ಥಿಯೇಟರ್ನಲ್ಲಿ ಪ್ರಭಾಸ್ ಅಭಿಮಾನಿಗಳ ಪುಂಡಾಟ; ಕೋಪಗೊಂಡ ಫ್ಯಾನ್ಸ್ ಮಾಡಿದ ದಾಂಧಲೆ ನೋಡಿ
ಕನ್ನಡದಲ್ಲಿ ‘ಜೋಗಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಹೀರೋ ಆಗಿ ನಟಿಸಿದರು. ಪ್ರೇಮ್ ನಿರ್ದೇಶನಕ್ಕೆ ಜನರು ಮರುಳಾದರು. ಇದೇ ಭರವಸೆ ಮೇಲೆ ತೆಲುಗಿಗೆ ಚಿತ್ರವನ್ನು ರಿಮೇಕ್ ಮಾಡಲಾಯಿತು. ಪ್ರಭಾಸ್ ಈ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಫ್ಲಾಪ್ ಆಯಿತು.
ಪ್ರಭಾಸ್ ಅವರು ಸದ್ಯ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ‘ಬಾಹುಬಲಿ 2’ ಬಳಿಕ ರಿಲೀಸ್ ಆದ ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ (Adipurush Movie) ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲು ವಿಫಲವಾದವು. ಈಗ ಅವರು ಮೂರು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈ ಮಧ್ಯೆ ಅವರ ನಟನೆಯ ಅಟ್ಟರ್ ಫ್ಲಾಪ್ ಸಿನಿಮಾ ‘ಯೋಗಿ’ (Yogi Movie) ರೀ-ರಿಲೀಸ್ ಆಗಿದೆ. ಈ ಸಿನಿಮಾ ಪ್ರದರ್ಶನ ಅರ್ಧಕ್ಕೆ ನಿಂತಿದ್ದರಿಂದ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಥಿಯೇಟರ್ನ ಪ್ರಾಪರ್ಟಿಗಳನ್ನು ಹಾಳು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡದಲ್ಲಿ ‘ಜೋಗಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಹೀರೋ ಆಗಿ ನಟಿಸಿದರು. ಪ್ರೇಮ್ ನಿರ್ದೇಶನಕ್ಕೆ ಜನರು ಮರುಳಾದರು. ತಾಯಿ-ಮಗನ ಸೆಂಟಿಮೆಂಟ್ ಹೈಲೈಟ್ ಆಯಿತು. ಸಾಂಗ್ಗಳು ಭರ್ಜರಿ ಹಿಟ್ ಆದವು. ಇದೇ ಭರವಸೆ ಮೇಲೆ ತೆಲುಗಿಗೆ ಚಿತ್ರವನ್ನು ರಿಮೇಕ್ ಮಾಡಲಾಯಿತು. ಪ್ರಭಾಸ್ ಈ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಫ್ಲಾಪ್ ಆಯಿತು. ಅಚ್ಚರಿ ಎಂದರೆ ಈ ಚಿತ್ರವನ್ನು ಇತ್ತೀಚೆಗೆ ರೀ-ರಿಲೀಸ್ ಮಾಡಲಾಗಿದೆ.
ಹೈದರಾಬಾದ್ನ ಸುದರ್ಶನ್ ಥಿಯೇಟರ್ನಲ್ಲಿ ‘ಯೋಗಿ’ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆದರೆ, ಸಿನಿಮಾ ಪ್ರದರ್ಶನ ಏಕಾಏಕಿ ನಿಂತಿದೆ. ಇದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಬ್ಲೇಡ್ನಿಂದ ಥಿಯೇಟರ್ ಸ್ಕ್ರಿನ್ಗೆ ಹಾನಿ ಮಾಡಿದ್ದಾರೆ. ಅಷ್ಟೇ ಅಲ್ಲ ಥಿಯೇಟರ್ ಆವರಣದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
Frustrated Prabhas fans are damaging theatre property because #Rogi4K failed to cross even the parking collections of previous re-releases.
The cost of theatre damage is greater than the overall collections collected by ROGI till now.”pic.twitter.com/eNO1XiYiw3
— HNE Official™ (@urstrulyHNE) August 18, 2023
ಇದನ್ನೂ ಓದಿ: ಪ್ರಭಾಸ್ ಎದುರು ನಾಯಕಿಯಾಗಿ ಬೆಂಗಳೂರಲ್ಲಿ ಬೆಳೆದ ಹುಡುಗಿ: ಯಾವ ಸಿನಿಮಾ?
ಈ ಘಟನೆಯನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ‘ಯೋಗಿ ಸಿನಿಮಾ ನೋಡಿ ಫ್ರಸ್ಟ್ರೇಟ್ ಆದ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ. ಕಳೆದ ಬಾರಿ ರಿಲೀಸ್ ಆದಾಗ ಎಷ್ಟು ಪಾರ್ಕಿಂಗ್ ಕಲೆಕ್ಷನ್ ಆಗಿತ್ತೋ ಆ ಮೊತ್ತ ಕೂಡ ರೀ-ರಿಲೀಸ್ನಿಂದ ಬಂದಿಲ್ಲ’ ಎಂದು ಅನೇಕರು ಟೀಕೆ ಮಾಡಿದ್ದಾರೆ.
ಪ್ರಭಾಸ್ ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಆಗಿದ್ದಾರೆ. ಸೆಪ್ಟೆಂಬರ್ 28ರಂದು ‘ಸಲಾರ್’ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ .
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 am, Sat, 19 August 23