಹ್ಮಾನಂದಂ ಅವರ ಒಟ್ಟೂ ಆಸ್ತಿ 490 ಕೋಟಿ ರೂಪಾಯಿ ಎನ್ನಲಾಗಿದೆ. ಅವರಿಗೆ ಪ್ರತಿ ತಿಂಗಳು 2 ಕೋಟಿ ರೂಪಾಯಿ ಸ್ಯಾಲರಿ ಸಿಗುತ್ತದೆ. ಕಪಿಲ್ ಶರ್ಮಾ ಅವರಿಗಿಂತಲೂ ಹೆಚ್ಚು ಸಂಭಾವನೆಯನ್ನು ಬ್ರಹ್ಮಾನಂದಂ ಪಡೆಯುತ್ತಾರೆ. ಬ್ರ್ಯಾಂಡ್​ಗಳ ಪ್ರಚಾರಕ್ಕೆ ಅವರು ಒಂದು ಕೋಟಿ ರೂಪಾಯಿ ಪಡೆಯುತ್ತಾರೆ.

ಬ್ರಹ್ಮಾನಂದ ಅವರ ಬಳಿ ಒಳ್ಳೆಯ ಕಾರ್ ಕಲೆಕ್ಷನ್ ಇದೆ. ಆಡಿ ಆರ್​8, ಆಡಿ ಕ್ಯೂ7, ಬೆಂಜ್ ಮೊದಲಾದ ಕಾರುಗಳು ಅವರ ಬಳಿ ಇವೆ. ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲಿ ಅವರು ಮನೆ ಹೊಂದಿದ್ದಾರೆ. ಅವರು ಈಗ ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ.

ಇದನ್ನೂ ಓದಿ: ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ ಖಚಿತ? 234 ವಿಧಾನಸಭಾ ಕ್ಷೇತ್ರಗಳ ಗುರಿ ಇಟ್ಟುಕೊಂಡ ನಟ

ಪರೇಶ್ ರಾವಲ್​ ಅವರ ಒಟ್ಟೂ ಆಸ್ತಿ 93 ಕೋಟಿ ರೂಪಾಯಿ ಇದೆ. ಕಪಿಲ್ ಶರ್ಮಾ ಅವರ ಆಸ್ತಿ 300 ಕೋಟಿ ರೂಪಾಯಿ ಮೇಲಿದೆ. ‘ದಿ ಕಪಿಲ್ ಶರ್ಮಾ’ ಶೋ ಮೂಲಕ ಅವರು ಫೇಮಸ್ ಆಗಿದ್ದಾರೆ.  ಜಾನಿ ಲಿವರ್ ಅವರು 90ರ ದಶಕದಲ್ಲಿ ಬೇಡಿಕೆಯ ನಟ ಆಗಿದ್ದರು. ಅವರು 225 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ರಾಜ್​ಪಾಲ್ ಯಾದವ್ ಅವರ ಆಸ್ತಿ 50 ಕೋಟಿ ರೂಪಾಯಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ