ಹೈದರಾಬಾದ್​ನಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ ಶಿವಣ್ಣ; ಸಮಾಧಾನ ಮಾಡಿದ ಬಾಲಯ್ಯ

‘ವೇದ’ ಸಿನಿಮಾ ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಫೆಬ್ರವರಿ 9ಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ತೆಲುಗಿನಲ್ಲಿ ಅಬ್ಬರದ ಪ್ರಚಾರ ನೀಡಲಾಗುತ್ತಿದೆ.

ಹೈದರಾಬಾದ್​ನಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ ಶಿವಣ್ಣ; ಸಮಾಧಾನ ಮಾಡಿದ ಬಾಲಯ್ಯ

Updated on: Feb 08, 2023 | 11:22 AM

ಶಿವರಾಜ್​ಕುಮಾರ್ (Shivarajkumar)  ಹಾಗೂ ಪುನೀತ್ ರಾಜ್​ಕುಮಾರ್ ನಡುವೆ ಎಷ್ಟು ಆಪ್ತತೆ ಇತ್ತು ಅನ್ನೋದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ. ಅಪ್ಪುನ ಕಳೆದುಕೊಂಡ ನಂತರದಲ್ಲಿ ಶಿವರಾಜ್​ಕುಮಾರ್ ತುಂಬಾನೇ ದುಃಖಿತರಾಗಿದ್ದಾರೆ. ಪ್ರತಿ ವೇದಿಕೆ ಮೇಲೆ ಅಪ್ಪುನ ನೆನಪಿಸಿಕೊಂಡು ಶಿವಣ್ಣ ಭಾವುಕರಾಗುತ್ತಾರೆ. ಈಗ ಹಾಗೆಯೇ ಆಗಿದೆ. ಹೈದರಾಬಾದ್​ನಲ್ಲಿ ನಡೆದ ‘ವೇದ’ ಸಿನಿಮಾದ (Vedha Movie) ಪ್ರೀ-ರಿಲೀಸ್ ಇವೆಂಟ್​ನಲ್ಲಿ ಶಿವಣ್ಣ ಅವರು ಪುನೀತ್ ನೆನೆದು ಭಾವುಕರಾದರು. ಪಕ್ಕದಲ್ಲಿದ್ದ ನಂದಮೂರಿ ಬಾಲಕೃಷ್ಣ ಅವರು ಶಿವರಾಜ್​ಕುಮಾರ್ ಅವರನ್ನು ಸಮಾಧಾನ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ವೇದ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದು ಮೆಚ್ಚುಗೆ ಪಡೆಯಿತು. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಈ ಚಿತ್ರ ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಫೆಬ್ರವರಿ 9ಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ತೆಲುಗಿನಲ್ಲಿ ಅಬ್ಬರದ ಪ್ರಚಾರ ನೀಡಲಾಗುತ್ತಿದೆ.

‘ವೆದ’ ತೆಲುಗು ವರ್ಷನ್​ನ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 7ರಂದು ಹೈದರಾಬಾದ್​ನಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಪುನೀತ್ ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಇದನ್ನು ನೋಡುತ್ತಿದ್ದಂತೆ ಶಿವಣ್ಣ ಅವರಿಗೆ ದುಃಖ ತಡೆಯಲು ಆಗಲೇ ಇಲ್ಲ. ಒಂದೇ ಸಮನೆ ಕಣ್ಣೀರು ಹಾಕಿದರು. ಬಾಲಯ್ಯ ಅವರು ಸಮಾಧಾನ ಮಾಡಲು ಪ್ರಯತ್ನಿಸಿದರು.

ಇದನ್ನೂ ಓದಿ: ಒಟಿಟಿಗೆ ಕಾಲಿಡೋಕೆ ರೆಡಿ ಆದ ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರ; ಇಲ್ಲಿದೆ ವಿವರ

ಶಿವರಾಜ್​ಕುಮಾರ್ ಅವರ ‘ವೇದ’ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಚಿತ್ರ. ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಎ. ಹರ್ಷ ಹಾಗೂ ಶಿವರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ. ಈ ಎಲ್ಲಾ ಕಾರಣದಿಂದಲೂ ಚಿತ್ರಕ್ಕೆ ಸಾಕಷ್ಟು ಹೈಪ್ ಸಿಕ್ಕಿತ್ತು. ಈಗ ಈ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us